ಕ್ರಿಕೆಟ್

ಐಪಿಎಲ್ 2023:  ಡೆಲ್ಲಿ ವಿರುದ್ಧ 15 ರನ್ ಗಳಿಂದ ಪರಾಭವಗೊಂಡ ಪಂಜಾಬ್; ಕಮರಿದ ಪ್ಲೇ ಆಫ್ ಕನಸು 

Srinivas Rao BV

ಶಿಮ್ಲಾ: ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ತಂಡದ ವಿರುದ್ಧ 15 ರನ್ ಗಳ ಮೂಲಕ ಸೋತ ಪಂಜಾಬ್ ತಂಡ ಪ್ಲೇ ಆಫ್ ನಿಂದ ಹೊರಬಿದ್ದಿದೆ. 

ಮೊದಲು ಬ್ಯಾಟಿಂಗ್ ಮಾಡಿದ, ಡೆಲ್ಲಿ 20 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 213 ರನ್‌ಗಳ ಬೃಹತ್‌ ಮೊತ್ತ ಗಳಿಸಿತು. ಆರಂಭಿಕ ಆಟಗಾರರಾದ ಡೇವಿಡ್‌ ವಾರ್ನರ್‌ (31 ಎಸೆತಗಳಲ್ಲಿ 46 ರನ್) ಮತ್ತು ಪೃಥ್ವಿ ಶಾ (38 ಎಸೆತಗಳಲ್ಲಿ 54 ರನ್) ಉತ್ತಮ ನೀಡಿದರು. ಮೊದಲ ವಿಕೆಟ್‌ಗೆ 94 ರನ್‌ ಜೊತೆಯಾಟ ಆಡಿದರೆ, ರಿಲೀ ರೆಸ್ಸೋ (37 ರನ್ ಗಳಲ್ಲಿ 82 ರನ್ ಗಳಿಸುವ ಮೂಲಕ ತಂಡ ಬೃಹತ್ ಮೊತ್ತ ಗಳಿಸಲು  ನೆರವಾದರು.  ಪಂಜಾಬ್‌ ಕಿಂಗ್ಸ್‌ ಪರ ಸ್ಯಾಮ್‌ ಕರನ್‌ 36 ರನ್ ನೀಡಿ ಎರಡು ವಿಕೆಟ್‌ ಪಡೆದರು. 

214 ರನ್‌ ಗುರಿ ಬೆನ್ನತ್ತಿದ ಪಂಜಾಬ್‌ ಕಿಂಗ್ಸ್‌ ಗೆ  ಇಶಾಂತ್ ಶರ್ಮಾ ಹಾಗೂ ನಾರ್ಟ್ಜೆ ಮಾರಕವಾದ ಪರಿಣಾಮ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 198 ರನ್‌ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು. ಆರಂಭಿಕ ಆಟಗಾರ ಶಿಖರ್‌ ಧವನ್‌ ಡಕ್ ಔಟ್ ಆಗಿ ನಿರಾಶೆ ಮೂಡಿಸಿದರು. ಈ ಟೂರ್ನಿಯಲ್ಲಿ ಇದು 10ನೇ ಬಾರಿಗೆ ಡಕ್‌ ಆಗಿರುವುದಾಗಿದೆ. 

36 ರನ್ ನೀಡಿ 2 ವಿಕೆಟ್ ಪಡೆದ ಇಶಾಂತ್‌ ಶರ್ಮಾ, ನಾರ್ಟ್ಜೆ  ಬೌಲಿಂಗ್‌ ದಾಳಿ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಐಪಿಎಲ್‌ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ಜಯ ಸಾಧಿಸಿತು. 

SCROLL FOR NEXT