ಕ್ರಿಕೆಟ್

ಮೊದಲ ಟಿ20 ಪಂದ್ಯ: ಕೆಎಲ್ ರಾಹುಲ್ ಬಿರುಸಿನ ಬ್ಯಾಟಿಂಗ್, ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 8 ವಿಕೆಟ್ ಜಯ

Srinivas Rao BV

ತಿರುವನಂತಪುರ:  ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಗೆಲುವಿನ ಖುಷಿಯಲ್ಲಿರುವ ಟೀಂ ಇಂಡಿಯಾ, ಮೊದಲ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ 8 ವಿಕೆಟ್ ಗಳ ಜಯ ಗಳಿಸಿದೆ. 

ತಿರುವನಂತಪುರದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕಾ,  8 ವಿಕೆಟ್ ನಷ್ಟಕ್ಕೆ ಭಾರತಕ್ಕೆ 107 ರನ್ ಗಳ ಗುರಿ ನೀಡಿತ್ತು. 

ಸರಳ ಮೊತ್ತದ ರನ್ ಗುರಿ ಬೆನ್ನಟ್ಟಿದ ಭಾರತ, 16.4 ಓವರ್ ಗಳಿಗೆ ಎರಡು ವಿಕೆಟ್ ಕಳೆದುಕೊಂಡು 110 ರನ್ ಗಳಿಸುವ ಮೂಲಕ ದಕ್ಷಿಣ ಆಫ್ರಿಕಾ ವಿರುದ್ಧ ಜಯ ಗಳಿಸಿತು. ಆರಂಭಿಕ ಆಟಗಾರರಾದ ಕೆಎಲ್ ರಾಹುಲ್, 56 ಎಸೆತಗಳಲ್ಲಿ 51 ರನ್ ಗಳಿಸಿದರೆ, ರೋಹಿತ್ ಶರ್ಮಾ ಶೂನ್ಯಕ್ಕೆ ಔಟ್ ಆದರು, ಸೂರ್ಯಕುಮಾರ್ ಯಾದವ್  33 ಎಸೆತಗಳಲ್ಲಿ 50 ರನ್ ಗಳಿಸಿ ತಂಡದ ಗೆಲುವಿಗೆ ನೆರವಾದರು. ದಕ್ಷಿಣ ಆಫ್ರಿಕ ಪರ ಅನ್ರಿಜ್ ನೋರ್ಜೆ 1 ವಿಕೆಟ್, ಕಗಿಸೋ ರಬಡಾ 1 ವಿಕೆಟ್ ಗಳಿಸಿದರು.

SCROLL FOR NEXT