ಕ್ರಿಕೆಟ್

ಟಿ20 ಆಲ್ ರೌಂಡರ್ ಶ್ರೇಯಾಂಕ: 5 ನೇ ಸ್ಥಾನಕ್ಕೇರಿ ವೃತ್ತಿ ಜೀವನದ ಅತ್ಯುತ್ತಮ ಸಾಧನೆ ಮಾಡಿದ ಹಾರ್ದಿಕ್ ಪಾಂಡ್ಯ 

Srinivas Rao BV

ದುಬೈ: ಭಾರತದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಟಿ20 ಶ್ರೇಯಾಂಕದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದು 5 ನೇ ಸ್ಥಾನಕ್ಕೇರಿದ್ದಾರೆ. 

ಆ.31 ರಂದು ಟಿ20 ಶ್ರೇಯಾಂಕ ಬಿಡುಗಡೆಯಾಗಿದ್ದು, ಹಾರ್ದಿಕ್ ಪಾಂಡ್ಯ ತಮ್ಮ ವೃತ್ತಿ ಜೀವನದಲ್ಲಿ ಅತ್ಯುತ್ತಮ ಸ್ಥಾನಕ್ಕೇರಿದ್ದಾರೆ. ದುಬೈ ನಲ್ಲಿ ನಡೆದ ಏಷ್ಯಾ ಕಪ್-2022 ರ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಉತ್ತಮ ಆಟ ಪ್ರದರ್ಶಿಸಿದ್ದರು.

25 ರನ್ ನೀಡಿ 3 ವಿಕೆಟ್ ಗಳಿಸಿ, 17 ಎಸೆತಗಳಲ್ಲಿ ಅಜೇಯ 33 ರನ್ ಗಳನ್ನು ಪಾಂಡ್ಯ ಗಳಿಸಿದ್ದರು. ಈ ಪಂದ್ಯದಲ್ಲಿ ಪಾಕ್ ವಿರುದ್ಧ ಭಾರತ 5 ವಿಕೆಟ್ ಗಳ ಜಯ ಗಳಿಸಿತ್ತು. 

ಹಾರ್ದಿಕ್ ಪಾಂಡ್ಯ ಅವರ ಪ್ರದರ್ಶನ, ವರ್ಷಾಂತ್ಯಕ್ಕೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವ ಕಪ್ ಟೂರ್ನಿಗೂ ಮಹತ್ವದ್ದಾಗಿರಲಿದೆ. 

ಇದೇ ವೇಳೆ ಅಫ್ಘಾನಿಸ್ಥಾನದ ಕೆಲವು ಆಟಗಾರರೂ ಸಹ ತಮ್ಮ ಶ್ರೇಯಾಂಕವನ್ನು ಹೆಚ್ಚಿಸಿಕೊಂಡಿದ್ದಾರೆ. ರಶೀದ್ ಖಾನ್ 708 ಅಂಕಗಳನ್ನು ಗಳಿಸಿದ್ದು, 716 ಅಂಕಗಳೊಂದಿಗೆ ನಂತರದ ಸ್ಥಾನದಲ್ಲಿ ಲೆಗ್ ಸ್ಪಿನ್ನರ್ ಗಳಾದ ಆದಿಲ್ ರಶೀದ್ ಹಾಗೂ ಆಡಮ್ ಜಾಂಬ ಇದ್ದಾರೆ. 

ರಶೀದ್ ಅವರ ಸ್ಪರ್ಧಿ ಮುಜೀಬ್ ಉರ್ ರೆಹಮಾನ್ ಟಾಪ್-10 ಕ್ಕೆ ಪ್ರವೇಶಿದಿದ್ದು 7 ನೇ ಸ್ಥಾನದಲ್ಲಿದ್ದಾರೆ. 8 ನೇ ಸ್ಥಾನದಲ್ಲಿ ಭುವನೇಶ್ವರ್ ಕುಮಾರ್ ಇದ್ದಾರೆ. ಟಿ 20 ಬ್ಯಾಟಿಂಗ್ ನ ಟಾಪ್ 10 ರ ವಿಭಾಗದಲ್ಲಿ ಹೊಸಬರು ಸ್ಥಾನ ಪಡೆದಿದ್ದಾರೆ. 

SCROLL FOR NEXT