ಕ್ರಿಕೆಟ್

ಐಪಿಎಲ್ 2023: ಕೆಕೆಆರ್ ವಿರುದ್ಧ 1 ರನ್‌ನಿಂದ ಗೆಲುವು ಸಾಧಿಸಿದ ಲಕ್ನೋ, ಪ್ಲೇ ಆಫ್‌ಗೆ ಲಗ್ಗೆ

Lingaraj Badiger

ಕೋಲ್ಕತ್ತಾ: ಕೋಲ್ಕತ್ತಾ ಈಡನ್‌ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ನಿಕೋಲಸ್‌ ಪೂರನ್‌ ಮತ್ತು ರವಿ ಬಿಷ್ಣೋಯಿ ಅವರ ಭರ್ಜರಿ ಆಟದ ನೆರವಿನಿಂದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ ಕೋಲ್ಕತ್ತಾ ನೈಟ್‌ ರೈಡರ್ಸ್‌ ವಿರುದ್ಧ 1 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಿಯಾಗಿ ಪ್ಲೇ ಆಫ್‌ಗೆ ಅರ್ಹತೆ ಪಡೆದಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ, 8 ವಿಕೆಟ್‌ ನಷ್ಟಕ್ಕೆ 176 ರನ್‌ಗಳನ್ನು ಸೇರಿಸಿತು. ಗೆಲುವಿಗೆ 177 ರನ್ ಗಳ ಗುರಿ ಬೆನ್ನತ್ತಿದ ಕೆಕೆಆರ್‌ 7 ವಿಕೆಟ್‌ಗೆ 175 ರನ್‌ ಗಳಿಸಲಷ್ಟೇ ಶಕ್ತವಾಗಿ ಸೋಲು ಒಪ್ಪಿಕೊಂಡಿತು.

ಕೆಕೆಆರ್‌ ಪರ ಉತ್ತಮ ಬ್ಯಾಟಿಂಗ್‌ ಮಾಡಿದ ರಿಂಕು ಸಿಂಗ್‌ ಅವರು 6 ಬೌಂಡರಿ ಹಾಗೂ 4 ಅಮೋಘ ಸಿಕ್ಸರ್‌ಗಳೊಂದಿಗೆ  ಅಜೇಯ 67 ರನ್‌ ಬಾರಿಸಿದರು. ಆದರೂ ತಂಡಕ್ಕೆ ಗೆಲುವು ದಕ್ಕಿಸಿಕೊಡಲು ರಿಂಕು ಸಿಂಗ್‌ಗೆ ಸಾಧ್ಯವಾಗಲಿಲ್ಲ.

ಲಕ್ನೋ ತಂಡದ ಪರವಾಗಿ ನಿಕೋಲಸ್‌ ಪೂರನ್‌ 30 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್‌ಗಳಿದ್ದ ಅಬ್ಬರದ 58 ರನ್‌ ಸಿಡಿಸುವ ಮೂಲಕ ತಂಡದ ಸವಾಲಿನ ಮೊತ್ತಕ್ಕೆ ಕಾರಣರಾಗಿದ್ದರು. ಇವರಿಗೆ ಉತ್ತಮವಾಗಿ ಸಾಥ್‌ ನೀಡಿದ ಆಯುಷ್‌ ಬಡೋನಿ 21 ಎಸೆತಗಳಲ್ಲಿ 25 ರನ್‌ ಸಿಡಿಸಿದರು.

ಇನ್ನು ಪ್ಲೇ ಆಫ್‌ನ ಅಂತಿಮ ಸ್ಥಾನಕ್ಕಾಗಿ ರಾಜಸ್ಥಾನ ರಾಯಲ್ಸ್‌, ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್‌ ನಡುವೆ ಪೈಪೋಟಿ ಇದೆ.

SCROLL FOR NEXT