ವಿರಾಟ್ ಕೊಹ್ಲಿ 
ಕ್ರಿಕೆಟ್

ಐಪಿಎಲ್ 2023: 'ಹೊರಗಡೆಯವರು ಏನೇ ಹೇಳಿದರೂ 'ಡೋಂಟ್ ಕೇರ್' ಟೀಕಾಕಾರರಿಗೆ ಕೊಹ್ಲಿ ತಿರುಗೇಟು

ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2023 ಆವೃತ್ತಿಯಲ್ಲಿ ಆರ್ ಸಿಬಿಯ ಮಾಜಿ ನಾಯಕ ವಿರಾಟ್ ಕೊಹ್ಲಿ 500ಕ್ಕಿಂತಲೂ ಹೆಚ್ಚಿನ ರನ್ ಗಳಿಸಿದ್ದರೂ ಅವರ ಸ್ಟ್ರೈಕ್ ರೇಟ್ ತೀವ್ರ ಟೀಕೆಗೆ ಗುರಿಯಾಗಿತ್ತು.

ಹೈದರಾಬಾದ್: ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2023 ಆವೃತ್ತಿಯಲ್ಲಿ ಆರ್ ಸಿಬಿಯ ಮಾಜಿ ನಾಯಕ ವಿರಾಟ್ ಕೊಹ್ಲಿ 500ಕ್ಕಿಂತಲೂ ಹೆಚ್ಚಿನ ರನ್ ಗಳಿಸಿದ್ದರೂ ಅವರ ಸ್ಟ್ರೈಕ್ ರೇಟ್ ತೀವ್ರ ಟೀಕೆಗೆ ಗುರಿಯಾಗಿತ್ತು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 46 ಎಸೆತಗಳಲ್ಲಿ 55 ರನ್ ಗಳಿಸಿದ ನಂತರವೂ ಕೊಹ್ಲಿಯ ಬ್ಯಾಟಿಂಗ್ ವಿಧಾನ ಮತ್ತು ಅವರ ಸಾಮರ್ಥ್ಯದ ಮೇಲೆ ಟೀಕೆಗಳನ್ನು ಮಾಡಲಾಗಿತ್ತು. ಇದಕ್ಕೆಲ್ಲಾ ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ತಿರುಗೇಟು ನೀಡಿದ್ದಾರೆ.

ತಮ್ಮ ಅದ್ಬುತ ಶತಕದ ನೆರವಿನಿಂದ ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ ಆರ್ ಸಿಬಿ ಎಂಟು ವಿಕೆಟ್ ಗಳ ಭರ್ಜರಿ ಗೆಲುವಿನೊಂದಿಗೆ ಪ್ಲೆ ಆಪ್ ತಲುಪುವಂತೆ ಮಾಡಿದ್ದಾರೆ. ನಾಲ್ಕು ವರ್ಷಗಳಲ್ಲಿ ತಮ್ಮ ಮೊದಲ ಐಪಿಎಲ್ ಶತಕ (63 ಎಸೆತಗಳಲ್ಲಿ 100) ಬಾರಿಸುವ ಮೂಲಕ ಎಲ್ಲಾ ಅನುಮಾನಗಳನ್ನು ಕೊಹ್ಲಿ ತಳ್ಳಿಹಾಕಿದರು. ಪಂದ್ಯ ಮುಗಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊರಗಡೆಯವರು  ಏನೇ ಹೇಳಿದರೂ ನಾನು ತಲೆಕೆಡಿಸಿಕೊಳ್ಳಲ್ಲ ಎಂದು ಹೇಳುವ ಮೂಲಕ ಟೀಕಾಕಾರಿಗೆ ತಿರುಗೇಟು ನೀಡಿದರು. 

'ನಾನು ಈಗಾಗಲೇ ತುಂಬಾ ಒತ್ತಡದಲ್ಲಿ ಸಿಲುಕಿರುವ ಕಾರಣ ಕೆಲವೊಮ್ಮೆ ನಾನು ಕ್ರೆಡಿಟ್ ತೆಗೆದುಕೊಳ್ಳಲ್ಲ. ಹೊರಗಿನವರು ಏನು ಹೇಳಿದರೂ ನಾನು ತಲೆಕೆಡಿಸಿಕೊಳಲ್ಲ. ಅದು ಅವರ ಅಭಿಪ್ರಾಯವಾಗಿದೆ. ನೀವೇ ಆ ಪರಿಸ್ಥಿತಿಯಲ್ಲಿದ್ದಾಗ ಹೇಗೆ ಕ್ರಿಕೆಟ್ ಗೆಲ್ಲಬೇಕೆಂದು ನಿಮಗೆ ತಿಳಿದಿರುತ್ತದೆ. ಅದನ್ನು ಬಹಳ ಸಮಯದಿಂದ ಮಾಡಿದ್ದೇನೆ. ಆಟ ಆಡುವಾಗ ಪಂದ್ಯ ಗೆಲ್ಲಲೇಬೆೇಕು ಎಂದು ಹೆಮ್ಮೆ ಆಡುತ್ತೇನೆ ಎಂದರು.

"ನಾನು ಈ ರೀತಿ ಫ್ಯಾನ್ಸಿ ಶಾಟ್  ಮೂಲಕ ಶತಕ ಬಾರಿಸುತ್ತೇನೆ ಅಂದುಕೊಂಡಿರಲಿಲ್ಲ. ಏಡೆನ್ ಜೊತೆಗೆ ಚಾಟ್ ಮಾಡುತ್ತಿದ್ದೆ. ನಾವು ವರ್ಷದ 12 ತಿಂಗಳು ಆಡಬೇಕು. 'ಐಪಿಎಲ್ ನಂತರ ಟೆಸ್ಟ್ ಕ್ರಿಕೆಟ್ (ಮುಂಬರಲಿದೆ) ನನ್ನ ತಂತ್ರಕ್ಕೆ ಬದ್ಧವಾಗಿರಬೇಕು. ಪ್ರಮುಖ ಆಟದಲ್ಲಿ ಪ್ರಭಾವ ಬೀರಲು ಸಾಧ್ಯವಾದಾಗ, ಅದು ನನಗೆ ಆತ್ಮವಿಶ್ವಾಸವನ್ನು ನೀಡುತ್ತದೆ, ಅದು ತಂಡಕ್ಕೆ ಆತ್ಮವಿಶ್ವಾಸವನ್ನು ನೀಡುತ್ತದೆ ಎಂದು ಅವರು ಹೇಳಿದರು. ಆರ್‌ಸಿಬಿ ಪ್ಲೇಆಫ್ ಭರವಸೆ ಸಂಪೂರ್ಣವಾಗಿ ಜೀವಂತವಾಗಿರಿಸಲು ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧದ ಗೆಲಲ್ಲೇಬೇಕಾಗಿತ್ತು. ಹಾಗಾಗೀ ತಮ್ಮ ಆಟ ವಿಶೇಷವಾಗಿತ್ತು ಎಂದು ಕೊಹ್ಲಿ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT