ಕ್ರಿಕೆಟ್

ಬಾಂಗ್ಲಾದೇಶ ವಿರುದ್ಧ ಏಕದಿನ ಸರಣಿ: ಮೊದಲ ಪಂದ್ಯದಲ್ಲಿ ಕೇವಲ 186 ರನ್ ಗಳಿಗೆ ಭಾರತ ಆಲೌಟ್!

Nagaraja AB

ಮೀರಪುರ್:  ಇತ್ತೀಚಿಗೆ  ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಕಳೆದುಕೊಂಡಿದ್ದ ಭಾರತದ ಕಳಪೆ ಪ್ರದರ್ಶನ ಬಾಂಗ್ಲಾದೇಶದಲ್ಲೂ ಮುಂದುವರೆದಿದೆ. ಇಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಏಕದಿನ  ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 41.2 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 186 ರನ್ ಗಳಿಸಿದೆ.

ಭಾರತ ವಿರುದ್ಧ ಟಾಸ್‌ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ನಾಯಕನ ನಿರ್ಧಾರಕ್ಕೆ ತಕ್ಕಂತೆ ಬಾಂಗ್ಲಾ ಆಟಗಾರರು ಆಟವಾಡಿದ್ದಾರೆ. ಅದರಲ್ಲೂ ಮಾರಕ ಬೌಲಿಂಗ್ ದಾಳಿ ನಡೆಸಿದ ಶಕೀಬ್ ಅಲ್ ಹಸನ್ ಐದು ವಿಕೆಟ್ ಕಬಳಿಸುವ ಮೂಲಕ ಭಾರತಕ್ಕೆ ಕಂಟಕವಾಗಿ ಪರಿಣಮಿಸಿದರು.

ಭಾರತದ ಪರ ಕೆಎಲ್ ರಾಹುಲ್ ಹೊರತುಪಡಿಸಿದರೆ ಉಳಿದ ಯಾವುದೇ ಆಟಗಾರರು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲಲಿಲ್ಲ. ನಾಯಕ ರೋಹಿತ್ ಶರ್ಮಾ 27 ರನ್ ಗಳಿಸಿದರೆ, ಶಿಖರ್ ಧವನ್ 7, ವಿರಾಟ್ ಕೊಹ್ಲಿ 9, ಶ್ರೇಯಸ್ ಅಯ್ಯರ್ 24, ವಾಷಿಂಗ್ಟನ್ ಸುಂದರ್ 19, ಶಾರ್ದೂಲ್ ಠಾಕೂರ್ 2, ಮೊಹಮ್ಮದ್ ಸಿರಾಜು 9, ಕುಲದೀಪ್ ಸೇನ್ ಕೇವಲ 2 ರನ್ ಗಳಿಸಿದರು. ಇದರಿಂದಾಗಿ ಕೇವಲ 186 ರನ್ ಗಳಿಗೆ ಟೀಂ ಇಂಡಿಯಾ ಆಲ್ ಔಟ್ ಆಯಿತು. ಪ್ರಸ್ತುತ ಬಾಂಗ್ಲಾದೇಶ ಬ್ಯಾಟಿಂಗ್ ಮುಂದುವರೆಸಿದ್ದು, 5 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 15 ರನ್ ಗಳಿಸಿತ್ತು.

SCROLL FOR NEXT