ಕ್ರಿಕೆಟ್

ಟೀಂ ಇಂಡಿಯಾ ನಾಯಕತ್ವಕ್ಕೆ ಹಾರ್ದಿಕ್ ಪಾಂಡ್ಯ ಪ್ರಬಲ ಪೈಪೋಟಿ ನೀಡಬಲ್ಲ ಆಟಗಾರ: ಗವಾಸ್ಕರ್

Nagaraja AB

ಅಹಮದಾಬಾದ್: ಐಪಿಎಲ್ 15ನೇ ಆವೃತ್ತಿಯಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವ ಗುಣಗಳಿಂದ ಸ್ಪೂರ್ತಿಗೊಂಡಿರುವ ಲೆಜೆಂಡರಿ ಸುನೀಲ್ ಗವಾಸ್ಕರ್, ಮುಂದಿನ ದಿನಗಳಲ್ಲಿ ಟೀಂ ಇಂಡಿಯಾದ ನಾಯಕತ್ವಕ್ಕೆ ಪ್ರಬಲ ಪೈಪೋಟಿ ನೀಡುವ ಆಟಗಾರನಾಗಿ ಹೊರಹೊಮ್ಮಿದ್ದಾರೆ ಎಂದು ಹೇಳಿದ್ದಾರೆ. 

ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ತಂಡ ಚೊಚ್ಚಲ ಐಪಿಎಲ್ ನಲ್ಲಿ ಟ್ರೋಫಿ ಗೆಲ್ಲುತ್ತಿದ್ದಂತೆಯೇ ಗವಾಸ್ಕರ್ ಈ ರೀತಿಯ ಮಾತುಗಳನ್ನಾಡಿದ್ದಾರೆ. ''ಹೌದು ಖಂಡಿತವಾಗಿ. ಇದು ಕೇವಲ ನನ್ನ ಊಹೆ ಅಲ್ಲ, ಆದರೆ, ಎಲ್ಲರೂ ಊಹಿಸಿದ್ದಾರೆ. (ನಾಯಕನಾಗಿ ಹಾರ್ದಿಕ್ ಪಾಂಡ್ಯ ಮಾನ್ಯತೆ ಹರಿದಾಡುತ್ತಿದೆ) ಎಂದು ಗವಾಸ್ಕರ್ ಸ್ಟಾರ್ ಸ್ಪೋರ್ಟ್ಸ್ ಗೆ ತಿಳಿಸಿದ್ದಾರೆ.

ನೀವು ನಾಯಕತ್ವದ ಗುಣಗಳನ್ನು ಹೊಂದಿದ್ದಾಗ, ಮುಂದಿನ ದಿನಗಳಲ್ಲಿ ಟೀಂ ಇಂಡಿಯಾದ ನಾಯಕತ್ವ ಪಡೆಯುವ ಸಾಮರ್ಥ್ಯದೊಂದಿಗೆ ರಾಷ್ಟ್ರಮಟ್ಟದಲ್ಲಿ ಸ್ವಯಂಚಾಲಿತವಾಗಿ ಅವಕಾಶಗಳ ಬಾಗಿಲು ತೆರೆಯಲಿದೆ. ಟೀಂ ಇಂಡಿಯಾ ನಾಯಕತ್ವದ ಪಟ್ಟಿಯಲ್ಲಿ ಇನ್ನೂ 3-4 ಆಟಗಾರರ ಹೆಸರಿದೆ. ಹಾರ್ದಿಕ್ ಪಾಂಡ್ಯ ಮುಂಚೂಣಿಯಲ್ಲಿದ್ದಾರೆ ಎಂದು ಹೇಳಲ್ಲ.ಆದರೆ, ಆಯ್ಕೆ ಸಮಿತಿಗೆ ಈ ಪರ್ಯಾಯ ಅದ್ಬುತವಾಗಿದೆ ಎಂದು ಅವರು ಹೇಳಿದ್ದಾರೆ.

ರಾಜಸ್ಥಾನ ರಾಯಲ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ  4 ಓವರ್ ಗಳಲ್ಲಿ 3 ವಿಕೆಟ್ ಪಡೆದು 17 ರನ್  ನೀಡಿದ ಹಾರ್ದಿಕ್ ಪಾಂಡ್ಯ, 30 ಬಾಲ್ ಗಳಲ್ಲಿ 34 ರನ್ ಗಳಿಸುವುದರೊಂದಿಗೆ ಗುಜರಾತ್ ಟೈಟನ್ಸ್ ಏಳು ವಿಕೆಟ್ ಗಳಿಂದ ಗೆಲುವು ಸಾಧಿಸಿತ್ತು. ಒಟ್ಟಾರೇ  ಐಪಿಎಲ್ 15ರಲ್ಲಿ ಹಾರ್ದಿಕ್ ಪಾಂಡ್ಯ 8 ವಿಕೆಟ್ ಗಳೊಂದಿಗೆ 487 ರನ್ ಗಳಿಸಿದ್ದಾರೆ. 

ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಹಾರ್ದಿಕ್ ಪಾಂಡ್ಯ ಏನು ಮಾಡಿದರು ಎಂಬುದು ನಮ್ಮೆಲ್ಲರಿಗೂ ಗೊತ್ತಿದೆ. ಆಲ್ ರೌಂಡರ್ ಆಯಾಮಾದಲ್ಲಿ ಅವರ ಆಟದ ಬಗ್ಗೆ ಎಲ್ಲರೂ ಸಂತೋಷಗೊಂಡಿದ್ದಾರೆ. ಅವರು ತಂಡವನ್ನು ಮುನ್ನಡೆಸಿದ ರೀತಿ, ಆಟಗಾರರನ್ನು ಒಟ್ಟುಗೂಡಿಸಿದ ರೀತಿ,  ಒಟ್ಟಿಗೆ ಸೇರಿಸುವ ರೀತಿಯಲ್ಲಿ ಅವರು ನಾಯಕತ್ವದ ಗುಣಗಳನ್ನು ಹೊಂದಿದ್ದಾರೆ ಎಂದರ್ಥ ಎಂದು ಗವಾಸ್ಕರ್ ಹೇಳಿದ್ದಾರೆ.

SCROLL FOR NEXT