ಸಾಂದರ್ಭಿಕ ಚಿತ್ರ 
ಕ್ರಿಕೆಟ್

ಟೆಸ್ಟ್ ರ‍್ಯಾಂಕಿಂಗ್‌ ನಲ್ಲಿ ಭಾರತಕ್ಕೆ ಅಗ್ರಸ್ಥಾನ: ತಾಂತ್ರಿಕ ದೋಷ, ಐಸಿಸಿ ಕ್ಷಮೆಯಾಚನೆ

ಪುರುಷರ ಟೆಸ್ಟ್ ತಂಡದ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾದ ಬದಲು ಭಾರತ ನಂಬರ್ 1 ಎಂದು ತಾಂತ್ರಿಕ ದೋಷದಿಂದ ಆದ ಪ್ರಮಾದಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಐಸಿಸಿ ಕ್ಷಮೆಯಾಚಿಸಿದೆ.

ದುಬೈ: ಪುರುಷರ ಟೆಸ್ಟ್ ತಂಡದ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾದ ಬದಲು ಭಾರತ ನಂಬರ್ 1 ಎಂದು ತಾಂತ್ರಿಕ ದೋಷದಿಂದ ಆದ ಪ್ರಮಾದಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಐಸಿಸಿ ಕ್ಷಮೆಯಾಚಿಸಿದೆ.

ಭಾರತ ಟೆಸ್ಟ್ ಶ್ರೇಯಾಂಕದಲ್ಲಿ 'ಅಗ್ರಸ್ಥಾನ' ಪಡೆದ ಕೆಲವೇ ಗಂಟೆಗಳ ನಂತರ ಐಸಿಸಿ ಮತ್ತೊಂದು ಪರಿಷ್ಕೃತ ಪಟ್ಟಿಯನ್ನು ಬಿಡುಗಡೆ ಮಾಡಿತು. ಇದರಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಎರಡನೇ ಸ್ಥಾನಕ್ಕೆ ಮರಳಿದೆ.

ನಾಗ್ಪುರದಲ್ಲಿ ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ವಿರುದ್ಧ  ಟೀಂ ಇಂಡಿಯಾ ತನ್ನ ಇನ್ನಿಂಗ್ಸ್ ಮತ್ತು 132 ರನ್‌ಗಳ ಜಯದ ನಂತರ ಪ್ರಕಟಗೊಂಡ ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ ನಲ್ಲಿ ಭಾರತ ಅಗ್ರಸ್ಥಾನಕ್ಕೇರಿದೆ ಎಂಬ ಭಾವ ಕೆಲ ಹೊತ್ತು ಮನೆ ಮಾಡಿತ್ತು.

ಗುರುವಾರ ತಾಂತ್ರಿಕ ದೋಷವನ್ನು ಐಸಿಸಿ ಒಪ್ಪಿಕೊಂಡಿದ್ದು,  ಫೆಬ್ರವರಿ 15 ರಂದು ತಾಂತ್ರಿಕ ದೋಷದಿಂದಾಗಿ ತನ್ನ ವೆಬ್ ಸೈಟ್ ನಲ್ಲಿ ಸ್ವಲ್ಪ ಹೊತ್ತಿನವರೆಗೂ ಭಾರತ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿರುವುದಾಗಿ ತಪ್ಪಾಗಿ ಪ್ರದರ್ಶಿಸಲಾಗಿದೆ ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.

ವೆಸ್ಟ್ ಇಂಡೀಸ್ ವಿರುದ್ಧ ಜಿಂಬಾಬ್ವೆಯ ಎರಡು ಪಂದ್ಯಗಳ ಸರಣಿ ಮುಕ್ತಾಯದ ನಂತರ ಆಸ್ಟ್ರೇಲಿಯಾ ತಂಡ ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ ನಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆಯಲಿದೆ. ಆಸ್ಟ್ರೇಲಿಯಾ 126 ರೇಟಿಂಗ್ ನಲ್ಲಿ ಅಗ್ರಸ್ಥಾನದಲ್ಲಿದ್ದರೆ ಭಾರತ 115 ರೇಟಿಂಗ್ ನಲ್ಲಿ ಎರಡನೇ ಸ್ಥಾನದಲ್ಲಿರುವುದಾಗಿ ಎಂದು ಐಸಿಸಿ ಹೇಳಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT