Unmukt Chand 
ಕ್ರಿಕೆಟ್

ಟೀಂ ಇಂಡಿಯಾ ಅಂಡರ್ 19 ತಂಡದ ಮಾಜಿ ನಾಯಕ ಉನ್ಮುಕ್ತ್ ಚಂದ್ ಕಣ್ಣಿಗೆ ಗಾಯ

19ರ ವಯೋಮಿತಿಯ ಟೀಂ ಇಂಡಿಯಾ ಮಾಜಿ ನಾಯಕ ಉನ್ಮುಕ್ತ್ ಚಾಂದ್ ಅವರ ಕಣ್ಣಿಗೆ ಗಂಭೀರ ಗಾಯವಾಗಿದೆ. ಅಮೆರಿಕಾದಲ್ಲಿ ಮೈನರ್ ಲೀಗ್ ಕ್ರಿಕೆಟ್ ನಲ್ಲಿ ಸಿಲಿಕಾನ್ ವ್ಯಾಲಿ ಸ್ಟ್ರೈಕರ್ ಪರವಾಗಿ ಆಡುವಾಗ ಅವರ ಎಡಗಣ್ಣಿಗೆ ಗಾಯವಾಗಿದೆ. 

ನವದೆಹಲಿ: 19ರ ವಯೋಮಿತಿಯ ಟೀಂ ಇಂಡಿಯಾ ಮಾಜಿ ನಾಯಕ ಉನ್ಮುಕ್ತ್ ಚಾಂದ್ ಅವರ ಕಣ್ಣಿಗೆ ಗಂಭೀರ ಗಾಯವಾಗಿದೆ. 

ಅಮೆರಿಕಾದಲ್ಲಿ ಮೈನರ್ ಲೀಗ್ ಕ್ರಿಕೆಟ್ ನಲ್ಲಿ ಸಿಲಿಕಾನ್ ವ್ಯಾಲಿ ಸ್ಟ್ರೈಕರ್ ಪರವಾಗಿ ಆಡುವಾಗ ಅವರ ಎಡಗಣ್ಣಿಗೆ ಗಾಯವಾಗಿದೆ

ಅಮೆರಿಕಾದಲ್ಲಿ ಆಡಲು ಭಾರತೀಯ ಕ್ರಿಕೆಟ್ ನಿಂದ ನಿವೃತ್ತಿ ಪಡೆದಿರುವ 29 ವರ್ಷದ  ಉನ್ಮುಕ್ತ್ ಚಂದ್  ತಮ್ಮ ಟ್ವಿಟರ್ ಖಾತೆಯಲ್ಲಿ ಕಣ್ಣಿಗೆ ಗಾಯವಾಗಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. 

'ಅಥ್ವೀಟ್ ಒಬ್ಬರ ಜೀವನಯಾನ ಸರಳವಾಗಿರುವುದಿಲ್ಲ. ಕೆಲವೊಂದು ದಿನಗಳು ವಿಜಯದ ಸಂಭ್ರಮವಿರುತ್ತದೆ. ಇನ್ನೊಂದಿಷ್ಟು ದಿನಗಳು ಬರೇ ನೋವು, ಗಾಯ ಹಾಗೂ ನಿರಾಸೆಗಳಿರುತ್ತವೆ. ದೊಡ್ಡ ಮಟ್ಟದ ದುರಂತವನ್ನು ತಪ್ಪಿಸಿದ ದೇವರಿಗೆ ಕೃತಜ್ಞನಾಗಿದ್ದೇನೆ. ಉತ್ಸಾಹದಿಂದ ಆಡಬೇಕು ಆದರೆ, ಎಚ್ಚರಿಕೆಯಿಂದ ಆಡಬೇಕು. ನಿಮ್ಮೆಲ್ಲರ ಹಾರೈಕೆಗಳಿಗೆ ಧನ್ಯವಾದಗಳು ಎಂದು ಅವರು ಬರೆದುಕೊಂಡಿದ್ದಾರೆ.

ಉನ್ಮುಕ್ತ್ ಚಾಂದ್ಆಸ್ಟ್ರೇಲಿಯಾದ ಬಿಗ್ ಬಾಸ್ ಲೀಗ್ ನಲ್ಲಿ ಆಡಿದ ಮೊದಲ ಭಾರತೀಯ ಆಟಗಾರರಾಗಿದ್ದಾರೆ. ಆದರೆ, ಹಿರಿಯರ ಮಟ್ಟದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅವರು ದೇಶವನ್ನು ಪ್ರತಿನಿಧಿಸಿರಲಿಲ್ಲ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವೇನ್ ಮುಚ್ಚೋದು ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ- ಇರಾನ್ ಗೆ ಟ್ರಂಪ್ ಶಾಕ್!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ; Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ, Turkey ಬೇಸ್ತು!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್, KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

ಮಿಸ್ಟರ್ 'ನಂಗ್ ಗೊತ್ತಿಲ್ಲಾ' ಗೃಹ ಸಚಿವರೇ ಇಲ್ನೋಡಿ, ಪುಡಿ ರೌಡಿಗಳ ಹಾವಳಿ : Parameshwar ವಿರುದ್ಧ ಜೆಡಿಎಸ್ ಕಿಡಿ

IPL 2026: ಬಟ್ಲರ್ 14,000 ರನ್ ದಾಖಲೆ; ಮಿಂಚಿದ ಶುಭ್ಮನ್ ಗಿಲ್, ಪ್ರಸಿದ್ಧ್ ಕೃಷ್ಣ; LSG ವಿರುದ್ಧ GT ಗೆಲುವು!

SCROLL FOR NEXT