ಕ್ರಿಕೆಟ್

'ಕನಸು ನನಸಾಯಿತು': ಟೀಂ ಇಂಡಿಯಾದ ಡ್ರೆಸ್ಸಿಂಗ್ ರೂಮ್ ನಲ್ಲಿ ಹಾಂಕಾಂಗ್ ಆಟಗಾರರ ಸಂಭ್ರಮ, ವಿಡಿಯೋ ವೈರಲ್!

Vishwanath S

ದುಬೈ: ಏಷ್ಯಾ ಕಪ್ ಟೂರ್ನಿಯ ಟೀಂ ಇಂಡಿಯಾ ವಿರುದ್ಧ ಪಂದ್ಯದಲ್ಲಿ ಹಾಂಕಾಂಗ್‌ ಸೋಲಿನ ಕಹಿ ಅನುಭವಿಸಿರಬಹುದು ಆದರೆ ಪಂದ್ಯದ ನಂತರ ಭಾರತೀಯ ಆಟಗಾರರನ್ನು ಭೇಟಿ ಮಾಡಿ, ಮಾತನಾಡುವ ಮೂಲಕ ಆ ದಿನವನ್ನು ಸ್ಮರಣೀಯವಾಗಿಸಿಕೊಂಡಿದ್ದಾರೆ.

ಏಷ್ಯಾಕಪ್‌ಗೆ ಅರ್ಹತೆ ಪಡೆದಿರುವ ಹಾಂಕಾಂಗ್ ತಂಡ ಮೈದಾನದಲ್ಲಿ ಬಲಿಷ್ಠ ಭಾರತದ ವಿರುದ್ಧ 40 ರನ್‌ಗಳಿಂದ ಸೋಲು ಅನುಭವಿಸಿತ್ತು. ಆದರೆ ಇದರ ಬೆನ್ನಲ್ಲೇ ಹಾಂಗ್ ಕಾಂಗ್ ಕ್ರಿಕೆಟಿಗರಿಗೆ 'ಜೀವಮಾನ'ದ ಅವಕಾಶ ಸಿಕ್ಕಿತ್ತು. ಅದು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಸೇರಿದಂತೆ ಇತರ ಆಟಗಾರರನ್ನು ಭೇಟಿ ಮಾಡುವ ಅವಕಾಶ. ಈ ವೇಳೆ ಹಾಂಕಾಂಗ್ ಆಟಗಾರರು ಭಾರತದ ಆಟಗಾರರ ಜೊತೆ ಚರ್ಚಿಸಿದ್ದು ಅಲ್ಲದೆ ಜೆರ್ಸಿಯ ಮೇಲೆ ಆಟೋಗ್ರಾಫ್, ಫೋಟೋಗಳನ್ನು ಕ್ಲಿಕ್ಕಿಸಿಕೊಂಡರು.

ಆಟಗಾರರು ಡ್ರೆಸ್ಸಿಂಗ್ ರೂಮ್‌ಗೆ ಹೋಗಿ ಎಲ್ಲಾ ಆಟಗಾರರೊಂದಿಗೆ, ವಿಶೇಷವಾಗಿ ವಿರಾಟ್ ಮತ್ತು ರೋಹಿತ್ ಅವರೊಂದಿಗೆ ಮಾತನಾಡಿದರು. ಅಂತಹ ಕ್ಷಣಗಳು ನಮಗೆ ಆಗಾಗ್ಗೆ ಬರುವುದಿಲ್ಲ, ಆದ್ದರಿಂದ ಇದು ಕನಸು ನನಸಾಯಿತು ಎಂದು ಹೆಚ್ಚು ರನ್ ಸಿಡಿಸಿದ್ದ ಮಾಡಿದ ಬಾಬರ್ ಹಯಾತ್(41) ಹೇಳಿದರು.

ಬಿಸಿಸಿಐ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಹಾಂಗ್ ಕಾಂಗ್ ನಾಯಕ ನಿಜಾಖತ್ ಖಾನ್ ಅವರು ತಮ್ಮ ಭಾರತೀಯ ಸಹವರ್ತಿ ರೋಹಿತ್ ಶರ್ಮಾ ಅವರಿಂದ ಹಸ್ತಾಕ್ಷರದ ಜೆರ್ಸಿಯನ್ನು ಸ್ವೀಕರಿಸಿದರು. ಇದೇ ವೇಳೆ ಸೂರ್ಯಕುಮಾರ್ ಯಾದವ್ ಇದೇ ವೇಳೆ ಸೂರ್ಯಕುಮಾರ್ ಯಾದವ್ ಬ್ಯಾಟ್ ಮೇಲೆ ಆಟೋಗ್ರಾಫ್ ಹಾಕಿ ಕೊಟ್ಟರು.

ಇನ್ನು ತಂಡ ಕೋಚ್ ರಾಹುಲ್ ದ್ರಾವಿಡ್, ಕೊಹ್ಲಿ ಸೇರಿದಂತೆ ಇತರರೊಂದಿಗೆ ಸುದೀರ್ಘವಾಗಿ ಮಾತನಾಡಿ ತೆರಳಿದರು.

SCROLL FOR NEXT