ಕ್ರಿಕೆಟ್

2ನೇ ಟಿ20 ಪಂದ್ಯ: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 6 ವಿಕೆಟ್ ಗಳ ಜಯ

Srinivas Rao BV

ನಾಗ್ಪುರ: ನಾಗ್ಪುರದಲ್ಲಿ ಸೆ.23 ರಂದು ನಡೆದ ಭಾರತ- ಆಸ್ಟ್ರೇಲಿಯಾ ನಡುವಿನ 2 ನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 6 ವಿಕೆಟ್ ಗಳ ಜಯ ಗಳಿಸಿದೆ.
 
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ ಆಸ್ಟ್ರೇಲಿಯಾವನ್ನು 5 ವಿಕೆಟ್ ನಷ್ಟಕ್ಕೆ 90 ರನ್ ಗಳಿಗೆ ಕಟ್ಟಿಹಾಕಿತು. 

ರಾತ್ರಿ ಇಡೀ ಸುರಿದ ಮಳೆಯ ಪರಿಣಾಮ ವಿಸಿಎ ಸ್ಟೇಡಿಯಮ್ ನಲ್ಲಿ  ಒದ್ದೆಯಾದ ಔಟ್ ಫೀಲ್ಡ್ ನಿಂದಾಗಿ ಟಾಸ್ 3 ಗಂಟೆಗಳ ಕಾಲ ವಿಳಂಬವಾದ್ದರಿಂದ ಭಾರತ-ಆಸ್ಟ್ರೇಲಿಯಾ ಪಂದ್ಯವನ್ನು ತಲಾ 8 ಓವರ್ ಗಳಿಗೆ ಇಳಿಕೆ ಮಾಡಲಾಯಿತು.

8 ಓವರ್ ಗಳಲ್ಲಿ ಆಸ್ಟ್ರೇಲಿಯಾ 91 ರನ್ ಗಳ ಗುರಿಯನ್ನು ಭಾರತಕ್ಕೆ ನೀಡಿತ್ತು. ಆಸ್ಟ್ರೇಲಿಯಾ ಪರ ಆರನ್ ಫಿಂಚ್ 15 ಎಸೆತಗಳಲ್ಲಿ 31 ರನ್, ಮಾಥ್ಯೂ ವೇಡ್ 20 ಎಸೆತಗಳಲ್ಲಿ 43 ರನ್ ಗಳನ್ನು ಗಳಿಸಿ ತಂಡಕ್ಕೆ ಆಸರೆಯಾದರು.

ಭಾರತದ ಪರ ಅಕ್ಸರ್ ಪಟೇಲ್ 2 ವಿಕೆಟ್ ಗಳಿಸಿದರು, ಜಸ್ಪ್ರಿತ್ ಬೂಮ್ರಾ 1 ವಿಕೆಟ್ ಗಳಿಸಿದರು. ಭಾರತ 7.2 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 92 ರನ್ ಗಳಿಸಿ ಆಸ್ಟ್ರೇಲಿಯಾ ವಿರುದ್ಧ ಜಯಗಳಿಸಿ, ಸರಣಿಯಲ್ಲಿ ಸಮಬಲ ಸಾಧಿಸಿದೆ. ಕೆಎಲ್ ರಾಹುಲ್ 6 ಎಸೆತಗಳಲ್ಲಿ 10 ರನ್ ಗಳಿಸಿದರು. ರೋಹಿತ್ ಶರ್ಮಾ 20 ಎಸೆತಗಳಲ್ಲಿ 46 ರನ್ ಗಳಿಸಿದರೆ ವಿರಾಟ್ ಕೊಹ್ಲಿ 6 ಎಸೆತಗಳಲ್ಲಿ 11 ರನ್ ಗಳಿಸಿದರು. 

SCROLL FOR NEXT