ಕ್ರಿಕೆಟ್

2ನೇ ಏಕದಿನ ಪಂದ್ಯ: ಟಾಸ್ ಗೆದ್ದ ಬಾಂಗ್ಲಾದೇಶ ಬ್ಯಾಟಿಂಗ್ ಆಯ್ಕೆ, ಟೀಂ ಇಂಡಿಯಾಗೆ ಮರಳಿದ ಉಮ್ರಾನ್ ಮಲ್ಲಿಕ್

Srinivasamurthy VN

ಢಾಕಾ: ಭಾರತದ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಭಾರತ ತಂಡಕ್ಕೆ ವೇಗಿ ಉಮ್ರಾನ್ ಮಲ್ಲಿಕ್ ವಾಪಸ್ ಆಗಿದ್ದಾರೆ.

3 ಪಂದ್ಯಗಳ ಏಕದಿನ ಸರಣಿಯಲ್ಲಿ ಈಗಾಗಲೇ ಮೊದಲ ಪಂದ್ಯದಲ್ಲಿ ಭಾರತ ಸೋಲು ಕಂಡು ಸರಣಿಯಲ್ಲಿ 1-0 ಹಿನ್ನಡೆ ಅನುಭವಿಸಿದ್ದು, ಟೂರ್ನಿಯಲ್ಲಿ 2ನೇ ಪಂದ್ಯಗೆದ್ದು ಸಮಬಲ ಸಾಧಿಸಲು ಹಾತೊರೆಯುತ್ತಿದೆ. ಈಗಾಗಲೇ ಮೊದಲ ಪಂದ್ಯ ಗೆದ್ದಿರುವ ಬಾಂಗ್ಲಾದೇಶ ತಂಡ 2ನೇ ಪಂದ್ಯ ಗೆದ್ದು ಸರಣಿ ಕೈವಶ ಮಾಡಿಕೊಳ್ಳಲು ಹವಣಿಸುತ್ತಿದ್ದು, ಉಭಯ ತಂಡಗಳಿಂದ ಇಂದು ಜಿದ್ದಾಜಿದ್ದಿನ ಪೈಪೋಟಿ ಏರ್ಪಡುವ ನಿರೀಕ್ಷೆ ಇದೆ.

ಇನ್ನು ಇಂದಿನ ಪಂದ್ಯಕ್ಕೆ ಭಾರತ ತಂಡಕ್ಕೇ ವೇಗಿ ಉಮ್ರಾನ್ ಮಲ್ಲಿಕ್ ವಾಪಸ್ ಆಗಿದ್ದು, ಅಕ್ಸರ್ ಪಟೇಲ್ ಕೂಡ ತಂಡ ಸೇರಿಕೊಂಡಿದ್ದಾರೆ. ಈ ಹಿಂದೆ ಮೊದಲ ಪಂದ್ಯವನ್ನಾಡಿದ್ದ ಶಾಹ್ಬಾಜ್ ಅಹ್ಮದ್ ಮತ್ತು ಕುಲ್ದೀಪ್ ಸೇನ್ ರನ್ನು 2ನೇ ಪಂದ್ಯದಿಂದ ಕೈಬಿಡಲಾಗಿದ್ದು, ಇವರ ಬದಲಿಗೆ ಈ ಇಬ್ಬರು ಆಟಗಾರರಿಗೆ ಸ್ಥಾನ ಕಲ್ಪಿಸಲಾಗಿದೆ.

ಇನ್ನು ಬಾಂಗ್ಲಾದೇಶ ತಂಡ ಮೊದಲ ಪಂದ್ಯವನ್ನಾಡಿದ್ದ ಅದೇ ತಂಡವನ್ನು ಇಂದೂ ಕೂಡ ಕಣಕ್ಕಿಳಿಸಿದೆ.

ತಂಡಗಳು ಇಂತಿವೆ.
ಭಾರತ: 

ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ಅಕ್ಸರ್ ಪಟೇಲ್, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲ್ಲಿಕ್

ಬಾಂಗ್ಲಾದೇಶ: 
ಲಿಟನ್ ಕುಮಾರ್ ದಾಸ್ (ನಾಯಕ), ಅನಾಮುಲ್ ಹೇಗ್ ಬಿಜಯ್, ನಜ್ಮುಲ್ ಹುಸೇನ್ ಶಾಂತೊ, ಶಕೀಬ್ ಅಲ್ ಹಸನ್, ಮುಷ್ಫಿಕುರ್ ರಹೀಮ್, ಮೆಹಮೂದ್ ಉಲ್ಲಾಹ, ಅಫಿಫ್ ಹುಸೇನ್, ಮೆಹದಿ ಹಸನ್ ಮಿರಾಜ್, ಹಸನ್ ಮೆಹಮೂದ್, ಮುಸ್ತಫಿಜುರ್ ರೆಹಮಾನ್, ಇಬಾದತ್ ಹುಸೇನ್ ಚೌಧರಿ
 

SCROLL FOR NEXT