ತಮೀಮ್ ಇಕ್ಬಾಲ್ 
ಕ್ರಿಕೆಟ್

ವಿಶ್ವಕಪ್‌ಗೆ 3 ತಿಂಗಳ ಮೊದಲೇ ಬಾಂಗ್ಲಾಗೆ ಆಘಾತ: ಕಣ್ಣೀರಿಡುತ್ತಾ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಏಕದಿನ ನಾಯಕ!

ಬಾಂಗ್ಲಾದೇಶದ ODI ನಾಯಕ ತಮೀಮ್ ಇಕ್ಬಾಲ್ 2023ರ ವಿಶ್ವಕಪ್‌ಗೆ ಮೂರು ತಿಂಗಳ ಮೊದಲು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಈ ಮೂಲಕ ತಮೀಮ್ ಇಕ್ಬಾಲ್ ಅವರ 16 ವರ್ಷಗಳ ಅಂತಾರಾಷ್ಟ್ರೀಯ ವೃತ್ತಿಜೀವನ ಅಂತ್ಯಗೊಂಡಿದೆ. 

ಢಾಕಾ: ಬಾಂಗ್ಲಾದೇಶದ ODI ನಾಯಕ ತಮೀಮ್ ಇಕ್ಬಾಲ್ 2023ರ ವಿಶ್ವಕಪ್‌ಗೆ ಮೂರು ತಿಂಗಳ ಮೊದಲು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಈ ಮೂಲಕ ತಮೀಮ್ ಇಕ್ಬಾಲ್ ಅವರ 16 ವರ್ಷಗಳ ಅಂತಾರಾಷ್ಟ್ರೀಯ ವೃತ್ತಿಜೀವನ ಅಂತ್ಯಗೊಂಡಿದೆ. 

ಚಟ್ಟೋಗ್ರಾಮ್‌ನಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಮೀಮ್ ಇಕ್ಬಾಲ್ ನಿವೃತ್ತಿ ಘೋಷಿಸಿದರು. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ತಮೀಮ್ ಇಕ್ಬಾಲ್ ಬದಲಿಗೆ ಏಕದಿನ ನಾಯಕನ ಹೆಸರನ್ನು ಪ್ರಕಟಿಸಿಲ್ಲ. ಶಕೀಬ್ ಅಲ್ ಹಸನ್ ಬಾಂಗ್ಲಾದೇಶದ ಟಿ20 ತಂಡದ ನಾಯಕರಾಗಿದ್ದರೆ, ಲಿಟನ್ ದಾಸ್ ಟೆಸ್ಟ್‌ ತಂಡದ ಉಸ್ತುವಾರಿ ವಹಿಸಿದ್ದಾರೆ.

34 ವರ್ಷದ ತಮೀಮ್ ಇಕ್ಬಾಲ್ ಕಳೆದ ವರ್ಷ ಇದೇ ಸಮಯದಲ್ಲಿ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು. ಇಕ್ಬಾಲ್ ತನ್ನ ಕೊನೆಯ ಟೆಸ್ಟ್ ಪಂದ್ಯವನ್ನು ಐರ್ಲೆಂಡ್ ವಿರುದ್ಧ ಏಪ್ರಿಲ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಆಡಿದ್ದರು. ತಮೀಮ್ ಇಕ್ಬಾಲ್ 2007ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. 2007ರ ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಬಾಂಗ್ಲಾದೇಶದ ಐತಿಹಾಸಿಕ ವಿಜಯದಲ್ಲಿ ಅವರು ಅರ್ಧಶತಕವನ್ನು ಗಳಿಸಿದರು.

ತಮೀಮ್ ಇಕ್ಬಾಲ್ ಬಾಂಗ್ಲಾದೇಶ ಪರ ಏಕದಿನದಲ್ಲಿ ಅತಿ ಹೆಚ್ಚು ರನ್ (8313) ಮತ್ತು ಶತಕ (14) ಗಳಿಸಿದ ಬ್ಯಾಟ್ಸ್‌ಮನ್ ಆಗಿದ್ದಾರೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಂತರ ಸಕ್ರಿಯ ಕ್ರಿಕೆಟಿಗರಲ್ಲಿ ಮೂರನೇ ಅತಿ ಹೆಚ್ಚು ODI ರನ್ ಗಳಿಸಿದ ಆಟಗಾರರಾಗಿದ್ದಾರೆ. ಅದೇ ಸಮಯದಲ್ಲಿ ಟೆಸ್ಟ್‌ಗಳಲ್ಲಿ ತಮೀಮ್ ಇಕ್ಬಾಲ್ 70 ಪಂದ್ಯಗಳಲ್ಲಿ 10 ಶತಕಗಳು ಸೇರಿದಂತೆ 38.89 ಸರಾಸರಿಯಲ್ಲಿ 5134 ರನ್ ಗಳಿಸಿದರು. ಅವರು ಬಾಂಗ್ಲಾದೇಶ ಪರ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ಎರಡನೇ ಆಟಗಾರರಾಗಿದ್ದಾರೆ.

ODI ನಾಯಕತ್ವದಲ್ಲಿ ತಮೀಮ್ ಇಕ್ಬಾಲ್ ಮಶ್ರಫೆ ಮೊರ್ತಾಜಾಗಿಂತ ಉತ್ತಮ ಗೆಲುವಿನ ಶೇಕಡಾವಾರು ಹೊಂದಿದ್ದಾರೆ. ತಮೀಮ್ 37 ODIಗಳಲ್ಲಿ ಬಾಂಗ್ಲಾದೇಶದ ನಾಯಕರಾಗಿದ್ದರು. ಅದರಲ್ಲಿ ಬಾಂಗ್ಲಾದೇಶವು 21 ಪಂದ್ಯಗಳನ್ನು ಗೆದ್ದಿದೆ. ತಮೀಮ್ ಇಕ್ಬಾಲ್ ನೇತೃತ್ವದ ಬಾಂಗ್ಲಾದೇಶ ODI ಸೂಪರ್ ಲೀಗ್‌ನಲ್ಲಿ ಮೂರನೇ ಸ್ಥಾನಕ್ಕೆ ಮತ್ತು ವಿಶ್ವಕಪ್‌ಗೆ ನೇರ ಅರ್ಹತೆ ಗಳಿಸಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Delhi Red Fort blast: ಉಗ್ರ ಉಮರ್‌ಗೆ ಆಶ್ರಯ ನೀಡಿದ್ದ ಆರೋಪಿ ಬಂಧನ, NIA ವಿಚಾರಣೆ

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

SCROLL FOR NEXT