ಪಾಕಿಸ್ತಾನ ತಂಡ ಆಲೌಟ್ 
ಕ್ರಿಕೆಟ್

ಏಷ್ಯಾ ಕಪ್ 2023: ಭಾರತದ ವಿರುದ್ಧ ಹೀನಾಯ ಸೋಲು, ಕಳಪೆ ದಾಖಲೆ ಬರೆದ ಪಾಕಿಸ್ತಾನ

ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಭಾರತದ ವಿರುದ್ಧದ ಪಂದ್ಯದಲ್ಲಿ 228ರನ್ ಗಳ ಅಂತರದಲ್ಲಿ ಸೋತ ಪಾಕಿಸ್ತಾನ ಹೀನಾಯ ದಾಖಲೆಯೊಂದನ್ನು ನಿರ್ಮಾಣ ಮಾಡಿದೆ.

ಕೊಲಂಬೋ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಭಾರತದ ವಿರುದ್ಧದ ಪಂದ್ಯದಲ್ಲಿ 228ರನ್ ಗಳ ಅಂತರದಲ್ಲಿ ಸೋತ ಪಾಕಿಸ್ತಾನ ಹೀನಾಯ ದಾಖಲೆಯೊಂದನ್ನು ನಿರ್ಮಾಣ ಮಾಡಿದೆ.

ಶ್ರೀಲಂಕಾದ ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ಇಂದು ನಡೆದ ಪಂದ್ಯದಲ್ಲಿ ಭಾರತ ನೀಡಿದ್ದ 357ರನ್ ಗಳ ಗುರಿ ಬೆನ್ನು ಹತ್ತಿದ ಪಾಕಿಸ್ತಾನ 32 ಓವರ್ ನಲ್ಲಿ 128 ರನ್ ಗಳಿಸಿ 228ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿದೆ. ಈ ಸೋಲಿನ ಮೂಲಕ ಪಾಕಿಸ್ತಾನ ತಂಡ ಹೀನಾಯ ದಾಖಲೆ ಬರೆದಿದ್ದು, ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಪಾಕಿಸ್ತಾನಕ್ಕೆ ದೊರೆತ 3ನೇ ಹೀನಾಯ ಸೋಲು ಇದಾಗಿದೆ. ಪಾಕಿಸ್ತಾನ 12ರನ್ ಗಳಿಗೆ ಪತನವಾಗಿದ್ದು, ಇದು ಪಾಕಿಸ್ತಾನ ತಂಡ ಭಾರತದ ವಿರುದ್ದ ಇತಿಹಾಸದ 3ನೇ ಕಳಪೆ ರನ್ ಗಳಿಕೆಯಾಗಿದೆ.

ಈ ಹಿಂದೆ 1985ರಲ್ಲಿ ಪಾಕಿಸ್ತಾನ ಶಾರ್ಜಾದಲ್ಲಿ 87ರನ್ ಗಳಿಗೆ ಆಲೌಟ್ ಆಗಿತ್ತು. ಇದು ಪಾಕಿಸ್ತಾನದ ಹೀನಾಯ ದಾಖಲೆಯಾಗಿದೆ. ಬಳಿಕ 1997ರಲ್ಲಿ ಟೊರೊಂಟೋದಲ್ಲಿ 116ರನ್ ಗಳಿಸಿತ್ತು. 1984ರಲ್ಲಿ ಶಾರ್ಜಾದಲ್ಲಿ 134ರನ್ ಗಳಿಗೆ ಆಲೌಟ್ ಆಗಿತ್ತು. ಇದೀಗ ಕೇವಲ 128ರನ್ ಗಳಿಗೆ ಆಲೌಟ್ ಆಗಿದ್ದು, ಇದು ಪಾಕಿಸ್ತಾನದ ಮೂರನೇ ಕಳಪೆ ಸಾಧನೆಯಾಗಿದೆ.

