ಐಪಿಎಲ್ 
ಕ್ರಿಕೆಟ್

ಐಪಿಎಲ್ ಮಾಧ್ಯಮ ಹಕ್ಕು 48,390 ಕೋಟಿ ರೂ. ಗೆ ಮಾರಾಟ: ಸ್ಟಾರ್ ಇಂಡಿಯಾ, ವಯಾಕಾಮ್ 18, ಟೈಮ್ಸ್ ಇಂಟರ್‌ನೆಟ್‌ ಪಾಲು!

ಐದು ವರ್ಷಗಳ ಐಪಿಎಲ್ ಮಾಧ್ಯಮ ಹಕ್ಕುಗಳನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಬರೋಬ್ಬರಿ 48,390 ಕೋಟಿ(6.20 ಶತಕೋಟಿ ಡಾಲರ್)ಗೆ ಮಾರಾಟ ಮಾಡುವ ಮೂಲಕ ಐಪಿಎಲ್ ಜಗತ್ತಿನ ಶ್ರೀಮಂತ ಕ್ರಿಕೆಟ್ ಟೂರ್ನಿ ಎಂಬುದನ್ನು ಮತ್ತೆ ಸಾಬೀತುಪಡಿಸಿದೆ.

ನವದೆಹಲಿ: ಐದು ವರ್ಷಗಳ ಐಪಿಎಲ್ ಮಾಧ್ಯಮ ಹಕ್ಕುಗಳನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಬರೋಬ್ಬರಿ 48,390 ಕೋಟಿ(6.20 ಶತಕೋಟಿ ಡಾಲರ್)ಗೆ ಮಾರಾಟ ಮಾಡುವ ಮೂಲಕ ಐಪಿಎಲ್ ಜಗತ್ತಿನ ಶ್ರೀಮಂತ ಕ್ರಿಕೆಟ್ ಟೂರ್ನಿ ಎಂಬುದನ್ನು ಮತ್ತೆ ಸಾಬೀತುಪಡಿಸಿದೆ.

ಸ್ಟಾರ್ ಇಂಡಿಯಾ ಟಿವಿ ಹಕ್ಕುಗಳನ್ನು 23,575 ಕೋಟಿ ರೂ.(ಪ್ರತಿ ಪಂದ್ಯಕ್ಕೆ 57.5 ಕೋಟಿ)ಗೆ ಖರೀದಿಸಿದ್ದರೆ ಹೆಚ್ಚು ಬೇಡಿಕೆಯಿರುವ ಭಾರತದ ಡಿಜಿಟಲ್ ಹಕ್ಕುಗಳ ಒಪ್ಪಂದವನ್ನು ರಿಲಯನ್ಸ್ ಬೆಂಬಲಿತ ವಯಾಕಾಮ್ 18 20,500 ಕೋಟಿ ರೂಪಾಯಿಗೆ ಸ್ವಾಧೀನಪಡಿಸಿಕೊಂಡಿದೆ. 2991 ಕೋಟಿ ರೂ.ಗಳನ್ನು ಪಾವತಿಸುವ ಮೂಲಕ ಮಹತ್ವದಲ್ಲದ-ಪ್ಯಾಕೇಜ್ ಸಿ ಅನ್ನು ಪಡೆದುಕೊಂಡಿದೆ.

ಪ್ಯಾಕೇಜ್ A ಮತ್ತು B ಗಾಗಿ ಒಪ್ಪಂದವು ಐದು ವರ್ಷಗಳಲ್ಲಿ ಒಟ್ಟಾರೆ 410 ಪಂದ್ಯಗಳಿಗೆ ಸೀಮಿತವಾಗಿದೆ. ಇನ್ನು 2023 ಮತ್ತು 2024 ರಲ್ಲಿ ತಲಾ 74 ಪಂದ್ಯ ಹಾಗೂ 2025 ಮತ್ತು 2026ರಲ್ಲಿ ತಲಾ 84 ಪಂದ್ಯಗಳು ನಡೆಯಲಿದ್ದರೆ, 2027ರ ಆವೃತ್ತಿಯಲ್ಲಿ 94 ಪಂದ್ಯಗಳು ನಡೆಯಲಿವೆ. ಸ್ಟಾರ್ ಇಂಡಿಯಾದ ಮಾಜಿ ಮುಖ್ಯಸ್ಥ ಉದಯ್ ಶಂಕರ್(ಬೋಧಿ ಟ್ರೀ) ಮತ್ತು ಜೇಮ್ಸ್ ಮುರ್ಡೋಕ್ (ಲುಪಾ ಸಿಸ್ಟಮ್ಸ್) ಹೊಂದಿರುವ ಒಕ್ಕೂಟದ ಮೂಲಕ Viacom18 ಕಣಕ್ಕೆ ಪ್ರವೇಶಿಸಿತು.

