ಟೀಂ ಇಂಡಿಯಾ ನಾಯಕ ರಾಹುಲ್ ಮತ್ತಿತರರು 
ಕ್ರಿಕೆಟ್

ಆಸೀಸ್ ಸೋಲಿಸಿ ಅಪರೂಪದ ಸಾಧನೆ ಮಾಡಿದ ಭಾರತ, ಎಲ್ಲಾ ಮಾದರಿಯ ಕ್ರಿಕೆಟಿನಲ್ಲಿ ನಂಬರ್ 1 ಪಟ್ಟ!

ಮೊಹಾಲಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ ಐದು ವಿಕೆಟ್ ಗಳಿಂದ ಭರ್ಜರಿ ಗೆಲುವು ಸಾಧಿಸಿದ ಭಾರತ ಅಂತಾರಾಷ್ಟ್ರೀಯ ಕ್ರಿಕೆಟ್  ರ‍್ಯಾಕಿಂಗ್ ಪಟ್ಟಿಯಲ್ಲಿ  ಅಪರೂಪದ ಸಾಧನೆ ಮಾಡಿದೆ. ಏಕದಿನ, ಟೆಸ್ಟ್ ಹಾಗೂ ಟಿ-20 ಮಾದರಿಯಲ್ಲಿ ನಂಬರ್ 1 ಪಟ್ಟಕ್ಕೇರಿದೆ.  

ನವದೆಹಲಿ: ಮೊಹಾಲಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ ಐದು ವಿಕೆಟ್ ಗಳಿಂದ ಭರ್ಜರಿ ಗೆಲುವು ಸಾಧಿಸಿದ ಭಾರತ ಅಂತಾರಾಷ್ಟ್ರೀಯ ಕ್ರಿಕೆಟ್  ರ‍್ಯಾಕಿಂಗ್ ಪಟ್ಟಿಯಲ್ಲಿ  ಅಪರೂಪದ ಸಾಧನೆ ಮಾಡಿದೆ. ಏಕದಿನ, ಟೆಸ್ಟ್ ಹಾಗೂ ಟಿ-20 ಮಾದರಿಯಲ್ಲಿ ನಂಬರ್ 1 ಪಟ್ಟಕ್ಕೇರಿದೆ.  

ಈ ಪಂದ್ಯಕ್ಕೂ ಮೊದಲು ಭಾರತ ಟೆಸ್ಟ್ ಹಾಗೂ ಟಿ20 ಸರಣಿಯಲ್ಲಿ ನಂ.1 ಸ್ಥಾನದಲ್ಲಿತ್ತು. ಆದರೆ ಏಕದಿನ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನದ ನಡುವೆ ನಂ.1 ಪಟ್ಟಕ್ಕಾಗಿ ಪೈಪೋಟಿ ನಡೆಯುತ್ತಿತ್ತು. ಆದರೆ ಈಗ ಆಸ್ಟ್ರೇಲಿಯಾ ಮಣಿಸಿರುವ ಭಾರತ, ಈ ಮೊದಲು ನಂಬರ್ 1 ಏಕದಿನ ತಂಡವೆನಿಸಿಕೊಂಡಿದ್ದ ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿದೆ. ಈ ಮೂಲಕ ನಂಬರ್ 1 ಸ್ಥಾನಕ್ಕೇರಿದೆ. 

ಸದ್ಯ ಭಾರತ ಟಿ20 ಮಾದರಿಯಲ್ಲಿ 264 ರೇಟಿಂಗ್‌ನೊಂದಿಗೆ 1 ನೇ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್ 261 ರೇಟಿಂಗ್‌ನೊಂದಿಗೆ 2 ನೇ ಸ್ಥಾನದಲ್ಲಿದೆ. ಟೆಸ್ಟ್‌ನಲ್ಲಿ ಭಾರತ 118 ರೇಟಿಂಗ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ಕೂಡ ಅದೇ ಅಂಕಗಳನ್ನು ಹೊಂದಿದೆ ಆದರೆ ಎರಡನೇ ಸ್ಥಾನದಲ್ಲಿದೆ.

ಇನ್ನು ಏಕದಿನ ಮಾದರಿಯಲ್ಲಿ  116 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿರುವ ಭಾರತ ನಂಬರ್ 1 ಸ್ಥಾನಕ್ಕೇರಿದರೆ, ಪಾಕಿಸ್ತಾನವು 115 ರೇಟಿಂಗ್ ಪಾಯಿಂಟ್‌ಗಳೊಂದಿಗೆ 2ನೇ ಸ್ಥಾನಕ್ಕೆ ಕುಸಿದಿದೆ. ಇದು ವಿಶ್ವಕಪ್ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಆತ್ಮಸ್ಥೈರ್ಯವನ್ನು ಹೆಚ್ಚಿಸುವಲ್ಲಿ ನೆರವಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Iran ನಲ್ಲಿ ಕೊನೆಗೂ ಆಡಳಿತ ಬದಲಾವಣೆ! ಅಮೆರಿಕ, ಇಸ್ರೇಲ್ ಬಯಸಿದ್ದೇ ಒಂದು, ಆಗಿದ್ದು ಇನ್ನೊಂದು!

Op Sindoor: ವಿಶ್ವಭೂಪಟದಿಂದ ಪಾಕ್ ನಿರ್ನಾಮಕ್ಕೆ ಕೆಲವೇ ನಿಮಿಷಗಳ ಅಂತರದಲ್ಲಿದ್ದೆವು, ಆದ್ರೆ ಅವರು ತಡೆದರು...: ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ

IPL 2026: ಯಾರ್ ಮೇಲಾದ್ರೂ 5 ಸಾವಿರ ಹೂಡಿಕೆ ಮಾಡಿ ನೋಡಿ: LSG ಮಾಲೀಕರ ಕುರಿತು Mohammed Shami ಹೇಳಿಕೆ ವೈರಲ್!

ದೇಶದಲ್ಲೇ ಮೊದಲ ಬಾರಿಗೆ ಡ್ರಗ್ಸ್, ಸಾಮಾಜಿಕ–ಆರ್ಥಿಕ ಜನಗಣತಿ ಆರಂಭಿಸಿದ ಪಂಜಾಬ್: ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ

ಭಾರತದಲ್ಲಿ ಇನ್ನೂ ಎರಡು ತಿಂಗಳಿಗೆ ಆಗುವಷ್ಟು ಕಚ್ಚಾ ತೈಲ ಇದೆ, ಆದರೆ...: ಬೆಲೆ ಏರಿಕೆಗೆ ಕೇಂದ್ರ ಪೀಠಿಕೆ?

SCROLL FOR NEXT