ಕ್ರಿಕೆಟ್

ಸೂರ್ಯಕುಮಾರ್ ಯಾದವ್ ಮತ್ತೊಂದು ದಾಖಲೆ: ವೇಗದ ಶತಕ ಸಿಡಿಸಿದ ಭಾರತದ 3ನೇ ಆಟಗಾರ!

Vishwanath S

ಮೌಂಟ್ ಮೌಂಗನುಯಿ: ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ಟೀಂ ಇಂಡಿಯಾದ ಬ್ಯಾಟ್ಸ್ ಮನ್ ಸೂರ್ಯಕುಮಾರ್ ಯಾದವ್ ಕೇವಲ 49 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ. 

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಟೀಮ್ ಇಂಡಿಯಾ ಪರ ಸೂರ್ಯಕುಮಾರ್ ಯಾದವ್ ಕಿವೀಸ್ ಬೌಲರ್ ಗಳನ್ನು ದಂಡಿಸಿದರು. ಪಂದ್ಯದಲ್ಲಿ ಅಜೇಯರಾಗಿ ಉಳಿದ ಸೂರ್ಯಕುಮಾರ್ 51 ಎಸೆತಗಳಲ್ಲಿ 111 ರನ್ ಬಾರಿಸಿದ್ದರು.

ಅದ್ಭುತ ಫಾರ್ಮ್ ನಲ್ಲಿರುವ ಸೂರ್ಯಕುಮಾರ್ ಯಾದವ್ (ಅಜೇಯ 111) ಅವರ ಶತಕದಿಂದಾಗಿ ನ್ಯೂಜಿಲೆಂಡ್ ವಿರುದ್ಧ ಭಾರತ 6 ವಿಕೆಟ್ ನಷ್ಟಕ್ಕೆ 191 ರನ್ ಪೇರಿಸಿದೆ. ಸೂರ್ಯಕುಮಾರ್ ತಮ್ಮ ಎರಡನೇ T20 ಅಂತಾರಾಷ್ಟ್ರೀಯ ಶತಕಕ್ಕಾಗಿ 49 ಎಸೆತಗಳನ್ನು ತೆಗೆದುಕೊಂಡರು. ಇದರಲ್ಲಿ 11 ಬೌಂಡರಿ ಮತ್ತು 7 ಸಿಕ್ಸರ್‌ಗಳು ಸೇರಿವೆ.

ಇನ್ನು ಟಿ20 ಕ್ರಿಕೆಟ್ ನಲ್ಲಿ ಭಾರತದ ಪರ ಎರಡು ಶತಕ ಸಿಡಿಸಿದ ಖ್ಯಾತಿಗೆ ಸೂರ್ಯಕುಮಾರ್ ಯಾದವ್ ಭಾಜನರಾದರು. ರೋಹಿತ್ ಶರ್ಮಾ ಭಾರತದ ಪರ ವೇಗದ ಶತಕ ಸಿಡಿಸಿ ಅಗ್ರ ಬ್ಯಾಟ್ಸ್ ಮನ್ ಆಗಿದ್ದಾರೆ. ಶ್ರೀಲಂಕಾ ವಿರುದ್ಧ 35 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ. ನಂತರ ಸ್ಥಾನದಲ್ಲಿ ಕೆಎಲ್ ರಾಹುಲ್ ಇದ್ದಾರೆ. ರಾಹುಲ್ ವೆಸ್ಟ್ ಇಂಡೀಸ್ ವಿರುದ್ಧ 46 ಎಸೆತಗಳಲ್ಲಿ ಶತಕ ಸಿಡಿಸಿದ್ದರು.

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ಪರ ಅತ್ಯಾಧಿಕ ರನ್ ಸಿಡಿಸಿ ಬ್ಯಾಟರ್ ಗಳು
* 122*(61): ವಿರಾಟ್ ಕೊಹ್ಲಿ ವಿರುದ್ಧ ಅಫ್ಜಿಂಗ್ - ದುಬೈ 2022
* 118(43): ರೋಹಿತ್ ಶರ್ಮಾ vs ಶ್ರೀಲಂಕಾ - ಇಂದೋರ್ 2017
* 117(55): ಸೂರ್ಯಕುಮಾರ್ ಯಾದವ್ ವಿರುದ್ಧ ಇಂಗ್ಲೆಂಡ್ - ನಾಟಿಂಗ್ಹ್ಯಾಮ್ 2022
* 111*(51): ಸೂರ್ಯಕುಮಾರ್ ಯಾದವ್ ವಿರುದ್ಧ - ಮೌಂಟ್ ಮೌಂಗನುಯಿ 2022
* 111*(61): ರೋಹಿತ್ ಶರ್ಮಾ ವಿರುದ್ಧ ವೆಸ್ಟ್ ಇಂಡೀಸ್ - ಲಖನೌ 2018

SCROLL FOR NEXT