ಉಮರ್ ಅಕ್ಮಲ್ 
ಕ್ರಿಕೆಟ್

'ಮಗಳ ಸ್ಕೂಲ್ ಫೀಸ್ ಕಟ್ಟಲಾಗದೇ ಶಾಲೆಗೆ ಕಳುಹಿಸಿರಲಿಲ್ಲ': ಕಣ್ಣೀರು ಹಾಕಿದ ಪಾಕ್ ಸ್ಟಾರ್ ಕ್ರಿಕೆಟಿಗ

ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಮಾತ್ರವಲ್ಲದೆ ಆ ತಂಡದ ಪರ ಆಡುವ ಆಟಗಾರರಲ್ಲೂ ಭಾರೀ ಅನಿಶ್ಚಿತತೆ ಎಂತಹ ಪ್ರತಿಭೆಯನ್ನಾದರೂ ಮೂಲೆಗುಂಪು ಮಾಡುತ್ತದೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಉಮರ್ ಅಕ್ಮಲ್.. 

ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಮಾತ್ರವಲ್ಲದೆ ಆ ತಂಡದ ಪರ ಆಡುವ ಆಟಗಾರರಲ್ಲೂ ಭಾರೀ ಅನಿಶ್ಚಿತತೆ ಎಂತಹ ಪ್ರತಿಭೆಯನ್ನಾದರೂ ಮೂಲೆಗುಂಪು ಮಾಡುತ್ತದೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಉಮರ್ ಅಕ್ಮಲ್.. 

ಹೌದು.. ಅಂತರಾಷ್ಟ್ರೀಯ ಕ್ರಿಕೆಟ್ ಆಡಿದ ಆಟಗಾರರ ಜೀವನಶೈಲಿ ತುಂಬಾ ಶ್ರೀಮಂತವಾಗಿರುತ್ತದೆ ಎಂದು ಎಲ್ಲರೂ ಭಾವಿಸುತ್ತಾರೆ. ಟಿ20 ಲೀಗ್‌ಗಳ ಪ್ರವೇಶದೊಂದಿಗೆ ಕ್ರಿಕೆಟಿಗರ ಜೀವನ ಶೈಲಿ ಸಂಪೂರ್ಣವಾಗಿ ಬದಲಾಗಿದೆ. ಕೋಟಿ ಕೋಟಿ ಗಳಿಸುತ್ತಿದ್ದಾರೆ. ಆದರೆ ಇದೆಲ್ಲವೂ ನಾಣ್ಯದ ಒಂದು ಬದಿ ಮಾತ್ರ. 

ಮತ್ತೊಂದೆಡೆ, ಸ್ಟಾರ್ ಸ್ಥಾನಮಾನವನ್ನು ನಿಭಾಯಿಸಲಾಗದೆ ಮತ್ತು ಹಣದ ಕಾರಣದಿಂದ ತಮ್ಮ ಉತ್ತಮ ಜೀವನವನ್ನು ಕಳೆದುಕೊಂಡ ಅನೇಕ ಆಟಗಾರರಿದ್ದಾರೆ. ಅವರಲ್ಲಿ ಹೆಚ್ಚಿನವರು ಪಾಕಿಸ್ತಾನದಿಂದ ಬಂದವರು. ಈ ಹಿಂದೆ ಇಡೀ ಕ್ರಿಕೆಟ್ ಲೋಕವನ್ನು ಬೆಚ್ಚಿ ಬೀಳಿಸಿದ್ದ ಸ್ಪಾಟ್ ಫಿಕ್ಸಿಂಗ್‌ ಪ್ರಕರಣದಿಂದಾಗಿ ಸಲ್ಮಾನ್ ಭಟ್, ಮೊಹಮ್ಮದ್ ಆಸಿಫ್ ಮತ್ತು ಮೊಹಮ್ಮದ್ ಅಮೀರ್ ತಮ್ಮ ವೃತ್ತಿಜೀವನವನ್ನು ಹಾಳುಮಾಡಿಕೊಂಡಿದ್ದರು. ಅವರಂತೆಯೇ ಮತ್ತೊಬ್ಬ ಪಾಕಿಸ್ತಾನ ಕ್ರಿಕೆಟಿಗ ತನ್ನ ವೃತ್ತಿಜೀವನವನ್ನು ಹಾಳು ಮಾಡಿಕೊಂಡಿದ್ದು, ಸದ್ಯ ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. 

