ಕ್ರಿಕೆಟ್

ಭಾರತದ ರೇಣುಕಾ ಸಿಂಗ್ ಗೆ 'ಐಸಿಸಿ ವರ್ಷದ ಉದಯೋನ್ಮುಖ ಆಟಗಾರ್ತಿ' ಪ್ರಶಸ್ತಿ

Nagaraja AB

ದುಬೈ: 2022ರಲ್ಲಿ ಸ್ವಿಂಗ್ ಬೌಲಿಂಗ್ ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಟೀಂ ಇಂಡಿಯಾ ಮಹಿಳಾ ತಂಡದ ವೇಗಿ ರೇಣುಕಾ ಸಿಂಗ್ ಐಸಿಸಿ ಉದಯೋನ್ಮುಖ ಮಹಿಳಾ ಕ್ರಿಕೆಟ್ ಆಟಗಾರ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ-ಐಸಿಸಿ ಬುಧವಾರ ಈ ಪ್ರಶಸ್ತಿಯನ್ನು ಘೋಷಿಸಿದೆ. ರೇಣುಕಾ ಸಿಂಗ್ ಏಕದಿನ ಪಂದ್ಯಗಳಲ್ಲಿ 18 ವಿಕೆಟ್ ಕಬಳಿಸಿದ್ದಾರೆ. ಟಿ-20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 22 ವಿಕೆಟ್ ಪಡೆದಿದ್ದಾರೆ.

2022ನೇ ವರ್ಷದ ಉದಯೋನ್ಮುಖ ಆಟಗಾರ್ತಿ ಪಟ್ಟಿಯಲ್ಲಿದ್ದ ಆಸ್ಟ್ರೇಲಿಯಾದ ಡಾರ್ಸಿಯಾ ಬ್ರೌನ್ ಮತ್ತು ಇಂಗ್ಲೆಂಡ್ ನ ಆಲಿಸ್ ಕ್ಯಾಪ್ಸೆ ಮತ್ತು ಭಾರತದ ಯಾಸ್ತಿಕಾ ಭಾಟಿಯಾ ಅವರನ್ನು ಹಿಂದಿಕ್ಕಿ ರೇಣುಕಾ ಸಿಂಗ್ ಈ ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 
 

SCROLL FOR NEXT