ಕ್ರಿಕೆಟ್

2ನೇ ಟೆಸ್ಟ್: ಪಂದ್ಯಕ್ಕೆ ಮಳೆ ಅಡ್ಡಿ; ವೆಸ್ಟ್ ಇಂಡೀಸ್ 208/5, 230 ರನ್ ಹಿನ್ನಡೆ!

Vishwanath S

ಪೋರ್ಟ್ ಆಫ್ ಸ್ಪೈನ್: ಪ್ರವಾಸಿ ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ನಷ್ಟಕ್ಕೆ 208 ರನ್ ಪೇರಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ 438 ರನ್ ಗಳಿಗೆ ಆಲೌಟ್ ಆಗಿತ್ತು. ನಂತರ ಇನ್ನಿಂಗ್ಸ್ ಆರಂಭಿಸಿದ್ದ ವೆಸ್ಟ್ ಇಂಡೀಸ್ ಮೂರನೇ ದಿನದಾಟದಂದು 5 ವಿಕೆಟ್ ನಷ್ಟಕ್ಕೆ 208 ರನ್ ಪೇರಿಸಿತ್ತು. ಈ ವೇಳೆ ಮಳೆ ಬಂದಿದ್ದರಿಂದ ಪಂದ್ಯವನ್ನು ನಿಲ್ಲಿಸಲಾಯಿತು. 

ಸದ್ಯ ವೆಸ್ಟ್ ಇಂಡೀಸ್ 230 ರನ್ ಗಳ ಹಿನ್ನಡೆ ಅನುಭವಿಸಿದೆ. 28 ರನ್ ಪೇರಿಸಿರುವ ಅಲಿಕ್ ಅಥಾನಾಜೆ ಅಜೇಯ 28 ರನ್ ಪೇರಿಸಿ ಕಣದಲ್ಲಿದ್ದಾರೆ. ಇನ್ನು ಮೂರನೇ ದಿನದಾಟ ಮುಗಿಯಲು 33 ಓವರ್ ಗಳು ಬಾಕಿ ಇವೆ. ವಿಂಡೀಸ್ ಪರ ಕ್ರೇಗ್ ಬ್ರಾಥ್‌ವೈಟ್ 75, ಟಾಗೆನರೈನ್ ಚಂದ್ರಪಾಲ್ 33, ಕಿರ್ಕ್ ಮೆಕೆಂಜಿ 32, ಜೆರ್ಮೈನ್ ಬ್ಲಾಕ್ವುಡ್ 20 ರನ್ ಪೇರಿಸಿ ಔಟಾಗಿದ್ದಾರೆ.

ಭಾರತ ಪರ ಯಶಸ್ವಿ ಜೈಸ್ವಾಲ್ 57, ರೋಹಿತ್ ಶರ್ಮಾ 80, ವಿರಾಟ್ ಕೊಹ್ಲಿ 121, ರವೀಂದ್ರ ಜಡೇಜಾ 61 ಮತ್ತು ರವಿಚಂದ್ರನ್ ಅಶ್ವಿನ್ 56 ರನ್ ಪೇರಿಸಿದ್ದಾರೆ.

SCROLL FOR NEXT