ದ್ವಿಶತಕ ಸಂಭ್ರಮದಲ್ಲಿ ಜೈಸ್ವಾಲ್
ದ್ವಿಶತಕ ಸಂಭ್ರಮದಲ್ಲಿ ಜೈಸ್ವಾಲ್ 
ಕ್ರಿಕೆಟ್

3ನೇ ಟೆಸ್ಟ್: 430 ರನ್ ಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್, ಇಂಗ್ಲೆಂಡ್ ಗೆ 557 ರನ್ ಬೃಹತ್ ಗುರಿ

Srinivasamurthy VN

ರಾಜ್ ಕೋಟ್: ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಭಾರತ ಭರ್ಜರಿ ಬ್ಯಾಟಿಂಗ್ ನಡೆಸಿರುವ ಭಾರತ ತಂಡ 430 ರನ್ ಗೆ 2ನೇ ಇನ್ನಿಂಗ್ಸ್ ಅನ್ನು ಡಿಕ್ಲೇರ್ ಮಾಡಿಕೊಂಡಿದ್ದು, ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು 557 ರನ್ ಬೃಹತ್ ಗುರಿ ನೀಡಿದೆ.

3ನೇ ದಿನದಾಟದ ಅಂತ್ಯಕ್ಕೆ 322 ರನ್‌ ಮುನ್ನಡೆಯೊಂದಿಗೆ ನಾಲ್ಕನೇ ದಿನದ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡಕ್ಕೆ ಇಂಗ್ಲೆಂಡ್ ಆರಂಭಿಕ ಆಘಾತ ನೀಡಿತು. ನಿನ್ನೆ ನೈಟ್ ವಾಚ್ ಮನ್ ಆಗಿ ಬ್ಯಾಟಿಂಗ್ ಗೆ ಇಳಿದಿದ್ದ ಕುಲದೀಪ್ ಯಾದವ್ 27 ರನ್ ಗಳಿಸಿ ಇಂದು ರೆಹಾನ್ ಅಹ್ಮದ್ ಗೆ ವಿಕೆಟ್ ಒಪ್ಪಿಸಿದರು.

ಬಳಿಕ ಜೈಸ್ವಾಲ್ ಜೊತೆಗೂಡಿದ ಸರ್ಫರಾಜ್ ಖಾನ್ ಎರಡನೇ ಇನ್ನಿಂಗ್ಸ್ ನಲ್ಲೂ ಅರ್ಧಶತಕ ಸಿಡಿಸಿ ಗಮನ ಸೆಳೆದರು. 72 ಎಸೆತಗಳನ್ನು ಎದುರಿಸಿದ ಸರ್ಫರಾಜ್ 3 ಸಿಕ್ಸರ್ ಮತ್ತು 6 ಬೌಂಡರಿಗಳ ನೆರವಿನಿಂದ 68 ರನ್ ಗಳಿದರೆ, ಮತ್ತೊಂದು ಬದಿಯಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಜೈಸ್ವಾಲ್ 236 ಎಸೆತಗಳಲ್ಲಿ 12 ಸಿಕ್ಸರ್ ಮತ್ತು 14 ಬೌಂಡರಿಗಳ ನೆರವಿನಿಂದ 214 ರನ್ ಗಳಿಸಿದರು.

ಈ ಹಂತದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಇನ್ನಿಂಗ್ಸ್ ಡಿಕ್ಲೇರ್ ಮಾಡಿ ಇಂಗ್ಲೆಂಡ್ ತಂಡಕ್ಕೆ 557 ರನ್ ಗಳ ಬೃಹತ್ ಗುರಿ ನೀಡಿದರು.

SCROLL FOR NEXT