ಆ ಆಟಗಾರ ಬೇರಾರೂ ಅಲ್ಲ.. ಉಮರ್ ಅಕ್ಮಲ್.. ಪಾಕಿಸ್ತಾನ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಕಮ್ರಾನ್ ಅಕ್ಮಲ್ ಸಹೋದರ ಉಮ್ರಾನ್ ಅಕ್ಮಲ್ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ಮಿಂಚಿದ್ದರು. ಆಗ ಪಾಕಿಸ್ತಾನಕ್ಕೆ ಒಬ್ಬ ಶ್ರೇಷ್ಠ ಬ್ಯಾಟ್ಸ್ ಮನ್ ಸಿಕ್ಕಿದ್ದಾನೆ ಎಂಬ ಪ್ರಚಾರವಿತ್ತು. ಆದರೆ 2020 ರಲ್ಲಿ, ಬುಕ್ಕಿಗಳು ಫಿಕ್ಸಿಂಗ್ಗಾಗಿ ತನ್ನನ್ನು ಸಂಪರ್ಕಿಸಿದ್ದಾರೆ ಎಂಬ ಅಂಶವನ್ನು ಮರೆಮಾಚಿದ ನಂತರ ಪಿಸಿಬಿ ಉಮ್ರಾನ್ ಅವರನ್ನು 3 ವರ್ಷಗಳ ಕಾಲ ನಿಷೇಧಿಸಿತು. ಆದರೆ ಅವರು ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದಾಗ, ಶಿಕ್ಷೆಯನ್ನು 12 ತಿಂಗಳಿಗೆ ಇಳಿಸಲಾಯಿತು. 

ಅವರ ನಿಷೇಧವು 2021ರಲ್ಲಿ ಕೊನೆಗೊಂಡಿತಾದರೂ ಬಳಿಕ ಅವರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಗಲಿಲ್ಲ. ಸಂದರ್ಶನವೊಂದರಲ್ಲಿ, ಉಮ್ರಾನ್ ಅಕ್ಮಲ್ ಅವರು ನಿಷೇಧದ ಸಮಯದಲ್ಲಿ ಎದುರಿಸಿದ ಕಠಿಣ ಪರಿಸ್ಥಿತಿಗಳ ಬಗ್ಗೆ ಮಾತನಾಡಿದ್ದು, ಆ ಸಮಯದಲ್ಲಿ ತಾನು ತುಂಬಾ ಕಠಿಣ ಪರಿಸ್ಥಿತಿಗಳನ್ನು ಎದುರಿಸಿದ್ದೇನೆ. ಮಗಳ ಶಾಲಾ ಶುಲ್ಕವನ್ನೂ ಕಟ್ಟಲಾಗದಷ್ಟು ದರಿದ್ರ ಸ್ಥಿತಿಯಲ್ಲಿದ್ದೆ. ಸುಮಾರು 9 ತಿಂಗಳ ಮಗಳನ್ನು ಶಾಲೆಗೆ ಕಳುಹಿಸಲು ಸಾಧ್ಯವಾಗಲಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. ಅಂದಹಾಗೆ ಉಮರ್ ಅಕ್ಮಲ್ ಈ ಹೇಳಿಕೆ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಉಮರ್ ಅಕ್ಮಲ್ ಗೆ ಬರೊಬ್ಬರಿ 7 ಮಂದಿ ಸಹೋದರರು. ಪ್ರಮುಖವಾಗಿ ಅವರ ಸಹೋದರ ಕಮ್ರಾನ್ ಅಕ್ಮಲ್ ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟರ್. ಉಮರ್ ಅಕ್ಮಲ್ ಕೂಡ ಪಾಕಿಸ್ತಾನದಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದಾರೆ. ಈ ಹಿಂದೆ ಇದೇ ಉಮರ್ ಅಕ್ಮಲ್ ಲಂಡನ್ ನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ರನ್ನು ಅವರ ನಿವಾಸಕ್ಕೇ ಹೋಗಿ ಭೇಟಿಯಾಗಿ ಬಂದಿದ್ದರು. ಅಲ್ಲದೆ ಅವರ ಪತ್ನಿಯ ತಂದೆ ಪಾಕಿಸ್ತಾನದ ದೊಡ್ಡ ಉದ್ಯಮಿ. ಹೀಗಿರುವಾಗ ಉಮರ್ ಅಕ್ಮಲ್ ರ ಈ ಹೇಳಿಕೆ ಪಾಕಿಸ್ತಾನದಲ್ಲಿ ಸಾಕಷ್ಟು ಚರ್ಚೆಗೀಡಾಗುತ್ತಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT