ಕ್ರಿಕೆಟ್

ಅಂಡರ್-19 ಏಷ್ಯಾಕಪ್‌: ಭಾರತ ತಂಡ ಪ್ರಕಟ, ಉದಯ್ ಸಹರಾನ್ ನಾಯಕ

Nagaraja AB

ನವದೆಹಲಿ: ಡಿಸೆಂಬರ್ 8 ರಿಂದ ಯುಎಇಯಲ್ಲಿ ನಡೆಯಲಿರುವ ಎಸಿಸಿ ಪುರುಷರ ಅಂಡರ್-19 ಏಷ್ಯಾಕಪ್‌ನಲ್ಲಿ ಭರವಸೆಯ ಬ್ಯಾಟ್ಸ್‌ಮನ್ ಉದಯ್ ಸಹರಾನ್ ಅವರು ಹಾಲಿ ಚಾಂಪಿಯನ್ ಭಾರತವನ್ನು ಮುನ್ನಡೆಸಲಿದ್ದಾರೆ. ಸೌಮಿ ಕುಮಾರ್ ಪಾಂಡೆ ಅವರನ್ನು 15 ಸದಸ್ಯರ ತಂಡಕ್ಕೆ ಉಪನಾಯಕರನ್ನಾಗಿ ನೇಮಿಸಲಾಗಿದೆ. ಅಂಡರ್ -19  ಏಷ್ಯಾಕಪ್‌ನಲ್ಲಿ ಎಂಟು ಬಾರಿ ಪ್ರಶಸ್ತಿ ಗೆದ್ದಿರುವ ಭಾರತ ಅತ್ಯಂತ ಯಶಸ್ವಿ ತಂಡವಾಗಿದೆ.

ಟೂರ್ನಿಯಲ್ಲಿ ಭಾರತವು ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ನೇಪಾಳವನ್ನು ಎದುರಿಸಲಿದೆ.  ಡಿಸೆಂಬರ್ 8 ರಂದು ಐಸಿಸಿ ಅಕಾಡೆಮಿ ಓವಲ್-1 ನಲ್ಲಿ ಆಫ್ಘನ್ ವಿರುದ್ಧದ ಪಂದ್ಯದೊಂದಿಗೆ ಏಷ್ಯಾಕಪ್ ಅಭಿಯಾನವನ್ನು ಭಾರತ ಆರಂಭಿಸಲಿದೆ.ಡಿಸೆಂಬರ್ 10 ರಂದು ಅದೇ ಸ್ಥಳದಲ್ಲಿ ಬಹುನಿರೀಕ್ಷಿತ ಪಾಕಿಸ್ತಾನವನ್ನು ಎದುರಿಸಲಿದೆ ಮತ್ತು ಡಿಸೆಂಬರ್ 12 ರಂದು ನೇಪಾಳವನ್ನು ಎದುರಿಸಲಿದೆ. ಡಿಸೆಂಬರ್ 17 ರಂದು ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ.

ಭಾರತ  ತಂಡ ಇಂತಿದೆ: ಉದಯ್ ಸಹರಾನ್ (ನಾಯಕ), ಸೌಮಿ ಕುಮಾರ್ ಪಾಂಡೆ (ಉಪನಾಯಕ), ಅರ್ಶಿನ್ ಕುಲಕರ್ಣಿ, ಆದರ್ಶ್ ಸಿಂಗ್, ರುದ್ರ ಮಯೂರ್ ಪಟೇಲ್, ಸಚಿನ್ ದಾಸ್, ಪ್ರಿಯಾಂಶು ಮೊಲಿಯಾ, ಮುಶೀರ್ ಖಾನ್, ಧನುಷ್ ಗೌಡ, ಅವಿನಾಶ್ ರಾವ್( ವಿಕೆಟ್ ಕೀಪರ್) ಎಂ ಅಭಿಷೇಕ್, ಇನ್ನೇಶ್ ಮಹಾಜನ್ (ವಾಕ್), ಆರಧ್ಯ ಶುಕ್ಲಾ, ರಾಜ್ ಲಿಂಬಾನಿ, ನಮನ್ ತಿವಾರಿ.
 

SCROLL FOR NEXT