ಕ್ರಿಕೆಟ್

4ನೇ ಟೆಸ್ಟ್: ಶುಭ್ಮನ್ ಗಿಲ್ ಶತಕ, ಸುಸ್ಥಿತಿಯಲ್ಲಿ ಭಾರತ; ಚಹಾ ವಿರಾಮದ ವೇಳೆಗೆ ಟೀಂ ಇಂಡಿಯಾ 188/2

Vishwanath S

ಅಹಮದಾಬಾದ್: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಯುವ ಬ್ಯಾಟರ್ ಶುಭ್ಮನ್ ಗಿಲ್ ಶತಕ ಸಿಡಿಸಿದ್ದು ತಂಡ ಸುಸ್ಥಿತಿಯಲ್ಲಿದೆ. 

ಅಹಮದಾಬಾದ್ ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ 480 ರನ್ ಗಳಿಗೆ ಆಲೌಟ್ ಆಗಿತ್ತು. ನಂತರ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಚಹ ವಿರಾಮದ ವೇಳೆಗೆ 2 ವಿಕೆಟ್ ಕಳೆದುಕೊಂಡು 188 ರನ್ ಪೇರಿಸಿತ್ತು. 

ಇನ್ನು ಟೀಂ ಇಂಡಿಯಾ ಪರ ಶುಭ್ಮನ್ ಗಿಲ್ ತಾಳ್ಮೆಯ ಆಟವಾಡಿ 197 ಎಸೆತಗಳಲ್ಲಿ 10 ಬೌಂಡರಿ 1 ಸಿಕ್ಸರ್ ನೆರವಿನೊಂದಿಗೆ 103 ರನ್ ಪೇರಿಸಿದ್ದಾರೆ. ಭಾರತ ಪರ ರೋಹಿತ್ ಶರ್ಮಾ 35 ರನ್ ಗಳಿಗೆ ಔಟಾಗಿದ್ದರೆ ಚೇತೇಶ್ವರ ಪೂಜಾರ 42 ರನ್ ಗಳಿಗೆ ಔಟಾದರು.

ಸದ್ಯ ಟೀಂ ಇಂಡಿಯಾ 69 ಓವರ್ ಮುಕ್ತಾಯಕ್ಕೆ 203 ರನ್ ಪೇರಿಸಿದ್ದು ಶುಭ್ಮನ್ ಗಿಲ್ ಅಜೇಯ 112 ಮತ್ತು ವಿರಾಟ್ ಕೊಹ್ಲಿ ಅಜೇಯ 8 ರನ್ ಪೇರಿಸಿ ಆಟವಾಡುತ್ತಿದ್ದಾರೆ. 

ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 2-1 ಅಂತರದಿಂದ ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಡ್ರಾ ಆದರೆ ಟ್ರೋಫಿಯನ್ನು ಭಾರತದ ಎತ್ತಿಹಿಡಿಯಲಿದೆ.

SCROLL FOR NEXT