ಭಾರತದ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದಾಗಿನಿಂದ, ಹಿರಿಯ ಕ್ರಿಕೆಟಿಗನಿಗೆ ಭಾರತ ತಂಡಕ್ಕೆ ನೀಡಿದ ಕೊಡುಗೆಗಾಗಿ ಎಲ್ಲ ಕಡೆಗಳಿಂದಲೂ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಹೀಗಿದ್ದರೂ, ಜನರು ತಮ್ಮ ವೃತ್ತಿಜೀವನವನ್ನು ಆಚರಿಸಲಿ ಎಂದು ನಾನು ಬಯಸುವುದಿಲ್ಲ. ಕ್ರೀಡೆಯು ಎಲ್ಲ ವ್ಯಕ್ತಿಗಳಿಗಿಂತ ಮೇಲಿದೆ ಎನ್ನುತ್ತಾರೆ ಅಶ್ವಿನ್.
537 ಟೆಸ್ಟ್ ವಿಕೆಟ್‌ಗಳ ಮಾಲೀಕರಾಗಿರುವ ಅಶ್ವಿನ್, ಇಂಗ್ಲೆಂಡ್‌ನ ಮಾಜಿ ನಾಯಕರಾದ ಮೈಕೆಲ್ ಅಥರ್ಟನ್ ಮತ್ತು ನಾಸೀರ್ ಹುಸೇನ್ ಅವರೊಂದಿಗೆ ವರ್ಚುವಲ್ ಸಂಭಾಷಣೆ ನಡೆಸಿದ್ದಾರೆ. ಸದ್ಯ ಚೆನ್ನೈನಲ್ಲಿರುವ ಅಶ್ವಿನ್, ಈ ವರ್ಷದ ಜುಲೈನಲ್ಲಿ ಬಿಡುಗಡೆಯಾದ ಅವರ ಆತ್ಮಚರಿತ್ರೆ 'ಐ ಹ್ಯಾವ್ ದಿ ಸ್ಟ್ರೀಟ್ಸ್: ಎ ಕುಟ್ಟಿ ಕ್ರಿಕೆಟ್ ಸ್ಟೋರಿ' ಕುರಿತು ಮಾತನಾಡಿದ್ದಾರೆ. ನಾನು ತುಂಬಾ ಗಂಭೀರವಾಗಿರುತ್ತೇನೆ. ವಿರಾಟ್ ಕೊಹ್ಲಿ ಅವರಂತೆ ಪಂದ್ಯವನ್ನು ಆನಂದಿಸುವುದಿಲ್ಲ ಎಂದು ಜನರು ಭಾವಿಸುತ್ತಾರೆ. ಆದರೆ ಅದು ಹಾಗಲ್ಲ, ಕ್ರಿಕೆಟ್ ಆಡುವಾಗ ನಾನು ಕಳೆದುಹೋಗಿರುತ್ತೇನೆ ಎಂದಿದ್ದಾರೆ.
'ಜನರು ನಾನು ಯಾರೆಂದು ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ. ಏಕೆಂದರೆ ಬಹಳಷ್ಟು ಬಾರಿ, ಅಶ್ವಿನ್ ವಿಕೆಟ್ ಕಬಳಿಸುತ್ತಾರೆ ಮತ್ತು ವಿರಾಟ್ ಕೊಹ್ಲಿ ಸಂಭ್ರಮಿಸುತ್ತಾರೆ. ಅಶ್ವಿನ್ ಕೇವಲ ಜಿಗಿಯುತ್ತಾರೆ ಮತ್ತು ಸಾಮಾನ್ಯವಾಗಿ ಅವರು ಸಂಪೂರ್ಣವಾಗಿ ಗಂಭೀರವಾಗಿರುತ್ತಾರೆ ಎಂದೇ ನಂಬುತ್ತಾರೆ. ಅದಕ್ಕಾಗಿಯೇ ನೀವು ಯಾವಾಗಲೂ ಏಕೆ ಗಂಭೀರವಾಗಿರುತ್ತೀರಿ ಎಂದು ನನ್ನನ್ನು ಕೇಳುತ್ತಾರೆ. ಇದಕ್ಕೆ ನನ್ನ ಉತ್ತರವೇನೆಂದರೆ, ನಾನು ಎಂದಿಗೂ ಗಂಭೀರ ವ್ಯಕ್ತಿಯಲ್ಲ. ಆದರೆ, ನನ್ನ ದೇಶಕ್ಕಾಗಿ ಟೆಸ್ಟ್ ಪಂದ್ಯವನ್ನು ಗೆಲ್ಲಿಸಿಕೊಡಲು ನನ್ನ ಕೈಯಲ್ಲಿ ಬಾಲ್ ಇದೆ, ನನ್ನ ಮನಸ್ಸು ಅಂಟಿಕೊಂಡಿದೆ, ಏಕೆಂದರೆ ನಾನು ಅದೇ ಪ್ರಕ್ರಿಯೆಯಲ್ಲಿರುತ್ತೇನೆ. ಎಷ್ಟೋ ಬಾರಿ, ನಾನು ಐದು ವಿಕೆಟ್ ಪಡೆದಾಗ ನನ್ನ ಬ್ಯಾಟ್‌ನ ಬ್ಲೇಡ್‌ನ ಮೂಲಕ ಡ್ರೆಸ್ಸಿಂಗ್ ರೂಮ್‌ನಲ್ಲಿ ಅಥವಾ ಹಾಸ್ಪಿಟಾಲಿಟಿ ಬಾಕ್ಸ್‌ನಲ್ಲಿ ಕುಳಿತಿರುವ ನನ್ನ ಪತ್ನಿಯತ್ತ ಮುತ್ತಿಡುವುದನ್ನು ನೀವು ನೋಡುವುದಿಲ್ಲ. ಹಾಗಾಗಿ ವಾಸ್ತವದಲ್ಲಿ ನಾನು ಏನಾಗಿದ್ದೇನೆ ಎಂಬುದನ್ನು ಅರಿಯುವಲ್ಲಿ ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ಅದನ್ನು ಪುಸ್ತಕದಲ್ಲಿ ಹೊರತರಲು ನಾನು ಬಯಸಿದ್ದೇನೆ ಎಂದು ಹೇಳಿದ್ದಾರೆ.
ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ಶ್ರೇಷ್ಠ ಆಟಗಾರರನ್ನು ಭಾರತೀಯ ಕ್ರಿಕೆಟ್ ಪಡೆದಿದೆ. ಸಾಮಾನ್ಯವಾಗಿ ಅವರನ್ನು ಜನರು ದೇವರಂತೆ ಪೂಜಿಸುತ್ತಾರೆ. ಆದಾಗ್ಯೂ, ಕ್ರಿಕೆಟ್ ಎನ್ನುವುದು ತಂಡದ ಕ್ರೀಡೆಯಾಗಿರುವುದರಿಂದ ಇತರರನ್ನು ಬದಿಗೆ ಸರಿಸುವುದು ಸರಿಯಲ್ಲ. ಆದರೆ, ನಾನು ಯಾವಾಗಲೂ ತನ್ನದೇ ಕಥೆಯ 'ಅತ್ಯಂತ ಮೌಲ್ಯಯುತ ಆಟಗಾರ' (MVP) ನಾಗಿದ್ದೇನೆ ಎನ್ನುತ್ತಾರೆ ಅಶ್ವಿನ್.
'ಬಹಳಷ್ಟು ಜನರು ಭಾರತೀಯ ಕ್ರಿಕೆಟ್ ಬಗ್ಗೆ ಮಾತನಾಡುತ್ತಾರೆ. ಆದರೆ, ಅವರು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಬಗ್ಗೆ ಮಾತನಾಡುತ್ತಾರೆ. ಇದು ಬದಲಾಗಬೇಕು. ಅವರು ವರ್ಷಗಳಿಂದ ರೋಹಿತ್ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ. ನಾನು ಎಲ್ಲರಿಗೂ ಸಂದೇಶವೊಂದನ್ನು ನೀಡುತ್ತೇನೆ. ಸೂಪರ್ ಸ್ಟಾರ್‌ಗಳು ಮತ್ತು ಇತರ ಸೆಲೆಬ್ರಿಟಿಗಳ ಬಗ್ಗೆಯಷ್ಟೇ ಮಾತನಾಡುತ್ತಿರುವಾಗ, ಪೋಷಕ ಪಾತ್ರಗಳನ್ನು ನಿರ್ವಹಿಸುತ್ತಿರುವವರ ಕೊಡುಗೆಗಳನ್ನು ನಾವು ಕಡೆಗಣಿಸಬಾರದು. ಗುಂಪು ಕ್ರೀಡೆಯಲ್ಲಿ ಮುಖ್ಯ ತಾರೆಗಳು ಮಾತ್ರ ಮುಖ್ಯ ಎಂಬ ಕಲ್ಪನೆಯನ್ನು ತೆಗೆಯಬೇಕು. ಬದಲಾಗಿ, ತಂಡದ ಭಾಗವಾಗಿರುವ ಪ್ರತಿಯೊಬ್ಬ ವ್ಯಕ್ತಿಯು ನಿರ್ಣಾಯಕ ಪಾತ್ರ ವಹಿಸುತ್ತಾನೆ. ಜನರು ಇದನ್ನು ಅರ್ಥೈಸಬೇಕು. ನನಗೆ ನಾನು ಯಾವಾಗಲೂ ಎಂವಿಪಿ ಮತ್ತು ನನ್ನ ಕ್ರಿಕೆಟ್‌ನ ಎಂವಿಪಿ ನಾನಾಗಿರುತ್ತೇನೆ ಎಂದು ಹೇಳಿದರು.