ಕ್ರಿಕೆಟ್

ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆಯಲ್ಲಿ ರಾಹುಲ್ ದ್ರಾವಿಡ್ ಮುಂದುವರಿಕೆ; ಇತರ ಸಿಬ್ಬಂದಿಗಳ ಅವಧಿಯೂ ವಿಸ್ತರಣೆ

Srinivas Rao BV

ನವದೆಹಲಿ: ರಾಹುಲ್ ದ್ರಾವಿಡ್ ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ ಎಂದು ಬಿಸಿಸಿಐ ಘೋಷಿಸಿದೆ.

ಬಿಸಿಸಿಐ, ತರಬೇತಿಗೆ ಸಂಬಂಧಿಸಿದ ಇತರ ಸಿಬ್ಬಂಧಿಗಳ ಒಪ್ಪಂದವನ್ನೂ ಮುಂದುವರೆಸಿದೆ. ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೌರ್, ಬೌಲಿಂಗ್ ಕೋಚ್ ಪರಸ್ ಮಾಂಬ್ರೆ, ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಅವರ ಅವಧಿಯೂ ವಿಸ್ತರಣೆಗೊಂಡಿದೆ.

ಬಿಸಿಸಿಐ ದ್ರಾವಿಡ್ ಅವರ ಒಪ್ಪಂದದ ಅವಧಿಯನ್ನು ನಿರ್ದಿಷ್ಟಪಡಿಸಿಲ್ಲ ಆದರೆ ಅವರು ಕನಿಷ್ಠ T20 ವಿಶ್ವಕಪ್ 2024 ರವರೆಗೆ ಮುಂದುವರಿಯುವ ನಿರೀಕ್ಷೆಯಿದೆ.

2021 ರ ನವೆಂಬರ್ ನಲ್ಲಿ ರಾಹುಲ್ ದ್ರಾವಿಡ್ ಅವರನ್ನು 2 ವರ್ಷಗಳ ಅವಧಿಗೆ ಅಂದರೆ 2023 ರ ಏಕದಿನ ವಿಶ್ವಕಪ್ ಟೂರ್ನಿ ಮುಕ್ತಾಯಕ್ಕೆ ಒಪ್ಪಂದದ ಅವಧಿಯೂ ಮುಕ್ತಾಯಗೊಳ್ಳುವಂತೆ  ಮುಖ್ಯ ಕೋಚ್ ಹುದ್ದೆಗೆ ನೇಮಕ ಮಾಡಲಾಗಿತ್ತು.

ಇತ್ತೀಚೆಗೆ ಮುಕ್ತಾಯಗೊಂಡ ICC ಪುರುಷರ ಕ್ರಿಕೆಟ್ ವಿಶ್ವಕಪ್ 2023 ರ ನಂತರ ಅವರ ಒಪ್ಪಂದದ ಅವಧಿ ಮುಗಿದ ನಂತರ BCCI ರಾಹುಲ್ ದ್ರಾವಿಡ್ ಅವರೊಂದಿಗೆ  ಚರ್ಚೆಯಲ್ಲಿ ತೊಡಗಿ ಅಧಿಕಾರಾವಧಿಯನ್ನು ಮುಂದುವರಿಸಲು ಸರ್ವಾನುಮತದಿಂದ ಒಪ್ಪಿಕೊಂಡಿತು.

SCROLL FOR NEXT