ಸ್ಟಾರ್ ಇಂಡಿಯಾ 23,575 ಕೋಟಿ ರೂಪಾಯಿಗಳ ಬಿಡ್‌ನೊಂದಿಗೆ ಟಿವಿ ಹಕ್ಕುಗಳನ್ನು ಗೆದ್ದಿದೆ ಎಂದು ಘೋಷಿಸಲು ನಾನು ರೋಮಾಂಚನಗೊಂಡಿದ್ದೇನೆ. ಎರಡು ಸಾಂಕ್ರಾಮಿಕ ವರ್ಷಗಳ ಹೊರತಾಗಿಯೂ ಬಿಸಿಸಿಐನ ಸಾಂಸ್ಥಿಕ ಸಾಮರ್ಥ್ಯಗಳಿಗೆ ಈ ಬಿಡ್ ನೇರ ಸಾಕ್ಷಿಯಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವೀಟ್ ಮಾಡಿದ್ದಾರೆ.

ಆರಂಭದಿಂದಲೂ, ಐಪಿಎಲ್ ಬೆಳವಣಿಗೆಗೆ ಸಮಾನಾರ್ಥಕವಾಗಿದೆ. ಇಂದು ಭಾರತ ಕ್ರಿಕೆಟ್‌ಗೆ ಸುವರ್ಣ ಅಕ್ಷರದ ದಿನವಾಗಿದೆ. ಇ-ಹರಾಜಿನ ಮೂಲಕ ಐಪಿಎಲ್ ಬ್ರಾಂಡ್ ಹೊಸ ಎತ್ತರವನ್ನು ಮುಟ್ಟಿದೆ. ಇದರ ಪರಿಣಾಮವಾಗಿ 48,390 ಕೋಟಿ ಮೌಲ್ಯವನ್ನು ಪಡೆದುಕೊಂಡಿದೆ. ಐಪಿಎಲ್ ಈಗ 2ನೇ ಅತ್ಯಂತ ಮೌಲ್ಯಯುತವಾದ ಕ್ರೀಡೆಯಾಗಿದೆ ಎಂದು ಶಾ ಹೇಳಿದ್ದಾರೆ.

ಐಪಿಎಲ್ ಸಂಪೂರ್ಣ ಮೌಲ್ಯಮಾಪನದ ಪ್ರಕಾರ, ಈಗ ರಾಷ್ಟ್ರೀಯ ಫುಟ್‌ಬಾಲ್ ಲೀಗ್(ಯುಎಸ್‌ಎ), ನ್ಯಾಷನಲ್ ಬಾಸ್ಕೆಟ್‌ಬಾಲ್ ಅಸೋಸಿಯೇಷನ್​​(ಯುಎಸ್‌ಎ) ಮತ್ತು ಇಂಗ್ಲಿಷ್ ಪ್ರೀಮಿಯರ್ ಲೀಗ್(ಇಂಗ್ಲೆಂಡ್) ಜೊತೆಗೆ ಅತಿ ಹೆಚ್ಚು-ವೀಕ್ಷಿಸಲಾದ ಕ್ರೀಡಾಕೂಟದ ಜೊತೆಗೆ ಅಗ್ರ ಪಂಥಿಯಲ್ಲಿದೆ.
ಸೋನಿಯು ಮೊದಲ 10 ವರ್ಷಗಳಿಗೆ(2008-17) 8,200 ಕೋಟಿ ರೂಪಾಯಿಗಳನ್ನು ಪಾವತಿಸಿ ಹಕ್ಕುಗಳನ್ನು ಪಡೆದುಕೊಂಡಿದ್ದರೆ, ಅದರ ಮುಂದಿನ ಐದು ವರ್ಷದ ಟಿವಿ ಹಕ್ಕುಗಳನ್ನು 16,347.50 ಬಿಡ್ ಬೆಲೆಯೊಂದಿಗೆ ಸ್ಟಾರ್ ಇಂಡಿಯಾ ಗೆದ್ದುಕೊಂಡಿತ್ತು.

ಸಾಗರೋತ್ತರ ಟಿವಿ ಮತ್ತು ಡಿಜಿಟಲ್ ಹಕ್ಕುಗಳೊಂದಿಗೆ ಪ್ರತಿ ಪಂದ್ಯಕ್ಕೆ ರೂ. 3 ಕೋಟಿ ಮೂಲ ಬೆಲೆಯ ಪ್ಯಾಕೇಜ್ ಡಿ ಅನ್ನು ವಯಾಕಾಮ್ 18 ಮತ್ತು ಟೈಮ್ಸ್ ಇಂಟರ್ನೆಟ್‌ಗೆ 1300 ಕೋಟಿಗೂ ಹೆಚ್ಚು ಮಾರಾಟ ಮಾಡಲಾಗಿದೆ.

