ಭಾರತೀಯ ಕ್ರಿಕೆಟ್ ಆಟಗಾರರು  
ಕ್ರಿಕೆಟ್

ಅವ್ಯವಸ್ಥೆಯ ಆಗರವಾದ ಅಡಿಲೇಡ್‌ ನೆಟ್ ಸೆಷನ್: ಭಾರತೀಯ ಆಟಗಾರರ ಮೇಲೆ ಪ್ರೇಕ್ಷಕರ ವೈಯಕ್ತಿಕ ನಿಂದನೆ!

ಸುಮಾರು 3,000 ಪ್ರೇಕ್ಷಕರು ಅಡಿಲೇಡ್‌ನಲ್ಲಿ ತಮ್ಮ ನೆಚ್ಚಿನ ತಾರೆಗಳು ಅಭ್ಯಾಸ ಮಾಡುವುದನ್ನು ವೀಕ್ಷಿಸಲು ಬಂದಿದ್ದರು.

ಚೆನ್ನೈ: ಬಹುಶಃ ಸಂಘಟಕರು ಇಷ್ಟೊಂದು ಜನಸಂದಣಿಯನ್ನು ನಿರೀಕ್ಷಿಸಿರಲಿಲ್ಲ. ಆಸ್ಟ್ರೇಲಿಯಾ ವಿರುದ್ಧದ ಎರಡನೇ ಹಗಲು ಮತ್ತು ರಾತ್ರಿ ಟೆಸ್ಟ್ ಪಂದ್ಯಕ್ಕೂ ಮುನ್ನ ಅಡಿಲೇಡ್‌ನಲ್ಲಿ ಭಾರತದ ನೆಟ್ ಸೆಷನ್ ಉತ್ಸವವಾಗಿ ಮಾರ್ಪಟ್ಟಿದ್ದು ನಂತರ ನಂತರ ಅವ್ಯವಸ್ಥೆಯ ಆಗರವಾಯಿತು.

ಸುಮಾರು 3,000 ಪ್ರೇಕ್ಷಕರು ಅಡಿಲೇಡ್‌ನಲ್ಲಿ ತಮ್ಮ ನೆಚ್ಚಿನ ತಾರೆಗಳು ಅಭ್ಯಾಸ ಮಾಡುವುದನ್ನು ವೀಕ್ಷಿಸಲು ಬಂದಿದ್ದರು. ವರದಿಗಳ ಪ್ರಕಾರ, ಆಟಗಾರರು ಔಟಾದಾಗ ಅಥವಾ ಚೆಂಡನ್ನು ಕಳೆದುಕೊಂಡಾಗ ಪ್ರೇಕ್ಷಕರು ನಗುತ್ತಾ ಕೀಟಲೆ ಮಾಡಲು ಪ್ರಾರಂಭಿಸಿದರು. ಮತ್ತೊಂದೆಡೆ, ಆಸ್ಟ್ರೇಲಿಯಾ ತಂಡದ ಅಭ್ಯಾಸದಲ್ಲಿ 100 ಜನರು ಪ್ರೇಕ್ಷಕರು ಇದ್ದರು.

ಕೆಲವು ಪ್ರೇಕ್ಷಕರು ಬ್ಯಾಟಿಂಗ್ ಮಾಡುವಾಗಲೂ ಸೆಲ್ಫಿ ಕೇಳುತ್ತಿದ್ದರು, ಕೆಲವರು ಪ್ರಾಕ್ಟೀಸ್ ಸ್ಥಳದಿಂದ ಫೇಸ್‌ಬುಕ್ ಲೈವ್ ಮಾಡುತ್ತಿದ್ದರು. ಪ್ರೇಕ್ಷಕರು ಕೆಲವು ಆಟಗಾರರ ಫಿಟ್ ನೆಸ್ ಬಗ್ಗೆ ಹೇಳುತ್ತಾ ವೈಯಕ್ತಿಕವಾಗಿ ಆಕ್ರಮಣ ಮಾಡಿದಂತೆ ಕಂಡುಬಂತು. ತಂಡವನ್ನು ನಿಜವಾಗಿಯೂ ಕೆರಳಿಸಿದ ಸಂಗತಿಯೆಂದರೆ, ಗದ್ದಲದ ಪ್ರೇಕ್ಷಕರು ಅವರನ್ನು ವಿಚಲಿತಗೊಳಿಸಿದರು ಮತ್ತು ಬ್ಯಾಟಿಂಗ್ ಮಾಡಲು, ಏಕಾಗ್ರತೆಯಿಂದ ಅಭ್ಯಾಸ ಮಾಡಲು ಕಷ್ಟವಾಗಿತ್ತು.

ಇದು ಸಂಪೂರ್ಣ ಅವ್ಯವಸ್ಥೆಯಾಗಿತ್ತು. ಆಸ್ಟ್ರೇಲಿಯಾದ ತರಬೇತಿ ಅವಧಿಯಲ್ಲಿ, 70-ಕ್ಕಿಂತ ಹೆಚ್ಚು ಜನರು ಬರಲಿಲ್ಲ ಆದರೆ ಭಾರತದ ಕಡೆಯಿಂದ ಸುಮಾರು 3 ಸಾವಿರ ಪ್ರೇಕ್ಷಕರಿದ್ದರು. ಇಷ್ಟೊಂದು ಸಂಖ್ಯೆಯಲ್ಲಿ ಅಭಿಮಾನಿಗಳು ಬರುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ ಎಂದು ಭಾರತೀಯ ಕ್ರಿಕೆಟ್ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಇದರ ನಂತರ ಬಿಸಿಸಿಐ ಎಲ್ಲಾ ನೆಟ್ ಸೆಷನ್‌ಗಳನ್ನು ನಿಷೇಧಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT