ಕ್ರಿಕೆಟ್

ಸಿಎಸ್‌ಕೆ ತಂಡಕ್ಕೆ 18 ವರ್ಷದ ಗುಂಟೂರಿನ ಹುಡುಗ ಸೇರ್ಪಡೆ!

Vishwanath S

ಚೆನ್ನೈ: ಮೊದಲ ಬಾರಿಗೆ ಗುಂಟೂರಿನ ಕ್ರಿಕೆಟಿಗನೊಬ್ಬ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಗೆ ಆಯ್ಕೆಯಾಗಿದ್ದಾರೆ. ಕೇರಳದ ಕೊಚ್ಚಿಯಲ್ಲಿ 405 ಆಟಗಾರರ ಮಿನಿ-ಹರಾಜು ಅಂತ್ಯಗೊಂಡಿದೆ. ಚೆನ್ನೈ ಸೂಪರ್ ಕಿಂಗ್ಸ್(CSK) ತಂಡ ಪ್ರವೇಶಿಸಿದ ಅತೀ ಕಿರಿಯ ಆಟಗಾರ ಶೇಖ್ ರಶೀದ್ ಆಗಿದ್ದಾರೆ.

2004ರ ಸೆಪ್ಟೆಂಬರ್ 24ರಂದು ಗುಂಟೂರಿನಲ್ಲಿ ಜನಿಸಿದ ರಶೀದ್ ಆಂಧ್ರ ಪ್ರೀಮಿಯರ್ ಲೀಗ್ 2022ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಇದಲ್ಲದೆ ಬಹುಶಃ ಭಾರತ ಅಂಡರ್-19 ವಿಶ್ವಕಪ್ ಗೆಲ್ಲುವಲ್ಲಿ ಮತ್ತು ತಂಡದ ಉಪನಾಯಕನಾಗಿ ಅವರ ಪ್ರಮುಖ ಪಾತ್ರ CSK ಫ್ರಾಂಚೈಸಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಸ್ತುತ ತಮಿಳುನಾಡು ಪರ ರಣಜಿ ಟ್ರೋಫಿ ಆಡುತ್ತಿರುವ 18 ವರ್ಷದ ಆಟಗಾರ ಮೂಲ ಬೆಲೆ 20 ಲಕ್ಷಕ್ಕೆ ಸಹಿ ಹಾಕಿದ್ದಾರೆ. ರಶೀದ್ ಆಲ್ ರೌಂಡರ್ ಎಂಎಸ್ ಧೋನಿಯ ಕಟ್ಟಾ ಅಭಿಮಾನಿಯೂ ಹೌದು. 15 ಕ್ರಿಕೆಟಿಗರ ತಂಡವನ್ನು ಅಂತಿಮಗೊಳಿಸಿದ ನಂತರವಷ್ಟೇ ರಶೀದ್‌ಗೆ ರೋಲ್ ಮಾಡೆಲ್ ಜೊತೆ ಆಡುವ ಅವಕಾಶ ಸಿಗುತ್ತದೆಯೇ ಅಥವಾ ಇಲ್ಲವೇ ಎಂಬುದು ತಿಳಿಯಲಿದೆ. 

ಆರ್ಥಿಕ ಸಂಕಷ್ಟದ ನಡುವೆಯೂ ಕ್ರಿಕೆಟ್ ಪ್ರೇಮಿ ಆಗಿರುವ ರಶೀದ್ ತಂದೆ ಶೇಖ್ ಬಾಲಿಶಾ ವಾಲಿ, ಕಷ್ಟದಲ್ಲೂ ಮಗನಿಗೆ ಕೋಚಿಂಗ್ ಕೊಡಿಸಿದ್ದರು. 'ಅವನು ತನ್ನ ಕನಸನ್ನು ನನಸಾಗಿಸಿಕೊಳ್ಳುತ್ತಿರುವುದಕ್ಕೆ ನಮಗೆ ತುಂಬಾ ಸಂತೋಷವಾಗಿದೆ. ಆತ ತುಂಬಾ ಉತ್ಸಾಹದಿಂದ ಕ್ರಿಕೆಟ್ ಆಡುತ್ತಿರುವುದನ್ನು ನೋಡಿದಾಗ, ನಾನು ಅವನನ್ನು ಬೆಂಬಲಿಸಲು ಮತ್ತು ವೃತ್ತಿಪರ ತರಬೇತಿಗೆ ಕಳುಹಿಸಲು ನಿರ್ಧರಿಸಿದೆ. ನಮಗೆ ಬೇರೆ ಯಾವುದೇ ಆಲೋಚನೆಗಳು ಇರಲಿಲ್ಲ, ಅವನು ತುಂಬಾ ಕಷ್ಟಪಟ್ಟಿದ್ದು ಅವನನ್ನು ಇಲ್ಲಿಯವರೆಗೂ ತಂದಿದೆ ಎಂದರು. 

ನನ್ನ ಮಗ ಆರು ವರ್ಷದವನಿದ್ದಾಗ ಗಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದಾಗಿನಿಂದ ಆತನಿಗೆ ಧೋನಿ ಎಂದರೆ ಅಚ್ಚುಮೆಚ್ಚು. ಈಗ ಅವರೊಂದಿಗೆ ಆಡಲು ಅವಕಾಶ ಪಡೆದಿದ್ದು ಅವನ ಕನಸು ನನಸಾಗಿದೆ ಎಂದರು.
 

SCROLL FOR NEXT