ಸಂಭ್ರಮದಲ್ಲಿ ರಾಜಸ್ಥಾನ ತಂಡದ ಆಟಗಾರರ ಚಿತ್ರ 
ಕ್ರಿಕೆಟ್

ಐಪಿಎಲ್ 2023: ಬಟ್ಲರ್, ಚಹಲ್ ಅಬ್ಬರ, ಹೈದರಾಬಾದ್ ವಿರುದ್ಧ 72 ರನ್ ಅಂತರದಿಂದ ರಾಜಸ್ಥಾನಕ್ಕೆ ಗೆಲುವು

ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಐಪಿಎಲ್ 2023 ಪಂದ್ಯದಲ್ಲಿ ಬಟ್ಲರ್ ಅಬ್ಬರದ ಬ್ಯಾಟಿಂಗ್ ಹಾಗೂ ಚಹಾಲ್ ಅವರ ನಾಲ್ಕು ವಿಕೆಟ್ ಗಳಿಂದ ಹೈದರಾಬಾದ್ ನ್ನು 72 ರನ್ ಗಳ ಅಂತರದಿಂದ ಬಗ್ಗು ಬಡಿದ ರಾಜಸ್ಥಾನ ರಾಯಲ್ಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಹೈದ್ರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಐಪಿಎಲ್ 2023 ಪಂದ್ಯದಲ್ಲಿ ಬಟ್ಲರ್ ಅಬ್ಬರದ ಬ್ಯಾಟಿಂಗ್ ಹಾಗೂ ಚಹಾಲ್ ಅವರ ನಾಲ್ಕು ವಿಕೆಟ್ ಗಳಿಂದ ಹೈದರಾಬಾದ್ ನ್ನು 72 ರನ್ ಗಳ ಅಂತರದಿಂದ ಬಗ್ಗು ಬಡಿದ ರಾಜಸ್ಥಾನ ರಾಯಲ್ಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 203 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿತು. ರಾಜಸ್ಥಾನ ಪರ ಯಶಸ್ವಿನಿ ಜೈಸ್ವಾಲ್ 37 ಎಸೆತಗಳಲ್ಲಿ 54 ರನ್ ಗಳಿಸಿದರೆ, ಜೋಸ್ ಬಟ್ಲರ್ 54, ಸಂಜು ಸ್ಯಾಮ್ಸನ್ 55 ರನ್ ಗಳಿಸಿದರು. ಸನ್ ರೈಸರ್ಸ್ ಹೈದ್ರಾಬಾದ್ ಪರ ಫಾರೂಖಿ, ಎನ್ ನಟರಾಜನ್ ತಲಾ 2, ಉಮ್ರಾನ್ ಮಲ್ಲಿಕ್ 1 ವಿಕೆಟ್ ಪಡೆದರು.

ರಾಜಸ್ಥಾನ ರಾಯಲ್ಸ್ ನೀಡಿದ 204 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಸನ್ ರೈಸರ್ಸ್ ಹೈದ್ರಾಬಾದ್ ತಂಡ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರಿಂದಾಗಿ ರಾಜಸ್ಥಾನ ರಾಯಲ್ಸ್ 72 ರನ್ ಗಳ ಭಾರೀ ಅಂತರದಿಂದ ಗೆಲುವಿನ ನಗೆ ಬೀರಿತು.

ಸನ್ ರೈಸರ್ಸ್ ಹೈದ್ರಾಬಾದ್ ಪರ  ಮಯಾಂಕ್ ಅಗರ್ ವಾಲ್ 27, ಅಬ್ದುಲ್ ಸಮದ್ 32, ಅದಿಲ್ ರಶೀದ್ 18, ಉಮ್ರಾನ್ ಮಲ್ಲಿಕ್ 19 ರನ್ ಗಳಿಸಿದರು. ಈ ಆಟಗಾರರನ್ನು ಹೊರತುಪಡಿಸಿದರೆ ಉಳಿದ ಯಾವುದೇ ಆಟಗಾರರು ಕ್ರೀಸ್ ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ರಾಜಸ್ಥಾನ ರಾಯಲ್ಸ್ ಪರ ಚಹಾಲ್ 4 ವಿಕೆಟ್ ಕಬಳಿಸಿದರೆ, ಟ್ರೆಂಟ್ ಬೌಲ್ಟ್ 2, ಜಾಸನ್ ಹೊಲ್ಡರ್, ಮತ್ತು ಆರ್ ಅಶ್ವಿನ್ ತಲಾ 1 ವಿಕೆಟ್ ಪಡೆದರು. ಜೋಸ್ ಬಟ್ಲರ್  ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೀದಿ ಬಣಕ್ಕೆ ಫುಟ್‌ಬಾಲ್, ಬಂಡಾಯಗಾರರಿಗೆ ಲಕೋಟೆ: ಟಿಎಂಸಿ ಚಿಹ್ನೆ ಫ್ರೀಜ್ ಬೆನ್ನಲ್ಲೇ ಚುನಾವಣಾ ಆಯೋಗದಿಂದ ಮಹತ್ವದ ಆದೇಶ!

ಶೀಘ್ರದಲ್ಲೇ ನಂದಿನಿ ಹಾಲಿನ ದರ ಹೆಚ್ಚಳ? ಲೀಟರ್‌ ಹಾಲಿಗೆ ₹8 ಏರಿಕೆಗೆ ಒಕ್ಕೂಟಗಳ ಪ್ರಸ್ತಾವನೆ!

TMC ಹೆಸರು, ಚಿಹ್ನೆ ಮುಟ್ಟುಗೋಲು: ಚುನಾವಣಾ ಆಯೋಗ ಆದೇಶಕ್ಕೆ ತೀವ್ರ ಆಕ್ರೋಶ; 'ಪ್ರತಿಭಟನೆಯೊಂದಿಗೆ' ಹೊಸ ಹೆಸರು, ಚಿಹ್ನೆ ಸಲ್ಲಿಸಿದ ಮಮತಾ ಬ್ಯಾನರ್ಜಿ!

ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿಥಾರಿ ಹತ್ಯಾಕಾಂಡದ ಆರೋಪಿ ಸುರೇಂದ್ರ ಕೋಲಿ ಹರಿದ್ವಾರದಲ್ಲಿ ಶವವಾಗಿ ಪತ್ತೆ!

ಪ್ರಾಣಿ ಪ್ರಿಯರಿಗೆ ಸಿಹಿಸುದ್ದಿ: ಕುನೋದಲ್ಲಿ ಚೀತಾ ಸಂತಾನ ಅಭಿವೃದ್ಧಿ, ಭಾರತದಲ್ಲೇ ಹುಟ್ಟಿದ KGP12ಗೆ ನಾಲ್ಕು ಮರಿಗಳ ಜನನ! Video