ಕ್ರಿಕೆಟ್

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದರ್ಪಣೆ ಮಾಡಿ 15 ವರ್ಷ: ಖುಷಿ ಹಂಚಿಕೊಂಡ ರೋಹಿತ್ ಶರ್ಮಾ!

Vishwanath S

ಕೋಲ್ಕತ್ತಾ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ವರ್ಷಗಳನ್ನು ಪೂರೈಸಿದ ಖುಷಿಯಲ್ಲಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮಾ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

2007ರಲ್ಲಿ ಇದೇ ದಿನ (ಜೂನ್ 23), ರೋಹಿತ್ ಶರ್ಮಾ ಐರ್ಲೆಂಡ್ ವಿರುದ್ಧ ಏಕದಿನ ಚೊಚ್ಚಲ ಪಂದ್ಯವನ್ನು ಆಡಿರುವುದಾಗಿ ನೆನಪಿಸಿಕೊಂಡಿದ್ದು, ಈ ಕುರಿತಾಗಿ ಟ್ವೀಟ್ ಮಾಡಿ ತಮ್ಮ ಸಂತಸವನ್ನು ಅಭಿಮಾನಿಗಳ ಎದುರು ವ್ಯಕ್ತಪಡಿಸಿದ್ದಾರೆ. ಈ ಪಂದ್ಯದಲ್ಲಿ ಭಾರತ ಒಂಬತ್ತು ವಿಕೆಟ್‌ಗಳಿಂದ ಗೆದ್ದಿತ್ತು.

ನನ್ನ ನೆಚ್ಚಿನ ಜರ್ಸಿಯಲ್ಲಿ 15 ವರ್ಷಗಳು ಕಳೆದಿದ್ದೇನೆ. ಎಲ್ಲರಿಗೂ ನಮಸ್ಕಾರ. ಅಂತರಾಷ್ಟ್ರೀಯ ಕ್ರಿಕೆಟ್ ಜಗತ್ತಿನಲ್ಲಿ ನಾನು ಭಾರತಕ್ಕೆ ಪಾದಾರ್ಪಣೆ ಮಾಡಿ ಇಂದಿಗೆ 15 ವರ್ಷಗಳನ್ನು ಪೂರ್ಣಗೊಳಿಸುತ್ತಿದ್ದೇನೆ. ಇದೊಂದು ಅದ್ಭುತ ಪ್ರಯಾಣವಾಗಿದೆ, ಖಂಡಿತವಾಗಿ ನಾನು ನನ್ನ ಜೀವನದುದ್ದಕ್ಕೂ ಕಾಪಾಡಿಕೊಳ್ಳುತ್ತೇನೆ ಎಂದು ರೋಹಿತ್ ತಿಳಿಸಿದ್ದಾರೆ.

'ಈ ಪ್ರಯಾಣದ ಭಾಗವಾಗಿರುವ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಮತ್ತು ನಾನು ಉತ್ತಮ ಆಟಗಾರನಾಗಿ ಇಲ್ಲಿಯವರೆಗೆ ಪ್ರಯಾಣಿಸಲು ನನಗೆ ಸಹಾಯ ಮಾಡಿದ ಜನರಿಗೆ ವಿಶೇಷ ಧನ್ಯವಾದಗಳು ಎಂದು ಹೇಳಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಐದನೇ ಮತ್ತು ಕೊನೆಯ ಟೆಸ್ಟ್ ಪಂದ್ಯಕ್ಕೆ ಮುಂಚಿತವಾಗಿ ಭಾರತ ತಂಡವು ಲೀಸೆಸ್ಟರ್‌ಶೈರ್ ವಿರುದ್ಧ ನಾಲ್ಕು ದಿನಗಳ ಪ್ರವಾಸವನ್ನು ಗುರುವಾರದಿಂದ ಅಪ್ಟನ್‌ಸ್ಟೀಲ್ ಕೌಂಟಿ ಮೈದಾನದಲ್ಲಿ ಪ್ರಾರಂಭಿಸಲಿದೆ.

SCROLL FOR NEXT