ಭಾರತ-ಪಾಕ್ ಸರಣಿ(ಸಾಂದರ್ಭಿಕ ಚಿತ್ರ) 
ಕ್ರಿಕೆಟ್

ಭಾರತ-ಪಾಕ್ ಟಿ20 ವಿಶ್ವಕಪ್ ಟಿಕೆಟ್ ಸೋಲ್ಡ್ ಔಟ್

2022 ರ ಅಕ್ಟೋಬರ್ 23 ರಂದು ನಡೆಯಲಿರುವ ಟಿ20 ವಿಶ್ವಕಪ್ ನ ಭಾರತ-ಪಾಕ್ ನಡುವಿನ ಪಂದ್ಯದ ಟಿಕೆಟ್ ಗಳು ಸೋಲ್ಡ್ ಔಟ್ ಆಗಿವೆ.

ನವದೆಹಲಿ: 2022 ರ ಅಕ್ಟೋಬರ್ 23 ರಂದು ನಡೆಯಲಿರುವ ಟಿ20 ವಿಶ್ವಕಪ್ ನ ಭಾರತ-ಪಾಕ್ ನಡುವಿನ ಪಂದ್ಯದ ಟಿಕೆಟ್ ಗಳು ಸೋಲ್ಡ್ ಔಟ್ ಆಗಿವೆ. 

ಮೆಲ್ಪೋರ್ನ್ ನಲ್ಲಿ ಸಾಂಪ್ರದಾಯಿಕ ಎದುರಾಳಿಗಳು ಸೆಣೆಸಲಿದ್ದಾರೆ. ಐಸಿಸಿ ಈ ಬಗ್ಗೆ ಗುರುವಾರ (ಸೆ.15) ರಂದು ಮಾಹಿತಿ ನೀಡಿದ್ದು,

ಹೆಚ್ಚುವರಿ ಸ್ಟ್ಯಾಂಡಿಂಗ್ ರೂಮ್ ಟಿಕೆಟ್ ಗಳು ಸಹ ಕೆಲವೇ ನಿಮಿಷಗಳಲ್ಲಿ ಬಿಕರಿಯಾದವು ಎಂದು ಐಸಿಸಿ ಹೇಳಿದೆ.

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಪಂದ್ಯಕ್ಕೆ 500,000 ಟಿಕೆಟ್ ಗಳು ಮಾರಾಟವಾಗಿದ್ದು, ಸೂಪರ್ 12 ಫಿಕ್ಸ್ಚರ್ ನ ಆರಂಭಿಕ ಪಂದ್ಯದಲ್ಲಿ ಭಾರತ-ಪಾಕ್ ಸೆಣೆಸಲಿವೆ.

ಇದನ್ನೂ ಓದಿ: T20 ವಿಶ್ವಕಪ್: ಭಾರತ ತಂಡ ಪ್ರಕಟ; ಜಸ್ಪ್ರೀತ್ ಬುಮ್ರಾ, ಹರ್ಷಲ್ ಪಟೇಲ್ ಗೆ ಸ್ಥಾನ, ತಂಡದಲ್ಲಿ ರ್ಯಾಯಾರಿದ್ದಾರೆ?
 
82 ವಿವಿಧ ದೇಶಗಳಿಂದ ಅಭಿಮಾನಿಗಳು ಟಿಕೆಟ್ ಗಳನ್ನು ಖರೀದಿಸಿದ್ದು, 16 ಅಂತಾರಾಷ್ಟ್ರೀಯ ತಂಡಗಳಲ್ಲಿ ಜಗತ್ತಿನ ಅತ್ಯುತ್ತಮ ಆಟಗಾರರನ್ನು ವೀಕ್ಷಿಸಲಿದ್ದಾರೆ. ಇದು 2020 ರಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್ ಬಳಿಕ ಸ್ಟೇಡಿಯಂ ಗಳು ಭರ್ತಿಯಾಗುವ ಕಾರ್ಯಕ್ರಮವಾಗಿರಲಿದೆ ಎಂದು ಎಂಸಿಜಿ ತಿಳಿಸಿದೆ. 

ಪಂದ್ಯದ ಸನಿಹದಲ್ಲಿ ಮತ್ತೊಮ್ಮೆ ರೀ-ಸೇಲ್ ವೇದಿಕೆಯನ್ನು ಪರಿಚಯಿಸಲಾಗುವುದು, ಅಲ್ಲಿ ಅಭಿಮಾನಿಗಳು ಟಿಕೆಟ್ ಗಳನ್ನು ಮುಖಬೆಲೆಗಳಿಗೆ ಬದಲಾವಣೆ ಮಾಡಿಕೊಳ್ಳಬಹುದು ಎಂದು ಐಸಿಸಿ ಹೇಳಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

9 ದಿನಗಳಿಂದ ಉಪವಾಸ: ದೇವೇಂದ್ರ ಮಹ್ತೊ ಆಸ್ಪತ್ರೆಗೆ ದಾಖಲು; ಪೊಲೀಸರ ಲಾಠಿಚಾರ್ಚ್ ಖಂಡಿಸಿ ನಾಳೆ ಬಂದ್ ಗೆ BJP ಕರೆ!

ಶಾರುಖ್ ನಟನೆಯ 'ಕಭಿ ಅಲ್ವಿದಾ ನಾ ಕೆಹನಾ' ಚಿತ್ರ ಅಕ್ರಮ ಸಂಬಂಧ ಬೆಂಬಲಿಸಿಲ್ಲ: ಕರಣ್ ಜೋಹರ್ ಪೋಸ್ಟ್ ವೈರಲ್!

ಖಾತೆ ಹಂಚಿಕೆ ಕಸರತ್ತು: ವರಿಷ್ಠರಿಗೆ ಪಟ್ಟಿ ನೀಡಿ ಬೆಂಗಳೂರಿಗೆ CM ಡಿ.ಕೆ ಶಿವಕುಮಾರ್ ವಾಪಸ್; ಹೇಳಿದ್ದೇನು?

ನಾವು ಹಿಂಸಾಚಾರನ ಬೆಂಬಲಿಸಲ್ಲ; ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್‌ ಸರಿಯಲ್ಲ: ಜಾರ್ಖಂಡ್ ನಡೆ ಖಂಡಿಸಿದ ರಾಹುಲ್!

ಕೊಲಂಬಿಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಕನಿಷ್ಠ 47 ಮಂದಿ ಸಾವು, ಡಜನ್ಗಟ್ಟಲೆ ಕಟ್ಟಡಗಳು ಕುಸಿತ!