ಕ್ರಿಕೆಟ್

IPL 2023: ಹೈದರಾಬಾದ್ ವಿರುದ್ಧ ಮುಂಬೈಗೆ ಭರ್ಜರಿ ಗೆಲುವು, ಪಂದ್ಯ ಗೆಲ್ಲಲೇಬೇಕಾದ ಒತ್ತಡದಲ್ಲಿ RCB

Vishwanath S

ಮುಂಬೈ: ಐಪಿಎಲ್ ಪ್ಲೇಆಫ್ ಗೆ ಎಂಟ್ರಿ ಕೊಡಲು ಮುಂಬೈ ಮತ್ತು ಆರ್ ಸಿಬಿ ತಂಡಗಳಿಗೆ ಇಂದಿನ ಪಂದ್ಯ ಮುಖ್ಯವಾಗಿದ್ದು ಸದ್ಯ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಭರ್ಜರಿ ಗೆಲುವು ಸಾಧಿಸಿದೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ ನಿಗದಿತ ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 200 ರನ್ ಗಳ ಬೃಹತ್ ಗುರಿ ನೀಡಿತ್ತು. ಈ ಗುರಿ ಬೆನ್ನಟ್ಟಿದ ಮುಂಬೈಗೆ ರೋಹಿತ್ ಶರ್ಮಾ 56 ಮತ್ತು ಕ್ಯಾಮರೂನ್ ಗ್ರೀನ್ ಅಜೇಯ ಶತಕ ಗೆಲುವಿನ ದಡ ಸೇರಿಸಿತು. 

ಹೈದರಾಬಾದ್ ಪರ ವಿವ್ರಾಂತ್ ಶರ್ಮಾ 69 ಮತ್ತು ಮಾಯಾಂಕ್ ಅಗರವಾಲ್ 83 ರನ್ ಸಿಡಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್ ಗೆ 140 ರನ್ ಪೇರಿಸಿತ್ತು. ಇನ್ನು ಹೈದರಾಬಾದ್ ನೀಡಿದ 201 ರನ್ ಗಳ ಗುರಿ ಬೆನ್ನಟ್ಟಿದ ಮುಂಬೈ ಇನ್ನು ಎರಡು ಓವರ್ ಇರುವಾಗಲೇ 2 ವಿಕೆಟ್ ನಷ್ಟಕ್ಕೆ 201 ರನ್ ಬಾರಿಸುವ ಮೂಲಕ ಗೆಲುವಿನ ನಗೆ ಬೀರಿದರು.

ಈ ಪಂದ್ಯದ ಗೆಲುವಿನೊಂದಿಗೆ ಮುಂಬೈ 14 ಪಂದ್ಯಗಳ ಪೈಕಿ 8 ಪಂದ್ಯಗಳಲ್ಲಿ ಗೆಲುವು ಸಾಧಿಸಿ 16 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಇನ್ನು ಆರ್ ಸಿಬಿ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯ ಲೀಗ್ ನ ಕೊನೆಯ ಪಂದ್ಯವಾಗಲಿದೆ. ಈ ಪಂದ್ಯದಲ್ಲಿ ಆರ್ ಸಿಬಿ ಗೆದ್ದರೆ ರನ್ ರೇಟ್ ಮೂಲಕ ಪ್ಲೇ ಆಫ್ ಗೆ ಎಂಟ್ರಿ ಕೊಡುತ್ತದೆ. ಒಂದು ವೇಳೆ ಸೋತರೆ ಗುಜರಾತ್ ಟೈಟಾನ್ಸ್, ಚೆನ್ನೈ, ಲಖನೌ ಮತ್ತು ಮುಂಬೈ ನಡುವೆ ಪ್ಲೇ ಆಪ್ ಪಂದ್ಯಗಳು ನಡೆಯಲಿವೆ.

SCROLL FOR NEXT