ಭಾರತ ಕ್ರಿಕೆಟ್ ತಂಡ (ಸಂಗ್ರಹ ಚಿತ್ರ) 
ಕ್ರಿಕೆಟ್

ಲಂಕಾ ವಿರುದ್ಧ 302 ರನ್ ಗಳ ಜಯ: ವಿಶ್ವಕಪ್-2023 ಸೆಮಿಫೈನಲ್ಸ್ ಪ್ರವೇಶಿಸಿದ ಭಾರತ

ಮುಂಬೈ ನಲ್ಲಿ ನಡೆದ ಒಡಿಐ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಎದುರಾಳಿ ತಂಡ ಶ್ರೀಲಂಕಾ ವಿರುದ್ಧ ಬರೊಬ್ಬರಿ 302 ರನ್ ಗಳ ಜಯ ಗಳಿಸಿದೆ. 

ಮುಂಬೈ: ಮುಂಬೈ ನಲ್ಲಿ ನಡೆದ ಒಡಿಐ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಎದುರಾಳಿ ತಂಡ ಶ್ರೀಲಂಕಾ ವಿರುದ್ಧ ಬರೊಬ್ಬರಿ 302 ರನ್ ಗಳ ಜಯ ಗಳಿಸಿದೆ. 

ಈ ಗೆಲುವಿನ ಮೂಲಕ ಟೂರ್ನಿಯಲ್ಲಿ ಭಾರತ ತಂಡ ಸೆಮಿಫೈನಲ್ಸ್ ಪ್ರವೇಶಿಸಿದೆ. ಟಾಸ್ ನಂತರ ಶ್ರೀಲಂಕಾ, ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ನಿಗದಿತ 50 ಓವರ್ ಗಳಲ್ಲಿ ಭಾರತ ಕ್ರಿಕೆಟ್ ತಂಡ 7 ವಿಕೆಟ್ ನಷ್ಟಕ್ಕೆ 357 ರನ್ ಗಳಿಸಿತು. 

ರನ್ ಚೇಸಿಂಗ್ ಗೆ ಇಳಿದ ಲಂಕಾ ತಂಡಕ್ಕೆ ಭಾರತದ ಬೌಲರ್ ಗಳಾದ ಮೊಹಮ್ಮದ್ ಸಿರಾ, ಮೊಹಮ್ಮದ್ ಶಮಿ ಮಾರಕವಾದರು. 

ಶ್ರೀಲಂಕಾ ತಂಡದ ಬ್ಯಾಟ್ಸ್ಮನ್ ಗಳು ಭಾರತದ ಬೌಲರ್ ಗಳನ್ನು ಎದುರಿಸಲು ಸಾಧ್ಯವಾಗದೇ ಕೇವಲ 19.4 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 55 ರನ್ ಗಳಿಗೆ ಸೋಲೊಪ್ಪಿಕೊಂಡಿತು. 

ಮೊಹಮ್ಮದ್ ಸಿರಾಜ್ 16 ರನ್ ನೀಡಿ 3 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ 5 ವಿಕೆಟ್ ಪಡೆದು 18 ರನ್ ನೀಡಿ ಅತ್ಯುತ್ತಮ ಬೌಲರ್ ಗಳೆನಿಸಿದರು. ಎಲ್ಲಾ 7 ಪಂದ್ಯಗಳಲ್ಲೂ ಜಯಗಳಿಸಿರುವ ಭಾರತ 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ ತಂಡ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಖಾತೆ ಹಂಚಿಕೆ ಕಸರತ್ತು: ವರಿಷ್ಠರಿಗೆ ಪಟ್ಟಿ ನೀಡಿ ಬೆಂಗಳೂರಿಗೆ CM ಡಿಕೆ ಶಿವಕುಮಾರ್ ವಾಪಸ್; ಹೇಳಿದ್ದೇನು?

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌, ಪವಿತ್ರಾ ಗೌಡಗೆ ಬಿಗ್ ಶಾಕ್; ಪ್ರದೋಷ್‌ ಮಾಫಿ ಸಾಕ್ಷಿಗೆ ಕೋರ್ಟ್‌ ಅಸ್ತು

'ಸತ್ಯವನ್ನು ಎದುರಿಸುವ ಧೈರ್ಯವಿಲ್ಲ': ಭಾರತದ ಕಮ್ಯುನಿಸ್ಟರು ಸಂಪೂರ್ಣ ಹೇಡಿಗಳು; ನಿರ್ಮಲಾ ಸೀತಾರಾಮನ್ ವಾಗ್ದಾಳಿ

ರಾಸಾಯನಿಕ ತ್ಯಾಜ್ಯ ಬಿಡುಗಡೆ ಆರೋಪ: ಬೀದರ್‌ನ 3 ಕೈಗಾರಿಕೆಗಳ ಬಂದ್ ಗೆ ಸಚಿವ ಈಶ್ವರ್ ಖಂಡ್ರೆ ನಿರ್ದೇಶನ

ರಾಮ ಮಂದಿರ ಟ್ರಸ್ಟ್‌ CEO ಹುದ್ದೆಗೆ ಬರೋಬ್ಬರಿ 5,200 ಅರ್ಜಿ; ಸಂದರ್ಶನಕ್ಕೆ ಕೇವಲ 20 ಅಭ್ಯರ್ಥಿಗಳು ಆಯ್ಕೆ!