ಡಬ್ಲ್ಯುಪಿಎಲ್ 2023 
ಕ್ರಿಕೆಟ್

ಡಬ್ಲ್ಯುಪಿಎಲ್ 2023: ಯುಪಿ ವಿರುದ್ಧ ಡೆಲ್ಲಿ ತಂಡಕ್ಕೆ ಭರ್ಜರಿ 42 ರನ್ ಜಯ

ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ನ ಯುಪಿ- ಡೆಲ್ಲಿ ತಂಡದ ನಡುವಿನ ಪಂದ್ಯದಲ್ಲಿ ಡೆಲ್ಲಿ ತಂಡ ಉತ್ತರ ಪ್ರದೇಶ ತಂಡವನ್ನು 42 ರನ್ ಗಳ ಅಂತರದಿಂದ ಮಣಿಸಿದೆ. 

ನವದೆಹಲಿ: ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ನ ಯುಪಿ- ಡೆಲ್ಲಿ ತಂಡದ ನಡುವಿನ ಪಂದ್ಯದಲ್ಲಿ ಡೆಲ್ಲಿ ತಂಡ ಉತ್ತರ ಪ್ರದೇಶ ತಂಡವನ್ನು 42 ರನ್ ಗಳ ಅಂತರದಿಂದ ಮಣಿಸಿದೆ. 

ಈ ಗೆಲುವಿನ ಮೂಲಕ ಡೆಲ್ಲಿ ತಂಡ ಪ್ರೀಮಿಯರ್ ಲೀಗ್ ನಲ್ಲಿ ಸೋಲೇ ಕಾಣದ ತಂಡವಾಗಿದೆ. 

ಡೆಲ್ಲಿ ತಂಡ 4 ವಿಕೆಟ್ ನಷ್ಟಕ್ಕೆ 211 ರನ್ ಗಳನ್ನು ಗಳಿಸಿತ್ತು. ಡೆಲ್ಲಿ ತಂಡ ಈ ರೀತಿ 200 ರ ಗಡಿ ದಾಟಿ ಎದುರಾಳಿ ತಂಡಕ್ಕೆ ಗುರಿ ನೀಡಿರುವುದು ಇದು ಎರಡನೇ ಬಾರಿಯಾಗಿದೆ. ತಂಡದ ನಾಯಕಿ ಮೆಗ್ ಲ್ಯಾನ್ನಿಂಗ್ಸ್ 42 ಎಸೆತಗಳಲ್ಲಿ 70 ರನ್ ಗಳಿಸಿ ಅತ್ಯುತ್ತಮ ಪ್ರದರ್ಶನ ನೀಡಿದರು. 

ಜೆಸ್ ಜೋನಾಸ್ಸೆನ್ 20 ಎಸೆತಗಳಲ್ಲಿ 42 ರನ್ ಗಳನ್ನು ಗಳಿಸಿದರೆ, ಅವರಿಗೆ ಜೆಮಿಮಾ ರಾಡ್ರಿಗಸ್ ಅಜೇಯ 34 ರನ್ ಗಳಿಸುವ ಮೂಲಕ ಉತ್ತಮ ಜೊತೆಯಾಟ ಆಡಿದರು. 

ಉತ್ತರ ಪ್ರದೇಶದ ಪರ ತಾಲಿಯಾ ಮೆಕ್‌ಗ್ರಾತ್ 50 ಎಸೆತಗಳಲ್ಲಿ 90 ರನ್ ಗಳಿಸಿದರಾದರೂ ಏಕಾಂಗಿ ಹೋರಾಟದ ಪರಿಣಾಮ ಉತ್ತರ ಪ್ರದೇಶ ತಂಡ 5 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿ ಸೋಲೊಪ್ಪಿಕೊಂಡಿತು. 
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್, ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

ಲೆಬನಾನ್ ನಲ್ಲಿ ಇಸ್ರೇಲ್ ಆರ್ಭಟ: ಮನೆಗಳ ಮೇಲೆ ಸ್ಫೋಟಕಗಳಿಂದ ದಾಳಿ; ಹಲವು ಹಳ್ಳಿಗಳು ನಾಮಾವಶೇಷ!

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

SCROLL FOR NEXT