ಪ್ರತಿ ಐಪಿಎಲ್ ಪಂದ್ಯದ ಮೌಲ್ಯವು ಹಿಂದಿನ  ಪಂದ್ಯಕ್ಕೆ 54.5 ಕೋಟಿ ರೂ.ನಿಂದ ಅಂದಾಜು 114 ಕೋಟಿ ರೂ.ಗೆ ಏರಿಕೆಯಾಗಿದ್ದು ಶೇಕಡ 100ಕ್ಕಿಂತ ಹೆಚ್ಚು ಜಿಗಿತ ಕಂಡಿದೆ. ಇನ್ನು ಜಾಗತಿಕವಾಗಿ 17 ಮಿಲಿಯನ್ ಡಾಲರ್ ಮೌಲ್ಯದೊಂದಿಗೆ NFL ಅಗ್ರಸ್ಥಾನದಲ್ಲಿದ್ದರೆ, 14.61 ಮಿಲಿಯನ್ ಡಾಲರ್ ಮೌಲ್ಯದೊಂದಿಗೆ ಐಪಿಎಲ್ ಎರಡನೇ ಸ್ಥಾನದಲ್ಲಿದೆ.

IPL ಮಾಧ್ಯಮ ಹಕ್ಕುಗಳು
ಪ್ಯಾಕೇಜ್…ಕಂಪನಿ…ಪ್ರತಿ ಪಂದ್ಯಕ್ಕೆ ಮೊತ್ತ…5 ವರ್ಷಗಳಲ್ಲಿ ಒಟ್ಟು ಪಂದ್ಯಗಳು…5 ವರ್ಷಗಳವರೆಗೆ ಮೊತ್ತ
ಎ…ಸ್ಟಾರ್ ಇಂಡಿಯಾ…57.50 ಕೋಟಿ…410…23,575 ಕೋಟಿ
ಬಿ…ವಯಾಕಾಮ್18…50 ಕೋಟಿ… 410… 20,500 ಕೋಟಿ
ಸಿ…ವಯಾಕಾಮ್ 18…33.24 ಕೋಟಿ… 098… 3,257.52 ಕೋಟಿ
ಡಿ… Viacom 18+ಟೈಮ್ಸ್ ಇಂಟರ್ನೆಟ್… 2.6 ಕೋಟಿ… 410… 1058 ಕೋಟಿ.

ಈ ವರ್ಷ ನಾಲ್ಕು ವಿಭಿನ್ನ ಪ್ಯಾಕೇಜ್‌ಗಳಲ್ಲಿ ಮಾಧ್ಯಮ ಹಕ್ಕುಗಳನ್ನು ಮಾರಾಟ ಮಾಡಲಾಗುತ್ತಿದೆ. ಪ್ಯಾಕೇಜ್-ಎ ಭಾರತಕ್ಕೆ ಟಿವಿ ಹಕ್ಕುಗಳನ್ನು ಹೊಂದಿದೆ. ಪ್ಯಾಕೇಜ್-ಬಿ ಭಾರತದ ಡಿಜಿಟಲ್ ಹಕ್ಕುಗಳನ್ನು ಹೊಂದಿದೆ. ಪ್ಯಾಕೇಜ್-ಸಿ ಆಯ್ದ 18 ಪಂದ್ಯಗಳನ್ನು ಒಳಗೊಂಡಿದೆ ಮತ್ತು ಪ್ಯಾಕೇಜ್-ಡಿ ವಿದೇಶದಲ್ಲಿ ಟಿವಿ ಮತ್ತು ಡಿಜಿಟಲ್ ಹಕ್ಕುಗಳನ್ನು ಒಳಗೊಂಡಿದೆ.

ಈ ಹಿಂದೆ ಸ್ಟಾರ್ ಇಂಡಿಯಾ ಸೆಪ್ಟೆಂಬರ್ 2017 ರಲ್ಲಿ 2017 ರಿಂದ 2022 ರ ಅವಧಿಯ ಮಾಧ್ಯಮ ಹಕ್ಕುಗಳನ್ನು 16,347.50 ಕೋಟಿ ಬಿಡ್ನಲ್ಲಿ ಖರೀದಿಸಿತು. ಬಿಡ್ಡಿಂಗ್ ನಲ್ಲಿ ಸ್ಟಾರ್ ಇಂಡಿಯಾ ಸೋನಿ ಪಿಕ್ಚರ್ಸ್ ಅನ್ನು ಸೋಲಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT