ಕ್ರಿಕೆಟ್

ಸ್ಟೀವ್ ಸ್ಮಿತ್ ಈ ಪೀಳಿಗೆಯ ಅತ್ಯುತ್ತಮ ಟೆಸ್ಟ್ ಬ್ಯಾಟರ್: ವಿರಾಟ್ ಕೊಹ್ಲಿ ಪ್ರಶಂಸೆ

Nagaraja AB

ಲಂಡನ್: ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಈ ಪೀಳಿಗೆಯ ಅತ್ಯುತ್ತಮ ಟೆಸ್ಟ್ ಬ್ಯಾಟರ್ ಎಂದು ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಡಿ ಹೊಗಳಿದ್ದಾರೆ. ಸ್ಟೀವ್ ಸ್ಮಿತ್ ಅವರ ಸ್ಥಿರತೆ ಮತ್ತು ನಂಬಲು ಅಸಾಧ್ಯವಾದ ರನ್ ಸರಾಸರಿಯನ್ನು ಪರಿಗಣಿಸಿ ಕೊಹ್ಲಿ ಈ ರೀತಿ ಶ್ಲಾಘಿಸಿದ್ದಾರೆ. ಸ್ಮಿತ್ ಬಗ್ಗೆ ಕೊಹ್ಲಿಯ ಕಾಮೆಂಟ್‌ಗಳು ಆಸ್ಟ್ರೇಲಿಯನ್‌ಗೆ ದೊಡ್ಡ ಪ್ರಶಂಸೆಯಾಗಿದೆ ಏಕೆಂದರೆ ಅವರು ಸಹ ಪ್ರಸ್ತುತ ಪೀಳಿಗೆಯ ಮತ್ತೋರ್ವ ದೊಡ್ಡ ಬ್ಯಾಟರ್ ಆಗಿದ್ದಾರೆ. 

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಮುಂಚಿತವಾಗಿ ಮಾತನಾಡಿದ ಕೊಹ್ಲಿ, "ನನ್ನ ಪ್ರಕಾರ, ಸ್ಟೀವ್ ಸ್ಮಿತ್ ಈ ಪೀಳಿಗೆಯ ಅತ್ಯುತ್ತಮ ಟೆಸ್ಟ್ ಆಟಗಾರ. ಅದನ್ನು ಅವರು ಪ್ರದರ್ಶಿಸಿದ್ದಾರೆ. ಅವರ ಆಟದಲ್ಲಿನ ನಿರಂತರತೆ ಅದ್ಬುತವಾಗಿದೆ ಎಂದು ಹೇಳಿದರು. 

ಸ್ವೀವ್ ಸ್ಮಿತ್ ಅವರ ದಾಖಲೆ ಎಲ್ಲರಿಗೂ ತಿಳಿದಿದೆ, 85-90 ಟೆಸ್ಟ್‌ಗಳಲ್ಲಿ 60 ರ ಸರಾಸರಿ ಹೊಂದಿದ್ದಾರೆ, ಇದು ನಂಬಲ ಸಾಧ್ಯವಾಗಿದೆ. ಅವರು ರನ್ ಗಳಿಸುವ ಸ್ಥಿರತೆ ಮತ್ತು ಪ್ರಭಾವವನ್ನು ಕಳೆದ 10 ವರ್ಷಗಳಲ್ಲಿ ಯಾವುದೇ ಟೆಸ್ಟ್ ಆಟಗಾರರಲ್ಲಿ ನೋಡಿಲ್ಲ. ಇದು ಅವರ ಕೌಶಲ್ಯ ಮತ್ತು ಮನೋಧರ್ಮಕ್ಕೆ ಮನ್ನಣೆಯಾಗಿದೆ ಎಂದು ಕೊಹ್ಲಿ ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದರು.

34 ವರ್ಷದ ಸ್ಮಿತ್ 96 ಟೆಸ್ಟ್‌ಗಳಿಂದ 59.80 ಸರಾಸರಿಯಲ್ಲಿ 30 ಶತಕ ಮತ್ತು 37 ಅರ್ಧಶತಕಗಳೊಂದಿಗೆ 8,792 ರನ್ ಗಳಿಸಿದ್ದಾರೆ. 34 ವರ್ಷದ ಕೊಹ್ಲಿ, ಈ ಪೀಳಿಗೆಯ ಅತ್ಯುತ್ತಮ ಆಲ್-ಫಾರ್ಮ್ ಬ್ಯಾಟರ್ ಆಗಿದ್ದು, 108 ಟೆಸ್ಟ್‌ಗಳಿಂದ 48.93 ಸರಾಸರಿಯಲ್ಲಿ 28 ಶತಕ ಮತ್ತು 28 ಅರ್ಧಶತಕಗಳ ಸಹಾಯದಿಂದ 8, 416 ರನ್ ಗಳಿಸಿದ್ದಾರೆ.

SCROLL FOR NEXT