ಕ್ರಿಕೆಟ್

ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು: ಯುಎಇಯಲ್ಲಿ ಏಷ್ಯಾ ಕಪ್ ಆಯೋಜನೆ, ದಿನಾಂಕ ಫಿಕ್ಸ್!

Vishwanath S

2022ರ ಏಷ್ಯಾ ಕಪ್ ಶ್ರೀಲಂಕಾದಲ್ಲಿ ನಡೆಯಬೇಕಿತ್ತು. ಆದರೆ ಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಏಷ್ಯಾಕಪ್ ಅನ್ನು ಯುಎಇಯಲ್ಲಿ ನಡೆಸಲು ಏಷ್ಯಾ ಕ್ರಿಕೆಟ್ ಕೌನ್ಸಿಲ್ ನಿರ್ಧರಿಸಿದೆ. 

ಲಂಕಾದಲ್ಲೇ ಟೂರ್ನಿ ನಡೆಸಲು ಸರ್ವ ಪ್ರಯತ್ನ ಮಾಡಿದ್ದೇವು. ಆದರೆ ಅದು ಅಸಾಧ್ಯ ಎಂದು ತಿಳಿದ ಬಳಿಕವೇ ಟೂರ್ನಿಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ಸ್ಥಳಾಂತರಿಸಲಾಗಿದೆ. ಇನ್ನು ಟೂರ್ನಿ ಆಯೋಜನೆ ಹಕ್ಕು ಲಂಕ ಬಳಿಯೇ ಇರಲಿದೆ ಎಂದು ಏಷ್ಯಾ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಜೈಶಾ ಹೇಳಿದ್ದಾರೆ. 

ಐಸಿಸಿ ವಿಶ್ವಕಪ್ ಟೂರ್ನಿ ವರ್ಷಾಂತ್ಯದಲ್ಲಿ ನಡೆಯಲಿದ್ದು ಏಷ್ಯಾ ಕಪ್ ಟೂರ್ನಿ ನಡೆಯುವುದು ಏಷ್ಯಾ ರಾಷ್ಟ್ರಗಳ ಸಮರಾಭ್ಯಾಸ ಅತೀ ಮುಖ್ಯವಾಗಿದೆ. ಇನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ಮತ್ತು ಎಮಿರೇಟ್ಸ್ ಕ್ರಿಕೆಟ್ ಮಂಡಳಿ ನಡುವಿನ ತಿಳುವಳಿಕೆ ಮತ್ತು ಸಹಕಾರಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ ಎಂದರು. 

ಏಷ್ಯಾಕಪ್ ಟೂರ್ನಿ ಯುಎಇಯಲ್ಲಿ ಆಗಸ್ಟ್ 27 ರಿಂದ ಸೆಪ್ಟೆಂಬರ್ 11ರವರೆಗೆ ನಡೆಯಲಿದೆ. 

2018ರಲ್ಲಿ ಕೊನೆಯದಾಗಿ ಏಷ್ಯಾಕಪ್ ಟೂರ್ನಿ ನಡೆದಿದ್ದು ಟಿ20 ಮಾದರಿಯಲ್ಲಿ ನಡೆದಿತ್ತು. ಇನ್ನು ಈ ಬಾರಿ ಒಂಬತ್ತು ತಂಡಗಳು ಭಾಗವಹಿಸಲಿವೆ. ಯುಎಇ, ಕುವೈತ್, ಸಿಂಗಾಪುರ್ ಮತ್ತು ಹಾಂಗ್ ಕಾಂಗ್ ಅರ್ಹತಾ ಸುತ್ತನ್ನು ಆಡಲಿದ್ದು, ವಿಜೇತರು ಭಾರತ, ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶವನ್ನು ಮುಖ್ಯ ಪಂದ್ಯಾವಳಿಯಲ್ಲಿ ಸೇರಿಕೊಳ್ಳುತ್ತಾರೆ.

SCROLL FOR NEXT