ಕ್ರಿಕೆಟ್

ಭಾರತ ವರ್ಸಸ್ ಆಸ್ಟ್ರೇಲಿಯಾ: ಮಹಿಳೆಯರ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ಮಳೆ ಕಾಟ, ಭಾರತ 114/1

Srinivasamurthy VN

ಗೋಲ್ಡ್ ಕೋಸ್ಟ್: ಭಾರತ ಮತ್ತು ಆಸ್ಟ್ರೇಲಿಯಾ ಮಹಿಳೆಯರ ತಂಡಗಳ ನಡುವಿನ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ಮಳೆ ಕಾಟ ಆರಂಭವಾಗಿದ್ದು, ಈ ವೇಳೆ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ನಡೆಸುತ್ತಿರುವ ಭಾರತ ತಂಡ1 ವಿಕೆಟ್ ನಷ್ಟಕ್ಕೆ 114 ರನ್ ಗಳಿಸಿದೆ.

ಆಸಿಸ್ ಪ್ರವಾಸದಲ್ಲಿರುವ ಭಾರತ ತಂಡ ಆಡುತ್ತಿರುವ ಹಗಲು-ರಾತ್ರಿ ಮತ್ತು ಏಕೈಕ ಟೈಸ್ಟ್ ಪಂದ್ಯ ಇದಾಗಿದೆ. ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಈ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಆಸಿಸ್ ವನಿತೆಯರ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ವನಿತೆಯರ ತಂಡಕ್ಕೆ ಆರಂಭಿಕರಾದ ಸ್ಮೃತಿ ಮಂದಾನ ಮತ್ತು ಶಫಾಲಿ ವರ್ಮಾ ಭರ್ಜರಿ ಆರಂಭ ಒದಗಿಸಿದರು. 

80ರನ್ ಗಳಿಸಿರುವ ಮಂದಾನ ಶತಕದ ಹೊಸ್ತಿಲಲ್ಲಿದ್ದು, 31 ರನ್ ಗಳಿಸಿ ಶಫಾಲಿ ವರ್ಮಾ ವಿಕೆಟ್ ಒಪ್ಪಿಸಿದ್ದಾರೆ. ಇದೀಗ ಪೂನಂ ರಾವತ್ ಅವರು ಮಂದಾನ ಅವರ ಜೊತೆಗೂಡಿದ್ದು, 16 ರನ್ ಗಳಿಸಿದ್ದಾರೆ.

ಇತ್ತೀಚಿನ ವರದಿಗಳು ಬಂದಾಗ ಭಾರತ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 1 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿದ್ದು, 80 ರನ್ ಗಳಿಸಿರುವ ಸ್ಮೃತಿ ಮಂದಾನ ಮತ್ತು 16ರನ್ ಗಳಿಸಿರುವ ಪೂನಂ ರಾವತ್ ಕ್ರೀಸ್ ಕಾಯ್ದುಕೊಂಡಿದ್ದಾರೆ.
 

SCROLL FOR NEXT