ಜೈಪುರ: ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನ 26ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 10 ರನ್‌ಗಳ ರೋಚಕ ಗೆಲುವು ಸಾಧಿಸಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಲಕ್ನೋ ಸೂಪರ್ ಜೈಂಟ್ಸ್, ನಾಯಕ ಕೆಎಲ್ ರಾಹುಲ್(39) ಹಾಗೂ ಕೈಲ್ ಮೇಯರ್ಸ್(51) ಉತ್ತಮ ಆರಂಭದೊಂದಿಗೆ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿತು.
ಗೆಲುವಿಗೆ 155 ರನ್ ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡ, ನಿಗದಿತ 20 ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 144 ರನ್ ಗಳಿಸುವ ಮೂಲಕ 10 ರನ್ಗಳಿಂದ ಸೋಲನ್ನಪ್ಪಿಕೊಂಡಿತು.
ಇದನ್ನು ಓದಿ: ಹಾಲಿ IPL ಟೂರ್ನಿ ಮೇಲೂ ಮ್ಯಾಚ್ ಫಿಕ್ಸಿಂಗ್ ಕರಿನೆರಳು: RCB ವೇಗಿ ಮಹಮದ್ ಸಿರಾಜ್ ಮಾಹಿತಿ!, ಓರ್ವನ ಬಂಧನ
ರಾಜಸ್ಥಾನ ಪರ ಯಶಸ್ವಿ ಜೇಸ್ವಾಲ್ 44 ರನ್, ಜೊಸ್ ಬಟ್ಲರ್ 40 ರನ್, ನಾಯಕ ಸಂಜು ಸ್ಯಾಮ್ಸನ್ 2 ರನ್, ದೇವದತ್ ಪಡಿಕಲ್ 26 ರನ್, ಹಿಟ್ಮಾಯರ್ 2 ರನ್, ರಿಯಾನ್ ಪರಾಗ್ 15 ರನ್, ಡ್ರುವ್ ಜುರೇಲ್ ಶೂನ್ಯ, ರವಿಚಂದ್ರನ್ ಅಶ್ವಿನ್ 3 ರನ್ ಗಳಿಸಿದರು.