ಕ್ರಿಕೆಟ್

ಏಷ್ಯನ್ ಗೇಮ್ಸ್ 2023 ಮಹಿಳಾ ಕ್ರಿಕೆಟ್ ಫೈನಲ್: ಶ್ರೀಲಂಕಾಗೆ ಗೆಲ್ಲಲು ಕೇವಲ 117 ರನ್ ಗುರಿ ನೀಡಿದ ಭಾರತ

Srinivasamurthy VN

ಹ್ಯಾಂಗ್ ಜೌ: ಇದೇ ಮೊದಲ ಬಾರಿಗೆ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ನಡೆಯುತ್ತಿರುವ ಮಹಿಳಾ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿರುವ ಭಾರತ ತಂಡ ಶ್ರೀಲಂಕಾಗೆ ಗೆಲ್ಲಲು ಕೇವಲ 117ರನ್ ಗಳ ಸಾಧಾರಣ ಗುರಿ ನೀಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ವನಿತೆಯರ ತಂಡ ನಿಗಧಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಕೇವಲ 116 ರನ್ ಗಳನ್ನಷ್ಟೇ ಕಲೆಹಾಕಿದೆ. ಭಾರತದ ಪರ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ (46 ರನ್, 45 ಎಸೆತ)ಮತ್ತು ಜೆಮಿಮಾ ರೋಡ್ರಿಗಸ್ (42 ರನ್, 40 ಎಸೆತ) ಅವರನ್ನು ಹೊರತು ಪಡಿಸಿದರೆ ಉಳಿದಾವ ಆಟಗಾರ್ತಿಯರೂ ಕೂಡ ಎರಡಂಕಿ ಮೊತ್ತ ದಾಟಲಿಲ್ಲ.

ಶಫಾಲಿ ವರ್ಮಾ 9 ರನ್ ಗಳಿಸಿ ಔಟಾದರೆ, ರಿಚಾ ಘೋಷ್ 9, ನಾಯಕಿ ಹರ್ಮನ್ ಪ್ರೀತ್ ಕೌರ್ 2, ಪೂಜಾ ವಸ್ತ್ರಾಕರ್ 2 ರನ್ ಗಳನ್ನು ಮಾತ್ರಗಳಿಸಿ ನಿರಾಶೆ ಮೂಡಿಸಿದರು.

ಶ್ರೀಲಂಕಾ ಪರ ಉದೇಶಿಕ ಪ್ರಬೋಧನಿ, ಸೌಗಂದಿಕಾ ಕುಮಾರಿ ಮತ್ತು ಇನೋಕಾ ರಣವೀರಾ ತಲಾ 2 ವಿಕೆಟ್ ಪಡೆದು ಮಿಂಚಿದರು. ಇದೀಗ ಶ್ರೀಲಂಕಾ ತಂಡ ಗೆಲ್ಲಲು 20 ಓವರ್ ನಲ್ಲಿ 117ರನ್ ಕಲೆಹಾಕಬೇಕಿದೆ.

SCROLL FOR NEXT