ಕ್ರಿಕೆಟ್

ಟಿ-20 ಸರಣಿ: ಶ್ರೀಲಂಕಾ ವಿರುದ್ಧ ಭಾರತೀಯ ವನಿತೆಯರಿಗೆ ಐದು ವಿಕೆಟ್ ಗೆಲುವು

Nagaraja AB

ದಾಂಬುಲಾ: ನಾಯಕಿ ಹರ್ಮನ್ ಪ್ರೀತ್  ಕೌರ್  ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ನೀಡಿದ ನೆರವಿನಿಂದಾಗಿ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಇಲ್ಲಿ ನಡೆದ  ಎರಡನೇ ಟಿ-20 ಪಂದ್ಯದಲ್ಲಿ ಶ್ರೀಲಂಕಾ ವಿರುದ್ದ ಐದು ವಿಕೆಟ್ ಗಳಿಂದ ಗೆಲುವು ಸಾಧಿಸಿತು.

ಉಪ ನಾಯಕಿ ಸ್ಮೃತಿ ಮಂದಾನಾ (34 ಎಸೆತಗಳಲ್ಲಿ 39) ಶೆಫಾಲಿ ವರ್ಮಾ (10 ಎಸೆತಗಳಲ್ಲಿ 17) ಎಸ್ ಮೇಘಾನಾ (10 ಎಸೆತಗಳಲ್ಲಿ 17) ರನ್ ಗಳಿಂದ ಭಾರತ  ತಂಡ 19.1 ಓವರ್ ಗಳಲ್ಲಿ 126 ರನ್ ಗಳ ಗುರಿ ಬೆನ್ನಟ್ಟಲು ಸಾಧ್ಯವಾಯಿತು.  ಹರ್ಮನ್ ಪ್ರೀತ್ ಕೌರ್  32 ಎಸೆತಗಳಲ್ಲಿ 31 ರನ್ ಗಳಿಸಿದರು. 

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಏಳು ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿತು. ಅಂತಿಮ ಹಾಗೂ ಫೈನಲ್ ಪಂದ್ಯ ಜೂನ್ 27 ರಂದು ಸೋಮವಾರ ಇಲ್ಲಿಯೇ ನಡೆಯಲಿದೆ.  ಇಂದಿನ ಪಂದ್ಯದಲ್ಲಿ ಸ್ಮೃತಿ ಮಂದಾನಾ  ಟಿ-20 ಪಂದ್ಯದಲ್ಲಿ ಅತ್ಯಂತ ವೇಗವಾಗಿ 2,000 ರನ್ ಗಳಿಸಿದ ಭಾರತೀಯ ಎರಡನೇ ಮಹಿಳೆ ಎಂಬ ಗೌರವಕ್ಕೆ ಪಾತ್ರರಾದರು.

SCROLL FOR NEXT