ಕ್ರಿಕೆಟ್ ನಲ್ಲಿ ಪುರುಷರಷ್ಟೇ ಮಹಿಳಾ ಆಟಗಾರ್ತಿಯರಿಗೂ ಸಮಾನ ವೇತನ: ರೋಹಿತ್ ಶರ್ಮಾ ಹೇಳಿದ್ದು ಹೀಗೆ...
ಪುರುಷರಷ್ಟೇ ಮಹಿಳಾ ಕ್ರಿಕೆಟ್ ಆಟಗಾರ್ತಿಯರಿಗೂ ಪಂದ್ಯದ ಸಮಾನ ಶುಲ್ಕ ನಿಗದಿಪಡಿಸಿರುವ ಬಿಬಿಸಿಐ ನಿರ್ಧಾರವನ್ನು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಪ್ರಶಂಸಿಸಿದ್ದಾರೆ.
ನವದೆಹಲಿ: ಪುರುಷರಷ್ಟೇ ಮಹಿಳಾ ಕ್ರಿಕೆಟ್ ಆಟಗಾರ್ತಿಯರಿಗೂ ಪಂದ್ಯದ ಸಮಾನ ಶುಲ್ಕ ನಿಗದಿಪಡಿಸಿರುವ ಬಿಬಿಸಿಐ ನಿರ್ಧಾರವನ್ನು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಪ್ರಶಂಸಿಸಿದ್ದಾರೆ.
ಬಿಸಿಸಿಐ ಗುರುವಾರ, ಪುರುಷರಷ್ಟೇ ಮಹಿಳಾ ಆಟಗಾರರಿಗೂ ಪಂದ್ಯದ ಸಮಾನ ವೇತವನ್ನು ನಿಗದಿಪಡಿಸಿತ್ತು. ಈ ನಿರ್ಧಾರ ಸಂತೋಷ ಮತ್ತು ಹೆಮ್ಮೆಯನ್ನುಂಟು ಮಾಡಿದೆ ಎಂದು ರೋಹಿತ್ ಶರ್ಮಾ ಟ್ವೀಟ್ ಮಾಡಿದ್ದಾರೆ.
ಬಿಸಿಸಿಐ ನೂತನ ನಿರ್ಧಾರದ ಪ್ರಕಾರ, ಮಹಿಳಾ ಕ್ರಿಕೆಟ್ ಆಟಗಾರ್ತಿಯರು ಟೆಸ್ಟ್ ಪಂದ್ಯಕ್ಕೆ 15 ಲಕ್ಷ ರೂ, ಏಕದಿನ ಪಂದ್ಯಕ್ಕೆ 6 ಲಕ್ಷ, ಟಿ-20 ಪಂದ್ಯಕ್ಕೆ 3 ಲಕ್ಷ ರೂ. ವೇತನ ಪಡೆಯಲಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.