ಗ್ಲೆನ್ ಮ್ಯಾಕ್ಸ್‌ವೆಲ್ 
ಕ್ರಿಕೆಟ್

ಪಂದ್ಯದಿಂದ ನನ್ನನ್ನು ಹೊರಗಿಡಿ; RCB ನಾಯಕ ಫಾಫ್ ಡುಪ್ಲೆಸಿ ಬಳಿ ಮನವಿ ಮಾಡಿದ್ದ ಗ್ಲೆನ್ ಮ್ಯಾಕ್ಸ್‌ವೆಲ್

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರು ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ನೇ ಆವೃತ್ತಿಯಿಂದ ಅನಿರ್ದಿಷ್ಟ ಅವಧಿಗೆ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ.

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರು ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ನೇ ಆವೃತ್ತಿಯಿಂದ ಅನಿರ್ದಿಷ್ಟ ಅವಧಿಗೆ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಸೋಮವಾರ ರಾತ್ರಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ಸಿಬಿ ಸೋಲಿನ ನಂತರ ಮ್ಯಾಕ್ಸ್‌ವೆಲ್ ಈ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ.

ಕಳಪೆ ಫಾರ್ಮ್‌ನಿಂದಾಗಿ ಸಾಕಷ್ಟು ಟೀಕೆಗಳನ್ನು ಎದುರಿಸಿದ ಮ್ಯಾಕ್ಸ್‌ವೆಲ್, ಎಸ್‌ಆರ್‌ಹೆಚ್ ವಿರುದ್ಧದ ಪ್ಲೇಯಿಂಗ್ XI ನ ಭಾಗವಾಗಿರಲಿಲ್ಲ. ಮ್ಯಾಕ್ಸ್‌ವೆಲ್ ಬದಲಿಗೆ ತಂಡದಲ್ಲಿ ವಿಲ್ ಜ್ಯಾಕ್ಸ್ ಅವರಿಗೆ ಅವಕಾಶ ನೀಡಲಾಗಿತ್ತು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮ್ಯಾಕ್ಸ್‌ವೆಲ್, ಈ ಸಮಯದಲ್ಲಿ ನಾನು ಉತ್ತಮ 'ಮಾನಸಿಕ ಮತ್ತು ದೈಹಿಕ' ಸಾಮರ್ಥ್ಯ ಹೊಂದಿಲ್ಲ. ಹೀಗಾಗಿ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದೆ. ವೈಯಕ್ತಿಕವಾಗಿ ನನಗೆ ಇದು ಬಹಳ ಸುಲಭವಾದ ನಿರ್ಧಾರವಾಗಿತ್ತು ಎಂದಿದ್ದಾರೆ.

'ಕಳೆದ ಪಂದ್ಯದ ನಂತರ ನಾನು ಫಾಫ್ ಡು ಪ್ಲೆಸಿಸ್ ಮತ್ತು ತರಬೇತುದಾರರ ಬಳಿಗೆ ಹೋದೆ ಮತ್ತು ನನ್ನ ಬದಲಿಗೆ ತಂಡದಲ್ಲಿ ಬೇರೊಬ್ಬರಿಗೆ ಅವಕಾಶ ನೀಡುವಂತೆ ಹೇಳಿದೆ. ನನಗೆ ಸ್ವಲ್ಪ ಮಾನಸಿಕ ಮತ್ತು ದೈಹಿಕ ವಿರಾಮವನ್ನು ಪಡೆಯಲು ಇದು ಉತ್ತಮ ಸಮಯ ಎಂದು ನಾನು ಭಾವಿಸುತ್ತೇನೆ. ಒಂದು ವೇಳೆ ನಾನು ಯಾವುದೇ ಪಂದ್ಯದಲ್ಲಿ ಆಡಬೇಕಾದರೆ, ನಾನು ನಿಜವಾಗಿಯೂ ದೃಢವಾದ ಮಾನಸಿಕ ಸ್ಥಿತಿ ಮತ್ತು ಅತ್ಯುತ್ತಮ ದೈಹಿಕ ಸಾಮರ್ಥ್ಯದಿಂದ ಮರಳಬಹುದು' ಎಂದಿದ್ದಾರೆ.