Lowest team totals for Pakistan vs India in ODIs
87 at Sharjah, 1985
116 at Toronto, 1997
128 at Colombo (RPS), today*
134 at Sharjah, 1984

ಏಕದಿನ ಕ್ರಿಕೆಟ್ ನಲ್ಲಿ ಪಾಕಿಸ್ತಾನಕ್ಕೆ 2ನೇ ಅತೀ ದೊಡ್ಡ ಸೋಲು
ಅಂತೆಯೇ ಇದು ಪಾಕಿಸ್ತಾನಕ್ಕೆ ಏಕದಿನ ಕ್ರಿಕೆಟ್ ನಲ್ಲಿ ರನ್ ಗಳ ಲೆಕ್ಕಾಚಾರದಲ್ಲಿ ಸಿಕ್ಕ 2ನೇ ಅತೀ ದೊಡ್ಡ ಸೋಲಾಗಿದೆ. ಇದಕ್ಕೂ ಮೊದಲು 2009ರಲ್ಲಿ ಲಾಹೋರ್ ನಲ್ಲಿ ಶ್ರೀಲಂಕಾ ವಿರುದ್ಧ 234ರನ್ ಗಳ ಅಂತರದಲ್ಲಿ ಸೋಲುಕಂಡಿತ್ತು. 2002ರಲ್ಲಿ ನೈರೋಬಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ 224ರನ್ ಗಳ ಅಂತರದಲ್ಲಿ ಸೋಲುಕಂಡಿತ್ತು. 1992ರಲ್ಲಿ ನಾಟಿಂಗ್ ಹ್ಯಾಮ್ ನಲ್ಲಿ ಇಂಗ್ಲೆಂಡ್ ವಿರುದ್ಧ 198ರನ್ ಗಳ ಅಂತರದಲ್ಲಿ ಸೋಲು ಕಂಡಿತ್ತು.

Biggest defeat for Pakistan in ODIs (in runs):
234  vs Sri Lanka, Lahore, 2009
228 vs India, Colombo (RPS), 2023*
224 vs Australia, Nairobi, 2002
198 vs England, Nottingham, 1992

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Bihar election 2025: ಎನ್ ಡಿಎ ಸೀಟು ಹಂಚಿಕೆ ಅಂತಿಮ, ಬಿಜೆಪಿ, ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧೆ! ಚಿರಾಗ್ ಗೆ ದಕ್ಕಿದ್ದೆಷ್ಟು?

BJP ಶಾಸಕ ಮುನಿರತ್ನ ಧರಿಸಿದ್ದ RSS ಟೋಪಿ ಕಿತ್ತೆಸೆದ Congress ಮುಖಂಡ: Video Viral!

ವಿಶ್ವದಾಖಲೆ ಬರೆದ ಸ್ಮೃತಿ ಮಂದಾನ: ಕ್ಯಾಲೆಂಡರ್ ವರ್ಷದಲ್ಲಿ ODI ಕ್ರಿಕೆಟ್ ನಲ್ಲಿ 1,000 ರನ್ ಪೂರೈಸಿದ ಜಗತ್ತಿನ ಮೊದಲ ಬ್ಯಾಟರ್!

ಯಾವುದೇ ಸಂಪರ್ಕ ಕಡಿತಗೊಳ್ಳದೇ ಎಲ್ಲಾ ಇ-ಮೇಲ್ ಗಳನ್ನು Gmail ನಿಂದ Zoho Mail ಗೆ ವರ್ಗಾವಣೆ ಮಾಡುವುದು ಹೇಗೆ? ಸಿಗುವ ಸೌಲಭ್ಯಗಳೇನು? ಇಲ್ಲಿದೆ ಮಾಹಿತಿ

ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ಗಳಿವೆ; ಯಾರ ಒತ್ತಡಕ್ಕೆ ಒಳಗಾಗಿ Congress ಮರ್ಯಾದೆ ತೆಗೆಯುತ್ತಿದ್ದೀರಾ? ಚಿದಂಬರಂ ವಿರುದ್ಧ ಹೈಕಮಾಂಡ್ ಗರಂ!

SCROLL FOR NEXT