ಟ್ರಾವಿಸ್ ಹೆಡ್-ಡೇವಿಡ್ ವಾರ್ನರ್ ಬ್ಯಾಟಿಂಗ್ ಅಬ್ಬರ 
ಕ್ರಿಕೆಟ್

ICC Cricket World Cup 2023: ಟ್ರಾವಿಸ್ ಹೆಡ್ ಭರ್ಜರಿ ಶತಕ, ನ್ಯೂಜಿಲೆಂಡ್ ಗೆ ಬೃಹತ್ ಗುರಿ ನೀಡಿದ ಆಸ್ಟ್ರೇಲಿಯಾ

ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಇಂದಿನ ಮೊದಲ ಪಂದ್ಯದಲ್ಲಿ ಕ್ರಿಕೆಟ್ ಜಗತ್ತಿನ ಮದಗಜಗಳು ಕಾದಾಡುತ್ತಿದ್ದು, ನ್ಯೂಜಿಲೆಂಡ್ ವಿರುದ್ಧ ಪ್ರಬಲ ಆಸ್ಟ್ರೇಲಿಯಾ ಬೃಹತ್ ಮೊತ್ತ ಪೇರಿಸಿದೆ.

ಧರ್ಮಶಾಲಾ: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ (ICC Cricket World Cup 2023) ಟೂರ್ನಿಯ ಇಂದಿನ ಮೊದಲ ಪಂದ್ಯದಲ್ಲಿ ಕ್ರಿಕೆಟ್ ಜಗತ್ತಿನ ಮದಗಜಗಳು ಕಾದಾಡುತ್ತಿದ್ದು, ನ್ಯೂಜಿಲೆಂಡ್ (New Zealand) ವಿರುದ್ಧ ಪ್ರಬಲ ಆಸ್ಟ್ರೇಲಿಯಾ (Australia) ಬೃಹತ್ ಮೊತ್ತ ಪೇರಿಸಿದೆ.

ಧರ್ಮಶಾಲಾ (Dharamsala)ದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (Himachal Pradesh Cricket Association) ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಆಸ್ಚ್ರೇಲಿಯಾ (Australia) ತಂಡ ಸಿಕ್ಕ ಅವಕಾಶವನ್ನು ಭರ್ಜರಿಯಾಗಿ ಬಳಸಿಕೊಂಡಿತು. ಆರಂಭಿಕರಾದ ಟ್ರಾವಿಸ್ ಹೆಡ್ (Travis Head) (109 ರನ್) ಶತಕ ಮತ್ತು ಡೇವಿಡ್ ವಾರ್ನರ್ (81 ರನ್) (David Warner) ಆರ್ಧಶತಕದ ಮೂಲಕ ಆಸ್ಟ್ರೇಲಿಯಾ ಭರ್ಜರಿ ಆರಂಭ ಪಡೆಯಿತು. ಮೊದಲ ವಿಕೆಟ್ ಗೆ ಈ ಜೋಡಿ ಬರೊಬ್ಬರಿ 175 ರನ್ ಗಳ ಜೊತೆಯಾಟವಾಡಿತು.

ಬಳಿಕ ಮಿಚೆಲ್ ಮಾರ್ಷ್ (36 ರನ್), ಗ್ಲೆನ್ ಮ್ಯಾಕ್ಸ್ ವೆಲ್ (41 ರನ್) (Glenn Maxwell), ಜೋಷ್ ಇಂಗ್ಲಿಸ್ (38 ರನ್) ಮತ್ತು ನಾಯಕ ಪ್ಯಾಟ್ ಕಮಿನ್ಸ್ (37 ರನ್) ಬ್ಯಾಟಿಂಗ್ ನೆರವಿನಿಂದ 49.2 ಓವರ್ ನಲ್ಲಿ 388 ರನ್ ಗಳಿ ಸರ್ವಪತನ ಕಂಡಿತು.

ಆ ಮೂಲಕ ನ್ಯೂಜಿಲೆಂಡ್ ಗೆ 389ರನ್ ಗಳ ಬೃಹತ್ ಗುರಿ ನೀಡಿದೆ. ನ್ಯೂಜಿಲೆಂಡ್ (New Zealand) ಪರ ಟ್ರೆಂಟ್ ಬೌಲ್ಟ್ (Trent Boult) ಮತ್ತು ಗ್ಲೆನ್ ಫಿಲಿಪ್ಸ್ ತಲಾ 3 ವಿಕೆಟ್ ಪಡೆದರೆ, ಮೆಚೆಲ್ ಸ್ಯಾಂಥ್ನರ್ 2, ಮ್ಯಾಟ್ ಹೆನ್ರಿ ಮತ್ತು ಜೇಮ್ಸ್ ನೀಶಂ ತಲಾ 1 ವಿಕೆಟ್ ಪಡೆದರು. ಸ್ಯಾಂಥ್ನರ್ 10 ಓವರ್ ನಲ್ಲಿ 80ರನ್ ನೀಡಿ ದುಬಾರಿ ಬೌಲರ್ ಎನಿಸಿಕೊಂಡರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT