ಕ್ರಿಕೆಟ್

ಸಂಕಷ್ಟದಲ್ಲಿ ನೇಪಾಳ ಟಿ20 ಲೀಗ್: ಆಟಗಾರರಿಗೆ ಸಂಭಾವನೆ ನೀಡದೆ ಸಂಘಟಕರು ಪಲಾಯನ!

Vishwanath S

ನೇಪಾಳ ಟಿ20 ಲೀಗ್‌ನ ಆಯೋಜಕರು ಕೆಲವು ವಿದೇಶಿ ಆಟಗಾರರನ್ನು ಸಂಭಾವನೆ ನೀಡದೆ ದೇಶವನ್ನು ತೊರೆದಿದ್ದಾರೆ. ಆಟಗಾರರು ಮತ್ತು ಪ್ರಸಾರಕರು ವೇತನವಿಲ್ಲದೆ ಮೈದಾನಕ್ಕೀಳಿಯಲು ನಿರಾಕರಿಸಿದ್ದರಿಂದ ಲೀಗ್ ರದ್ಧಾಗುವ ಪರಿಸ್ಥಿತಿ ಎದುರಾಗಿದೆ.

ಸೆವೆನ್ 3 ಸ್ಪೋರ್ಟ್ಸ್ ಸಂಸ್ಥಾಪಕ ಜತಿನ್ ಅಹ್ಲುವಾಲಿಯಾ ಅವರು ಭಾರತಕ್ಕೆ ಪಲಾಯನವಾಗಿದ್ದಾರೆ ಎಂದು ವರದಿಯಾಗಿದೆ. ಎಮರ್ಜಿಂಗ್ ಕ್ರಿಕೆಟ್ ವೆಬ್‌ಸೈಟ್‌ನ ವರದಿಯ ಪ್ರಕಾರ, ಸೆವೆನ್ 3 ಸ್ಪೋರ್ಟ್ಸ್ ಕಂಪನಿಯು ನೇಪಾಳದ ಕ್ರಿಕೆಟ್ ಅಸೋಸಿಯೇಷನ್ ​(CAN) ನೊಂದಿಗೆ ಒಪ್ಪಂದ ಮಾಡಿಕೊಂಡಿತು. ಹೀಗಾಗಿ ಫ್ರಾಂಚೈಸ್ ಲೀಗ್ ಅಸ್ತಿತ್ವಕ್ಕೆ ಬಂದಿತ್ತು. 

ಸೆವೆನ್ 3 ಸ್ಪೋರ್ಟ್ಸ್ ಮೊದಲ ಸೀಸನ್‌ಗಾಗಿ 33 ಮತ್ತು 39 ಮಿಲಿಯನ್ ನೇಪಾಳಿ ರೂಪಾಯಿಗಳ (US$250,000–290,000) ಶುಲ್ಕವನ್ನು ಪಾವತಿಸಬೇಕಾಗಿತ್ತು. ಆದರೆ ನೀಡಿಲ್ಲ ಈ ಹಿನ್ನಲೆಯಲ್ಲಿ ಪಂದ್ಯದ ನೇರ ಪ್ರಸಾರದ ಹಕ್ಕು ಪಡೆದುಕೊಂಡಿರುವ ಸಂಸ್ಥೆಗಳು, ಕಾಮೆಂಟೇಟರ್ ಗಳು ತಾವು ಮುಂದುವರೆಯುವುದಿಲ್ಲ ಎಂದು ಹೇಳುತ್ತಿದ್ದಾರೆ. 

ಏತನ್ಮಧ್ಯೆ, ಹಲವಾರು ವಿದೇಶಿ ಆಟಗಾರರು ದಂಗೆ ಎದ್ದಿದ್ದು, ಕಠ್ಮಂಡು ನೈಟ್ಸ್ ಮತ್ತು ವಿರಾಟ್‌ನಗರ ಸೂಪರ್ ಕಿಂಗ್ಸ್ ನಡುವಿನ ಆರಂಭಿಕ ಪಂದ್ಯವು ಎರಡು ಗಂಟೆಗಳ ತಡವಾಗಿ ಪ್ರಾರಂಭವಾಯಿತು. ಆದರೆ ಒಂಬತ್ತು ಓವರ್‌ಗಳಿಗೆ ಮೊಟಕುಗೊಂಡಿತು.

SCROLL FOR NEXT