ಕ್ರಿಕೆಟ್

IPL 2023: 'ಆವೇಶ'ಕ್ಕೆ ವಾಗ್ದಂಡನೆ, ನಿಧಾನಗತಿ ಓವರ್ ಗಾಗಿ RCB ನಾಯಕನಿಗೂ ಬಿತ್ತು ಭಾರಿ ಪೆನಾಲ್ಟಿ!

Srinivasamurthy VN

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಖನೌ ಸೂಪರ್ ಜೈಂಟ್ಸ್ ತಂಡ ಪಂದ್ಯದಲ್ಲಿ ಅನುಚಿತ ವರ್ಚನೆ ತೋರಿದ ಆರೋಪದ ಮೇರೆಗೆ ಆವೇಶ್ ಖಾನ್ ಗೆ ಭಾರಿ ದಂಡ ಹಾಕಲಾಗಿದ್ದು, RCB ನಾಯಕ ಫಾಫ್ ಡುಪ್ಲೆಸಿಸ್ ಗೂ ದಂಡ ಹೇರಲಾಗಿದೆ.

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ 1 ವಿಕೆಟ್ ಅಂತರದ ವಿರೋಚಿತ ಜಯ ಸಾಧಿಸಿದೆ. ಕೊನೆಯ ಎಸೆತದವರೆಗೆ ಸಾಗಿದ ಪಂದ್ಯದಲ್ಲಿ ಕೆಎಲ್ ರಾಹುಲ್ ಪಡೆಯು ಒಂದು ವಿಕೆಟ್ ಅಂತರದ ಗೆಲುವು ಪಡೆಯಿತು.

ನಿನ್ನೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಕ್ಷರಃ ರನ್ ಮಳೆಯೇ ಹರಿಯಿತು. ಉಭಯ ತಂಡಗಳು ಸೇರಿ 425 ರನ್ ಪೇರಿಸಿತು. ಡುಪ್ಲೆಸಿಸ್ ಅವರ 115 ಮೀಟರ್ ಸಿಕ್ಸರ್ ಸೇರಿ ಒಟ್ಟು 27 ಸಿಕ್ಸರ್ ಗಳು ಸಿಡಿದವು. ಕೊನೆಯ ಎಸೆತದಲ್ಲಿ ಒಂದು ರನ್ ಬೇಕಿದ್ದಾಗ ಬ್ಯಾಟ್ ಗೆ ಚೆಂಡು ತಾಗದಿದ್ದರೂ ಆವೇಶ್ ಖಾನ್ ಒಂದು ರನ್ ಕದ್ದರು. ಈ ವೇಳೆ ಸಂಭ್ರಮಾಚರಣೆ ಮಾಡಿದ ಆವೇಶ್ ಖಾನ್ ತನ್ನ ಹೆಲ್ಮೆಟ್ ಅನ್ನು ತೆಗೆದು ನೆಲಕ್ಕೆ ಬಿಸಾಡಿದ್ದರು. ಇದೇ ವರ್ತನೆ ಅವರಿಗೆ ಮುಳುವಾಗಿದ್ದು, ಅವರಿಗೆ ವಾಗ್ದಂಡನೆ ವಿಧಿಸಲಾಗಿದೆ.

ಈ ಕುರಿತು ಐಪಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದು, “ಲಖನೌ ಸೂಪರ್ ಜೈಂಟ್ಸ್‌ ನ ಅವೇಶ್ ಖಾನ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ವಾಗ್ದಂಡನೆಗೆ ಗುರಿಯಾಗಿದ್ದಾರೆ. ಅವೇಶ್ ಖಾನ್ ಅವರು ಐಪಿಎಲ್ ನ ನೀತಿ ಸಂಹಿತೆಯ 2.2 ಹಂತ 1 ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಮತ್ತು ವಾಗ್ದಂಡನೆ ಮಂಜೂರಾತಿ  ಸ್ವೀಕರಿಸಿದ್ದಾರೆ. ನೀತಿ ಸಂಹಿತೆಯ ಹಂತ 1 ಉಲ್ಲಂಘನೆಗಾಗಿ, ಪಂದ್ಯದ ತೀರ್ಪುಗಾರರ ನಿರ್ಧಾರ ಅಂತಿಮವಾಗಿರುತ್ತದೆ”ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆರ್ ಸಿಬಿ ನಾಯಕನಿಗೂ ದಂಡ
ಇದೇ ವಳೆ ಆರ್ ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಅವರಿಗೂ ದಂಡ ವಿಧಿಸಲಾಗಿದೆ. ಸ್ಲೋ ಓವರ್ ರೇಟ್ ಗಾಗಿ ಆರ್ ಸಿಬಿ ನಾಯಕನಿಗೆ 12 ಲಕ್ಷ ರೂ ದಂಡ ಹಾಕಲಾಗಿದೆ. ಕೊನೆಯ ಓವರ್ ವೇಳೆ ಆರ್ ಸಿಬಿ ನಿಗದಿಯ ಸಮಯಕ್ಕಿಂತ ಎರಡು ಓವರ್ ಹಿಂದಿತ್ತು.

SCROLL FOR NEXT