ವಿಶ್ವಕಪ್ ನಲ್ಲಿ ವೇಗದ ಶತಕ ದಾಖಲಿಸಿದ ಮ್ಯಾಕ್ಸ್ ವೆಲ್! 
ಕ್ರಿಕೆಟ್

ವಿಶ್ವಕಪ್ ನಲ್ಲಿ ವೇಗದ ಶತಕ ದಾಖಲಿಸಿದ ಮ್ಯಾಕ್ಸ್ ವೆಲ್!

ಆಸ್ಟ್ರೇಲಿಯಾದ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್ ವೆಲ್ ವಿಶ್ವಕಪ್ ನ ಅತಿ ವೇಗದ ಶತಕ ದಾಖಲಿಸಿದ್ದಾರೆ. 

ನವದೆಹಲಿ: ಆಸ್ಟ್ರೇಲಿಯಾದ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್ ವೆಲ್ ವಿಶ್ವಕಪ್ ನ ಅತಿ ವೇಗದ ಶತಕ ದಾಖಲಿಸಿದ್ದಾರೆ. 

ಮ್ಯಾಕ್ಸ್ ವೆಲ್ ಗೆ ಸತತ 2 ನೇ ಶತಕ ಇದಾಗಿದ್ದು, ಆಸ್ಟ್ರೇಲಿಯಾ ತಂಡ ನೆದರ್ಲ್ಯಾಂಡ್ ವಿರುದ್ಧ 309 ರನ್ ಗಳ ಜಯ ಗಳಿಸಿದೆ. ಟೂರ್ನಮೆಂಟ್ ನ ಇತಿಹಾಸದಲ್ಲೇ ಇದು 2ನೇ ಗರಿಷ್ಠ ಅಂತರದ ಗೆಲುವಾಗಿದೆ. 

8 ಸಿಕ್ಸ್, 4 ಬೌಂಡರಿ ಮೂಲಕ ಕೇವಲ 44 ಎಸೆತಗಳಲ್ಲಿ ಮ್ಯಾಕ್ಸ್ ವೆಲ್ 106 ರನ್ ಗಳಿಸಿದರು. ದಕ್ಷಿಣ ಆಫ್ರಿಕಾದ ಬ್ಯಾಟ್ಸ್ಮನ್ ಐಡೆನ್ ಮಾರ್ಕ್ರಾಮ್ ಇದೇ ಮೈದಾನದಲ್ಲಿ ಇದೇ ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ಧ 49 ಎಸೆತಗಳಲ್ಲಿ ಶತಕ ದಾಖಲಿಸಿದ್ದರು. ಆಸ್ಟ್ರೇಲಿಯಾ ಮತ್ತು ನೆದರ್ಲೆಂಡ್ಸ್ ನಡುವೆ ಇದುವರೆಗೆ ಕೇವಲ 2 ಏಕದಿನ ಪಂದ್ಯಗಳು ನಡೆದಿದ್ದು, ಎರಡೂ ಪಂದ್ಯಗಳು ವಿಶ್ವಕಪ್‌ನಲ್ಲಿ ನಡೆದಿವೆ.

2003 ಮತ್ತು 2007ರ ವಿಶ್ವಕಪ್‌ನಲ್ಲಿ ನಡೆದ ಪಂದ್ಯಗಳಲ್ಲಿ, ಆಸ್ಟ್ರೇಲಿಯಾವು ನೆದರ್ಲ್ಯಾಂಡ್ಸ್ ವಿರುದ್ಧ ದೊಡ್ಡ ಜಯವನ್ನು ದಾಖಲಿಸಿತ್ತು. ಎರಡೂ ಪಂದ್ಯಾವಳಿಗಳಲ್ಲಿ ಆಸ್ಟ್ರೇಲಿಯಾ ತಂಡವು ಅಜೇಯವಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!

ಸ್ಟಾರ್‌ಲಿಂಕ್ ವಿವಾದ: ಭಾರತ ವಸಾಹತಲ್ಲ- Elon Musk ಗೆ ಕಮಲ್ ಹಾಸನ್ ತಿರುಗೇಟು

'ರಾಹುಲ್ ಗಾಂಧಿ ಅವರೇ, ನಿಮ್ಮ ಉದ್ದೇಶಗಳು ಎಂದಿಗೂ ಈಡೇರಲ್ಲ': ವಿಪಕ್ಷದವರದ್ದು 'ನಗರ ನಕ್ಸಲ್' ಮನಸ್ಥಿತಿ; ನಿತಿನ್ ನಬಿನ್