ಕ್ರಿಕೆಟ್

ಐಸಿಸಿ ಕ್ರಿಕೆಟ್ ವಿಶ್ವಕಪ್ 2023: ಆಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೂ ಶುಭ್ ಮನ್ ಗಿಲ್ ಅಲಭ್ಯ

Srinivasamurthy VN

ನವದೆಹಲಿ: ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ಟೂರ್ನಿಯಲ್ಲಿ ಪಾಲ್ಗೊಂಡಿರುವ ಟೀಂ ಇಂಡಿಯಾದಿಂದ ಕಹಿ ಸುದ್ದಿಯೊಂದು ಹೊರಬಿದ್ದಿದ್ದು, ಡೆಂಗ್ಯೂ ಜ್ವರಕ್ಕೆ ತುತ್ತಾಗಿ ತಂಡದಿಂದ ಹೊರಗುಳಿದಿರುವ ಟೀಂ ಇಂಡಿಯಾದ ಆರಂಭಿಕ ಬ್ಯಾಟರ್ ಶುಭ್ ಮನ್ ಗಿಲ್ 2ನೇ ಪಂದ್ಯಕ್ಕೂ ಅಲಭ್ಯರಾಗಲಿದ್ದಾರೆ ಎಂದು ತಿಳಿದುಬಂದಿದೆ.
 
ಶುಬ್ಮಾನ್ ಗಿಲ್ ಅವರು ಚೆನ್ನೈನಲ್ಲಿ ವೈದ್ಯಕೀಯ ಮೇಲ್ವಿಚಾರಣೆಯಲ್ಲಿರುವುದರಿಂದ ಅಕ್ಟೋಬರ್ 11 ರಂದು ಅಫ್ಘಾನಿಸ್ತಾನ ವಿರುದ್ಧದ ಭಾರತದ ಮುಂದಿನ ವಿಶ್ವಕಪ್ ಪಂದ್ಯದಿಂದಲೂ ಹೊರಗುಳಿದಿದ್ದಾರೆ ಎಂದು ಹೇಳಲಾಗಿದೆ. ಸೋಮವಾರ ಭಾರತ ತಂಡವು ಚೆನ್ನೈನಿಂದ ದೆಹಲಿಗೆ ಪ್ರಯಾಣ ಬೆಳೆಸಿತು. ಆದರೆ ಅನಾರೋಗ್ಯದ ಕಾರಣ ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್‌ನ ಆರಂಭಿಕ ಪಂದ್ಯದಿಂದ ದೂರ ಉಳಿದಿದ್ದ ಗಿಲ್ ಅವರು ಈ ಪ್ರಯಾಣದ ಭಾಗವಾಗಿರಲಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ವಿಶ್ವ ಕಪ್​ನಲ್ಲಿ ಟೀಂ ಇಂಡಿಯಾಗೆ ಆಘಾತ: ಆರಂಭಿಕ ಬ್ಯಾಟರ್​ ಶುಬ್ ಮನ್ ಗಿಲ್ ಗೆ ಡೆಂಗ್ಯೂ
 
ಇತ್ತೀಚಿನ ವರದಿಯಲ್ಲಿ, ಟೀಂ ಇಂಡಿಯಾ ಬ್ಯಾಟರ್ ಶುಭಮನ್ ಗಿಲ್ ಅವರು 9 ಅಕ್ಟೋಬರ್ 2023 ರಂದು ದೆಹಲಿಗೆ ತಂಡದೊಂದಿಗೆ ಪ್ರಯಾಣಿಸುವುದಿಲ್ಲ ಎಂದು ಮಂಡಳಿ ತಿಳಿಸಿದೆ. ಈ ಬಗ್ಗೆ ಈ ಹಿಂದೆಯೇ ಮಾಹಿತಿ ನೀಡಿದ್ದ ಬಿಸಿಸಿಐ, 'ಗಿಲ್ ಆರೋಗ್ಯವಾಗಿಲ್ಲ, ಮತ್ತು ಅವರು ಕನಿಷ್ಠ ಮೊದಲ ಎರಡು ಪಂದ್ಯಗಳನ್ನು ಆಡುವ ಸ್ಥಿತಿಯಲ್ಲಿಲ್ಲ ಎಂದು ಹೇಳಿತ್ತು. ಚೆನ್ನೈಗೆ ಬಂದಿಳಿದ ನಂತರ ಶುಭ್‌ಮನ್‌ಗೆ ತೀವ್ರ ಜ್ವರವಿತ್ತು. ತರಬೇತಿ ಅವಧಿಯಲ್ಲಿ ಗಿಲ್ ಅವರು ಡೆಂಗ್ಯೂನಿಂದ ಬಳಲುತ್ತಿದ್ದರು. ಇವರ ಅನುಪಸ್ಥಿತಿ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. 

ಗಿಲ್ ಚೆನ್ನೈನಲ್ಲಿಯೇ ಇರಲಿದ್ದು, ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿರುತ್ತಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

SCROLL FOR NEXT