ಕ್ರಿಕೆಟ್

ಸ್ಥಿರತೆ ಕಾಪಾಡಿಕೊಳ್ಳುವಲ್ಲಿ ವಿಫಲವಾದರೂ ರಾಹುಲ್ ಗೆ ಮಣೆ: ಆಯ್ಕೆದಾರರ ನಡೆ ಟೀಕಿಸಿದ ಕರ್ನಾಟಕದ ಮಾಜಿ ವೇಗಿ ವೆಂಕಿ

Nagaraja AB

ನವದೆಹಲಿ: ಸ್ಥಿರ ಪ್ರದರ್ಶನ ತೋರುವಲ್ಲಿ ವಿಫಲವಾಗುತ್ತಿದ್ದರೂ ನಿರಂತರವಾಗಿ ಕನ್ನಡಿಗ ಕೆಎಲ್ ರಾಹುಲ್ ಅವರಿಗೆ ಟೀಂ ಇಂಡಿಯಾ ಆಯ್ಕೆದಾರರು ಮಣೆ ಹಾಕುತ್ತಿರುವುದಕ್ಕೆ ಕನ್ನಡಿಗರೇ ಆದ ವೇಗಿ ವೆಂಕಟೇಶ್ ಪ್ರಸಾದ್ ಕಿಡಿಕಾರಿದ್ದಾರೆ. ಅಲ್ಲದೇ  ಇಶಾನ್ ಕಿಶಾನ್ ಗಿಂತ ಶುಭ್ ಮನ್ ಗಿಲ್ ಗೆ ಎರಡನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ನೀಡಿದ್ದಕ್ಕೂ ಪ್ರಸಾದ್ ಟೀಕಿಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಪ್ರಸಾದ್, ನಿಗದಿತ ಓವರ್ ಗಳ ಪಂದ್ಯದಲ್ಲಿ ಭಾರತದ ಪ್ರದರ್ಶನಕ್ಕೆ ನೋವುಂಟು ಮಾಡುತ್ತಿರುವವರನ್ನು ಬದಲಾಯಿಸಬೇಕು ಎಂದು ಒತ್ತಾಯಿಸಿದ್ದಾರೆ. ಕಳೆದ ಏಕದಿನ ಸರಣಿಯಲ್ಲಿ ದ್ವಿಶತಕ ಭಾರಿಸಿದ ಆಟಗಾರನಿಗೆ ನ್ಯಾಯಯುತವಾಗಿ ಅವಕಾಶ ನೀಡಬೇಕು ಎಂದು ಅವರು ಹೇಳಿದ್ದಾರೆ.

ಟೀಂ ಇಂಡಿಯಾ ಪರ 33 ಟೆಸ್ಟ್ ಹಾಗೂ 161 ಏಕದಿನ ಪಂದ್ಯಗಳನ್ನಾಡಿರುವ ವೆಂಕಟೇಶ್ ಪ್ರಸಾದ್, ಪ್ರಸ್ತುತ ಟೀಂ ಇಂಡಿಯಾದಲ್ಲಿ ಪ್ರದರ್ಶನ ತೋರುವವರಿಗೆ ಅವಕಾಶ ನೀಡುವಂತೆ ಆಯ್ಕೆದಾರರನ್ನು ಒತ್ತಾಯಿಸಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಕೆಎಲ್ ರಾಹುಲ್, ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಹಾಗೂ ವೆಂಕಟೇಶ್ ಪ್ರಸಾದ್ ಮೂವರು ಕನ್ನಡಿಗರೇ ಆಗಿದ್ದಾರೆ. 

SCROLL FOR NEXT