ಕ್ರಿಕೆಟ್

IPL 2023: ರಾಜಸ್ಥಾನ ರಾಯಲ್ಸ್ ವಿರುದ್ಧ RCB ಗೆ 112 ರನ್ ಗಳ ಭರ್ಜರಿ ಗೆಲುವು, ಅಂಕಪಟ್ಟಿಯಲ್ಲಿ ಬಡ್ತಿ!

Vishwanath S

ಜೈಪುರ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ 112 ರನ್ ಗಳಿಂದ ಜಯ ಸಾಧಿಸಿದೆ. 

ಜೈಪುರದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬೆಂಗಳೂರು 171 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ರಾಜಸ್ಥಾನ ತಂಡ 59 ರನ್‌ಗಳಿಗೆ ಆಲೌಟ್ ಆಯಿತು. ಈ ಬಾರಿಯ ಐಪಿಎಲ್‌ನಲ್ಲಿ ಅತಿ ಕಡಿಮೆ ಸ್ಕೋರ್‌ ಗಳಿಸಿದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆರ್ ಸಿಬಿ ಪರ ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅರ್ಧಶತಕ ಗಳಿಸಿದರು. ಪಾರ್ನೆಲ್ 3 ವಿಕೆಟ್ ಪಡೆದರು. ಬ್ರೇಸ್‌ವೆಲ್ ಮತ್ತು ಕರ್ಣ್ ಶರ್ಮಾ ತಲಾ ಎರಡು ವಿಕೆಟ್ ಪಡೆದರು.

ಐಪಿಎಲ್ 2023ರಲ್ಲಿ ಉತ್ಸಾಹವು ಉತ್ತುಂಗಕ್ಕೇರಿದೆ. ಕೆಲವು ತಂಡಗಳು ಪ್ಲೇಆಫ್ ರೇಸ್‌ನಿಂದ ಬಹುತೇಕ ಹೊರಗುಳಿದಿದ್ದು, ಕೆಲವು ಇನ್ನೂ ಹೋರಾಟದಲ್ಲಿವೆ. ಇಂದಿನ ಪಂದ್ಯದಲ್ಲಿ ಆರ್‌ಸಿಬಿ ಮತ್ತು ರಾಜಸ್ಥಾನ ತಂಡಗಳು ಪ್ಲೇ ಆಫ್‌ಗಾಗಿ ಸೆಣಸಾಡಿದ್ದವು. ಎರಡೂ ತಂಡಗಳಿಗೆ ಪ್ರತಿಯೊಂದು ಪಂದ್ಯವೂ ಮಹತ್ವದ್ದಾಗಿದೆ. ಇನ್ನು ಗೆಲುವಿನೊಂದಿಗೆ ಆರ್ ಸಿಬಿ ಅಂಕಪಟ್ಟಿಯಲ್ಲಿ ರಾಜಸ್ಥಾನವನ್ನು ಹಿಂದಿಕ್ಕಿ ಐದನೇ ಸ್ಥಾನಕ್ಕೇರಿದೆ.

ರಾಜಸ್ಥಾನದ ಕೆಎಂ ಆಸಿಫ್ ವಿರಾಟ್ ಕೊಹ್ಲಿ ವಿಕೆಟ್ ಪಡೆದರು. ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅರ್ಧಶತಕ ಗಳಿಸಿದರು. ಅಂತಿಮವಾಗಿ 11 ಎಸೆತಗಳಲ್ಲಿ 29 ರನ್ ಗಳಿಸಿದ ಅನುಜ್ ರಾವತ್ ಅವರ ಇನಿಂಗ್ಸ್ ಆಧಾರದ ಮೇಲೆ ಬೆಂಗಳೂರು ತಂಡ ರಾಜಸ್ಥಾನಕ್ಕೆ 172 ರನ್ ಗಳ ಗೆಲುವಿನ ಗುರಿ ನೀಡಿತ್ತು. ಈ ರನ್ ಗುರಿ ಬೆನ್ನಟ್ಟಿದ ರಾಜಸ್ಥಾನ 59 ರನ್ ಗಳಿಗೆ ಆಲೌಟ್ ಆಯಿತು.

ರಾಜಸ್ಥಾನ ಪರ ಜೈಸ್ವಾಲ್ ಹಾಗೂ ಜೋಸ್ ಬಟ್ಲರ್ ಶೂನ್ಯ ಸುತ್ತಿದರು. ಜೋ ರೂಟ್ 10 ರನ್ ಗಳಿಸಿದರೆ ಹೆಟ್ಮರ್ 35 ರನ್ ಗಳಿಸಿದ್ದು ಇವರಿಬ್ಬರನ್ನು ಬಿಟ್ಟರೆ ಮತ್ಯಾರು ಎರಡಂಕಿ ದಾಟಲಿಲ್ಲ. ಆರ್ ಸಿಬಿ ಪರ ಪರ್ನೆಲ್ 3, ಬ್ರಾಸ್ವೆಲ್ ಮತ್ತು ಕರ್ಣ್ ಶರ್ಮಾ ತಲಾ 2 ವಿಕೆಟ್ ಪಡೆದರೆ ಸಿರಾಜ್ ಮತ್ತು ಮ್ಯಾಕ್ಸ್ ವೆಲ್ ತಲಾ 1 ವಿಕೆಟ್ ಪಡೆದಿದ್ದಾರೆ.

SCROLL FOR NEXT