ಕ್ರಿಕೆಟ್

ಕಾರು ಅಪಘಾತದ ನಂತರ ರಿಷಬ್ ಪಂತ್ ಐಪಿಎಲ್ ನಿಂದ ಹೊರಗುಳಿಯಲಿದ್ದಾರೆ: ಗಂಗೂಲಿ

Vishwanath S

ನವದೆಹಲಿ: ಕಳೆದ ತಿಂಗಳು ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಭಾರತದ ರಿಷಬ್ ಪಂತ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟಪಡಿಸಿದ್ದಾರೆ.

ಪಂತ್ ಅವರು ವಾರ್ಷಿಕ ಎರಡು ತಿಂಗಳ ಪಂದ್ಯಾವಳಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದಾರೆ. ಐಪಿಎಲ್ ಟೂರ್ನಿ ಮಾರ್ಚ್ ಅಂತ್ಯ ಅಥವಾ ಏಪ್ರಿಲ್‌ನಲ್ಲಿ ಪ್ರಾರಂಭವಾಗಲಿದೆ. ಆದರೆ ರಿಷಬ್ ಪಂತ್ ಐಪಿಎಲ್‌ಗೆ ಲಭ್ಯವಿರುವುದಿಲ್ಲ ಎಂದು ಡೆಲ್ಲಿ ಕ್ಯಾಪಿಟಲ್ಸ್‌ಗೆ ಕ್ರಿಕೆಟ್ ನಿರ್ದೇಶಕರಾಗಿ ಆಯ್ಕೆಯಾಗಲಿರುವ ಗಂಗೂಲಿ ಹೇಳಿರುವುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಐಪಿಎಲ್ ಅತ್ಯುತ್ತಮ ಟೂರ್ನಿಯಾಗಿದ್ದು ಅಲ್ಲಿ ಉತ್ತಮ ಆಟ ಆಡಬೇಕಿದೆ. ಆದರೆ ರಿಷಬ್ ಪಂತ್ ಅವರು ಗಾಯಗೊಂಡಿರುವುದರಿಂದ ಡೆಲ್ಲಿ ಕ್ಯಾಪಿಟಲ್ಸ್ ಮೇಲೆ ಪರಿಣಾಮ ಬೀರುತ್ತದೆ ಎಂದು ಗಂಗೂಲಿ ಹೇಳಿದರು.

ಅಪಘಾತದ ನಂತರ 25 ವರ್ಷದ ರಿಷಬ್ ಪಂತ್ ಆಸ್ಪತ್ರೆಗೆ ಸಾಗಿಸಲಾಯಿತು. ಅವರಿಗೆ ಹೆಚ್ಚಿನ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಗಾಗಿ ವಿಮಾನದ ಮೂಲಕ ಮುಂಬೈಗೆ ಸಾಗಿಸಲಾಗಿದ್ದು ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ವಿಕೆಟ್‌ಕೀಪರ್ ಮತ್ತು ಸ್ಫೋಟಕ ಬ್ಯಾಟ್ಸ್‌ಮನ್ ಪಂತ್ ಟೆಸ್ಟ್ ತಂಡದ ಮುಖ್ಯ ಆಧಾರವಾಗಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಭಾರತದ ಕೆಲವು ಸ್ಮರಣೀಯ ಗೆಲುವುಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಆಸ್ಟ್ರೇಲಿಯಾ ಭಾರತ ಪ್ರವಾಸದಲ್ಲಿ ನಾಲ್ಕು ಟೆಸ್ಟ್‌ ಪಂದ್ಯಗಳನ್ನು ಆಡಲಿದ್ದು ಈ ಸರಣಿಗೆ ರಿಷಬ್ ಪಂತ್ ಹೊರಗುಳಿಯಲಿದ್ದಾರೆ.

SCROLL FOR NEXT