'ನಾವು ಪವರ್‌ಪ್ಲೇ ನಂತರ ಸಾಕಷ್ಟು ದೊಡ್ಡ ಕೊರತೆಯನ್ನು ಹೊಂದಿದ್ದೇವೆ, ಇದು ಕಳೆದ ಎರಡು ಆವೃತ್ತಿಗಳಲ್ಲಿ ನನ್ನ ಶಕ್ತಿಯ ಕ್ಷೇತ್ರವಾಗಿತ್ತು. ಇದೀಗ ನಾನು ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿಲ್ಲ ಎಂದು ನನಗೆ ಅನಿಸಿತು. ಬೇರೆ ಆಟಗಾರರಿಗೆ ತಂಡದಲ್ಲಿ ಅವಕಾಶ ನೀಡಲು ಇದು ಉತ್ತಮ ಸಮಯ ಎಂದು ನಾನು ಭಾವಿಸುತ್ತೇನೆ ಮತ್ತು ಆಶಾದಾಯಕವಾಗಿ ಯಾರಾದರೂ ಆ ಸ್ಥಳವನ್ನು ತಮ್ಮದಾಗಿಸಿಕೊಳ್ಳಬಹುದು' ಎಂದು ಮ್ಯಾಕ್ಸ್‌ವೆಲ್ ತಿಳಿಸಿದ್ದು, ಎಲ್ಲಿಯವರೆಗೂ ವಿರಾಮ ತೆಗೆದುಕೊಳ್ಳಲಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿಲ್ಲ.

ಮಾನಸಿಕ ಆಯಾಸದಿಂದ ಮ್ಯಾಕ್ಸ್‌ವೆಲ್ ಆಟದಿಂದ ವಿರಾಮ ತೆಗೆದುಕೊಂಡಿರುವುದು ಇದೇ ಮೊದಲಲ್ಲ.

ಇದಕ್ಕೂ ಮೊದಲು, ಭಾರತೀಯ ಕ್ರಿಕೆಟ್ ದಂತಕಥೆ ಸುನೀಲ್ ಗವಾಸ್ಕರ್ ಅವರು ಐಪಿಎಲ್‌ನಲ್ಲಿನ ಕಳಪೆ ಪ್ರದರ್ಶನಕ್ಕಾಗಿ ಮ್ಯಾಕ್ಸ್‌ವೆಲ್ ಅವರನ್ನು ಟೀಕಿಸಿದ್ದರು. ಆಸೀಸ್ ಆಟಗಾರ ವೇಗದ ಬೌಲಿಂಗ್‌ನಲ್ಲಿ ಆಡಲು ಸಾಧ್ಯವಾಗುತ್ತಿಲ್ಲ ಎಂದಿದ್ದರು.

ಐಪಿಎಲ್ 2024ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ಎಡವಿದ್ದು, ಆಡಿರುವ 7 ಪಂದ್ಯಗಳಲ್ಲಿ ಒಂದು ಪಂದ್ಯ ಮಾತ್ರ ಗೆದ್ದಿದೆ ಮತ್ತು ಆರು ಪಂದ್ಯಗಳಲ್ಲಿ ಸತತ ಸೋಲು ಕಂಡಿದೆ. ಹೀಗಾಗಿ, ತಂಡದಲ್ಲಿ ಬದಲಾವಣೆ ಮಾಡಬೇಕೆನ್ನುವ ಕೂಗು ಕೇಳಿಬಂದಿತ್ತು.

ಅದರಂತೆ ಸೋಮವಾರ ನಡೆದ ಎಸ್‌ಆರ್‌ಎಚ್ ವಿರುದ್ಧದ ಪಂದ್ಯದಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿತ್ತು. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಮ್ಯಾಕ್ಸ್‌ವೆಲ್ ಬೆರಳಿಗೆ ಗಾಯವಾಗಿತ್ತು. ಹೀಗಾಗಿ, ಸನ್‌ರೈಸಸ್‌ ಹೈದರಾಬಾದ್ ವಿರುದ್ಧದ ಪಂದ್ಯದಿಂದ ಅವರು ಹೊರಗುಳಿದಿದ್ದರು. ಮ್ಯಾಕ್ಸ್‌ವೆಲ್ ಬದಲಿಗೆ ಲಾಕಿ ಫರ್ಗ್ಯುಸನ್ ಆಡಿದ್ದರು. ಈ ಆವೃತ್ತಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡುವಲ್ಲಿ ವಿಫಲವಾಗಿರುವ ಮೊಹಮ್ಮದ್ ಸಿರಾಜ್ ಅವರಿಗೂ ವಿಶ್ರಾಂತಿ ನೀಡಿ, ಯಶ್ ದಯಾಳ್ ಅವರನ್ನು ಆಡಿಸಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT