ಕ್ರಿಕೆಟ್

ಸಚಿನ್ ತೆಂಡೊಲ್ಕರ್ ದಾಖಲೆ ಮುರಿದ 'ರಚಿನ್'; ಹಾಡಿ ಹೊಗಳಿದ ವಿರೇಂದ್ರ ಸೆಹ್ವಾಗ್!

Nagaraja AB

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಹಣಾಹಣಿಯಲ್ಲಿ ಪಾಕಿಸ್ತಾನದ ವಿರುದ್ಧ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ಮೂಲಕ ಶತಕ ಗಳಿಸುವ ಮೂಲಕ ಸಚಿನ್ ತೆಂಡೊಲ್ಕರ್ ಅವರ ದಾಖಲೆಯನ್ನು ಮುರಿದ ನ್ಯೂಜಿಲೆಂಡ್ ತಂಡದ ಮೂಲತ: ಬೆಂಗಳೂರಿನ ರಚಿನ್ ರವೀಂದ್ರ ಅವರನ್ನು ಮಾಜಿ ಕ್ರಿಕೆಟ್ ಆಟಗಾರ ವಿರೇಂದ್ರ ಸೆಹ್ವಾಗ್ ಹಾಡಿ ಹೊಗಳಿದ್ದಾರೆ.

ಎಡಗೈ ಬ್ಯಾಟರ್ 94 ಎಸೆತಗಳಲ್ಲಿ 108 ರನ್ ಗಳಿಸುವ ಮೂಲಕ ವಿಶ್ವಕಪ್ ನಲ್ಲಿ 27 ವರ್ಷದೊಳಗೆ ಮೂರು ಶತಕ ಗಳಿಸಿದ ಸಚಿನ್ ತೆಂಡೊಲ್ಕರ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ವಿರೇಂದ್ರ ಸೆಹ್ವಾಗ್, ಕಳೆದ ಹಲವಾರು ವರ್ಷಗಳಲ್ಲಿ ಪಾಕಿಸ್ತಾನಕ್ಕೆ ಕಾಟ ಕೊಡುವುದನ್ನು ಸಚಿನ್ ಹಾಗೂ ರಾಹುಲ್ ರೂಢಿ ಮಾಡಿಕೊಂಡಿದ್ದರು. ಈಗಲೂ ಆ ಪ್ರವೃತ್ತಿಯನ್ನು ರಚಿನ್ ಮುಂದುವರೆಸಿದ್ದಾರೆ. ಎಂತಹ ಅದ್ಬುತ ಆಟ ಎಂದು ಶ್ಲಾಘಿಸಿದ್ದಾರೆ.

ಕಳೆದ ತಿಂಗಳು ಅಹಮದಾಬಾದ್‌ನಲ್ಲಿ ನಡೆದ ವಿಶ್ವಕಪ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಅಜೇಯ 123 ರನ್ ಗಳಿಸಿದ್ದ ರಚಿನ್, ಕಳೆದ ವಾರ ಧರ್ಮಶಾಲಾದಲ್ಲಿ ಐದು ಬಾರಿ ವಿಜೇತ ಆಸ್ಟ್ರೇಲಿಯಾ ವಿರುದ್ಧ 116 ರನ್ ಗಳಿಸಿದ್ದರು. ಅಲ್ಲದೇ ನೆದರ್ಲ್ಯಾಂಡ್ಸ್ ವಿರುದ್ಧ 51 ಮತ್ತು ಭಾರತದ ವಿರುದ್ಧ 75 ರನ್ ಗಳಿಸುವ ಮೂಲಕ ರಚಿನ್ ತಮ್ಮ ಹೆಸರಿನಲ್ಲಿ ಎರಡು ಅರ್ಧಶತಕಗಳನ್ನು ಕೂಡಾ ಹೊಂದಿದ್ದಾರೆ.

SCROLL FOR NEXT